ಕಾವ್ಯಯಾನ
ಹೌದು ; ನಿನಗಾಗಿ… ನಾಗರಾಜ ಹರಪನಹಳ್ಳಿ ನೀ ಮನೆಯೊಳಗೆ ಹೋದ ಮೇಲೆ ನಾವಾಡಿದ ಮಾತುಗಳನ್ನೇ ನೆನಪಿಸಿಕೊಳ್ಳುತ್ತಿದ್ದೆ…. ಎಷ್ಟೊಂದು ಕನಸುಗಳು.. ನೂರಾರು ಬಯಕೆಗಳು ಸಾವಿರಾರು ರೆಕ್ಕೆ ಕಟ್ಟಿಕೊಂಡು ಹಾಡುವ, ಹಾರುವ ಮನಸುಗಳು ಒಂದೊಂದು ಮಾತಿಗೂ ಸಹಿ ಸವಿ ನೆನಪು ಪ್ರತಿಮಾತು ಒಂದೊಂದು ವರ್ಷ ನಮ್ಮ ಆಯಸ್ಸು ಹೆಚ್ಚಿ ಅದೇ ಕಾಲಕ್ಕೆ ನಾವು ಯುವ ಜೋಡಿಗಳಾಗುವ ಹುಮ್ಮಸ್ಸು … ಬರೆಯುವ ,ಓದುವ ಹೆಬ್ಬಯಕೆ ಜೊತೆಗೊಂದಿಷ್ಟು ಪ್ರೇಮ ಬದುಕಿಗೆ ಉಸಿರಿಗೂ ಈಗ ಕನಸಿನ ಕಾಲ ಬಂಧನವೂ ಬಿಡುಗಡೆಯೂ ಏಕಕಾಲಕ್ಕೆ ಇನ್ನೂ ಕಾಯುವುದೋ […]
ಕಾವ್ಯಯಾನ
ಸಾಹಿತ್ಯ ಶ್ವೇತಾ ಮಂಡ್ಯ ಸಾಹಿತ್ಯ, ಒಳಿತ ಉಣಿಸಿ ಕೆಡುಕ ಅಳಿಸಿ ಮನವ ಅರಳಿಸಿ ಸರ್ವರ ಹಿತ ಬಯಸುವ ಸಾಹಿತ್ಯ; ಅಂತ:ಕರಣವ ತಟ್ಟಿ ಮಾನವೀಯತೆಯ ಮುಟ್ಟಿ ಕರ್ತವ್ಯಪ್ರಜ್ಞೆಯ ಎಚ್ಚರಿಸಿ ಬದುಕಿನುದ್ದ ದಾರಿದೀಪವಾಗುವ ಸಾಹಿತ್ಯ, ಸರ್ವಜನ ಸರ್ವ ಭಾವಗಳ ಶುದ್ದೀಕರಿಸಿ ಮನುಕುಲದ ಕಲ್ಮಶಗಳ ತೊಳೆಯುವ ಸಾಹಿತ್ಯ; ನಿನ್ನ ಮೆಚ್ಚಿ ನಿನ್ನಪ್ಪಿ ಕೊಂಡವರೆಲ್ಲಾ ನಡೆಯುತ್ತಿದ್ದರೆ ನಿನ್ನಾಶಯದಂತೆಯೇ ಬದುಕುತ್ತಿದ್ದರೆ ತಾವು ಬರೆಯುವಂತೆ…..!!! ********
ಕಾವ್ಯಯಾನ
ನಮ್ಮ ಅಂತರಂಗ ವೀಣಾ ರಮೇಶ್ ಮೌನದಲಿ ಅದೆಷ್ಟೋ ಮಾತುಗಳನು ಕಟ್ಟಿ ಹಾಕಿದ್ದೇನೆ ಗೆಳತಿ ಏಕಾಂತದಲ್ಲಿ ಒಂದಷ್ಟು ಪದಗಳಿಗೆ ಮೌನದಲ್ಲೆ ತಿವಿದಿದ್ದೇನೆ ಗೆಳತಿ ಕಣ್ಣುಗಳು ಹೊಳೆಯಾಗಿವೆ ಹರಿದು ಬಿಡಲೆ ದೋಣಿ ನಿನ್ನ ನೆನಪಿನ ಹುಟ್ಟು ಹಾಕಿ ಉಸಿರು ಕಟ್ಟಿದೆ ಪ್ರೀತಿ ಎದೆಯ ಪಂಜರದಲಿ, ಉಸಿರು ಬಿಡಲು ತತ್ವಾರ ಎದೆಯ ಬಡಿತವೊಂದೇ ಉಳಿದಿದೆ ಮೌನ ಪರದೆಯ ಹಿಂದೆ ನಿನ್ನ ತುಂಟ ನಗು ಅಣಕಿಸುತ್ತಿದೆ ಈ ಕತ್ತಲೆಯ ನೀರಸ ಮೌನ ಒಂದಷ್ಟು ನಕ್ಷತ್ರಗಳ ನುಂಗ ಬಾರದೆ ಒಂದು ಸಿಹಿಮುತ್ತು, ಒಂದು ಸಿಹಿ […]
ಕಾವ್ಯಯಾನ
ಕಾಡಿಗೆಯ ಹೆಜ್ಜೆ ಪೂರ್ಣಿಮಾ ಸುರೇಶ್ ಹುಣ್ಣಿಮೆಯಂತಹ ಹೆಣ್ಣೊಂದು ಶುಕ್ಲ-ಕೃಷ್ಣ ಪಕ್ಷಗಳಲಿ ಹೊರಳಿ ತುಸುತುಸುವೇ ಅರಳಿ ಒಂದಿಷ್ಟು ಬಾಡಿ,ಕರಗಿ ಮತ್ತೆ ಹುಡುಹುಡುಕಿ ಅಮಾವಾಸ್ಯೆಯಂತಹ ಗಂಡನ್ನು ಪ್ರೇಮಿಸಿದಳು! ಕಪ್ಪು- ಎಲ್ಲಿರಿಸುವೆ ಕುಹಕಕೆ ಉತ್ತರಿಸುವಂತೆ ಬಚ್ಚಿಟ್ಟುಕೊಂಡಳು ಕಣ್ಣೊಳಗೆ ಅವನನ್ನು ಕಾಡಿಗೆಯಾಗಿಸಿ! ಅವನೀಗ ಅವಳ ನಗುವಿಗೆ ನೀಲ ಆಗಸವಾಗುತ್ತಾನೆ. ಅವಳ ನೋವಿಗೆ ಕರಿನೀರಾಗಿ ಧುಮುಕಿ ಜಲಪಾತವಾಗುತ್ತಾನೆ ಕಡಲಾಗಿ ಸುಯ್ಲಿಟ್ಟು ಆವಿಯಾಗಿ ಮಳೆಯಾಗಿ ಅವಳ ತೋಯಿಸುತ್ತಾನೆ. ಜಗಕೆ ಕಾಣುವ ಕಣ್ಣಿನ ಬೆಳಕು, ಮೊರೆವ ಕಡಲಲೆಯ ಸುಯ್ಲು ಸುರಿವ ಮಳೆ ಹನಿಗಳು ಅರ್ಥವಾಗುವುದೇ ಇಲ್ಲ. *******
ಕಾವ್ಯಯಾನ
ಬೋನ್ಸಾಯ್. ಶಶಿಕಲಾ ವೀ ಹುಡೇದ. ಈ ಮಣ್ಣ ಕಣಕಣದ ಶಕ್ತಿಯೆಲ್ಲವೂ ನನ್ನ ಒಡಲಾಳದಲಿ ಮೈಮನಗಳಲಿ ವಸಂತನ ಪ್ರೀತಿಯ ಗಾಯದ ಗುರುತುಗಳು ಒನಪಿಲ್ಲದ ವೈಯ್ಯಾರದಲಿ ಒಡ್ಡು ಮುರಿಯುವ ಗಿಡ್ಡ ಮೈ ನೆತ್ತರೆಲ್ಲವೂ ಹರಿತ್ತಾಗಿ ಎಲೆಎಲೆಯೂ ಮಿಂಚು ಚಳಿಗಾಳಿಗೆ ಅದರುವ ಮೈ ನಾನು ಬದುಕಿರುವೆನೆಂಬುದಕೆ ಪುರಾವೆ ಬುಡದಡಿಯಲಿ ತಟ್ಟೆಯಲಿ ನಾಕೇ ನಾಕಿಂಚಿನ ನೆಲವೇ ಸಾಕ್ಷಿ ನಿಡುಸುಯ್ಯುವ ನನ್ನ ಪ್ರತಿ ಉಸುರಿಗೆ ನನ್ನ ಸುತ್ತಲೂ ಹೆಣೆದಿರುವ ನನ್ನದೇ ಬೇರುಗಳು ಶೋಕಿಸುವ ಬಿಳಲುಗಳು ಎಂಟ್ಹತ್ತು ಎಲೆಗಳು ಬೋನ್ಸಾಯ್ ಹೆಸರಲಿ ಕುಬ್ಜ ಬದುಕು ವರುಷಗಳುರುಳಿದರೂ […]
ಕಾವ್ಯಯಾನ
ಬಾರಯ್ಯ ಸಂಭವಿಸು ಮದ್ದೂರು ಮಧುಸೂದನ್ ಕೇಡುಗಾಲಕೆ ನಾಯಿ ಮೊಟ್ಟೆ ಇಕ್ಕಿದೆ ಮೊಟ್ಟೆ ಇಕ್ಕಿದ್ದು ದಿಟವೇ ? ಪ್ರಶ್ನಿಸುವ ಬಾಯಿಗಳಿಗೆ ಈಗಾಗಲೇ ಕರ್ಪ್ಯೂ ಜಾರಿಯಾಗಿದೆ ಹುತ್ತವೇ ಹಾವನ್ನು ನುಂಗುವ ದುರಿತ ಕಾಲವಿದು ಭುಸಗುಡುವ ಬಾಯಿಗೆ ಬಾಂಬಿಕ್ಕುವ ಭಯ ಚಾಲು ಇದೆ ಬಣ್ಣ ಬಣ್ಣದ ಪ್ರಣಾಳಿಕೆಗಳೆಂಬ ಟಿಕಳಿಗಳನ್ನು ಈಗಾಗಲೇ ಕುಂಡಿ ಮೇಲೆ ಅಂಟಿಸಿಯಾಗಿದೆ ಶಬ್ದಕೆ ನಾಚಿಕೆಯಾಗುವಷ್ಟು ಮೈಕಾಸುರ ಅಬ್ಬರಿಸುತ್ತಿದ್ದಾನೆ ಕಾಶ್ಮೀರದೀ ಕನ್ಯಾಕುಮಾರಿವರೆಗೆ ಚಾಲ್ತಿಯಲ್ಲಿದೆ. ಸಗಣಿ ತಿಂದವರ ಭಕ್ತಿಯ ಮಾರಾಟ ಜೋರಿದೆ ಕಾವಿ ಮರೆಯಲಿ ತ್ರಿಶೂಲಗಳಿಗೂ ನಾಚಿಕೆ ಸಂಭವಿಸಿದೆ ಪ್ರಜಾಪ್ರಭುತ್ವದ ಸಿಂಹಾಸನಕೆ […]
ಕಾವ್ಯಯಾನ
ಮೌನಗೀತೆ ವಿಶಾಲಾ ಆರಾಧ್ಯ ನೀನಂದು ಬಳಿ ಸರಿದು ಒಲವಿಂದ ನಗು ತಂದು ಬೀಸುವ ಗಾಳಿಯೊಲು ಹಿತವೆನಿಸಿದೇ ನಾನದನು ಹೇಳದಲೆ ಗುಟ್ಟಾಗಿ ಬದಿಗಿಟ್ಟು ಎದೆಯ ಗೂಡಲಿ ಒಂದು ಗುಡಿ ಮಾಡಿದೆ ಗುಡಿಯ ಗರ್ಭದಿ ಅಲ್ಲಿ ಮೂರುತಿಯು ನೀನಾದೆ ಕಣ್ಣ ಭಕುತಿಗೆ ತಾನೇ ಪ್ರತಿಧ್ವನಿಸಿದೆ ವನವೆಲ್ಲಾ ಓಡಾಡಿ ಪತ್ರೆಯದು ಸಿಗದಾಗಿ ಮನದೊಲವ ಪತ್ರೆ ಯನೇ ನಿನಗಿರಿಸಿ ನೀನಾರೋ ನಾನಾರೋ ಒಂದು ನೋಟದಿ ಒಲಿದು ಹೃದಯದಂಗಳವೆಲ್ಲ ಬೆಳಕಾಗಿದೆ ಮತ್ತೊಮ್ಮೆ ನೀ ಸುಳಿದು ಮನದ ಭಾವವ ಉಲಿದು ಚಿತ್ತದಲಿ ದಿಟವನ್ನು ಅನುಗೊಳಿಸಿಡು || […]
ಕಾವ್ಯಯಾನ
ಗಝಲ್ ಹೇಮಗಂಗಾ ಸಮ ಸಮಾಜದ ಭವ್ಯ ಮಂಟಪಕೆ ಬುನಾದಿಯಾದವರು ನೀವು ತಮ ತೊಡೆದು ಅಜ್ಞಾನಿಗಳ ಮನ ಬೆಳಗಿಸಿದವರು ನೀವು ಸೃಷ್ಟಿಯಲ್ಲಿರದ ಮೇಲು ಕೀಳೆಂಬ ದೃಷ್ಟಿ ಬೇಕೇಕೆ ಈ ಜಗದಿ? ಅಸ್ಪೃಶ್ಯತೆಯ ಪಿಡುಗ ಹೊಸಕಲು ದಾರಿ ತೋರಿದವರು ನೀವು ಸಮಾನತೆ ಎಂಬುದು ಉಳಿಯಬಾರದು ಬರಿಯ ನಿಘಂಟಿನಲ್ಲಿ ಶೋಷಿತರ ಅಡಗಿಹೋದ ದನಿಗೆ ಕೊರಳಾದವರು ನೀವು ನೆನೆವೆವು ನಿಮ್ಮ ನವರೂಪ ತಳೆದ ಸಂವಿಧಾನದ ಶಿಲ್ಪಿಯೆಂದು ಭವಿಷ್ಯದ ಪುಟಪುಟದಿ ಹೊಸ ಭಾಷ್ಯ ಬರೆದವರು ನೀವು ಭೇದಭಾವವಿಲ್ಲ ಸಾವಿಗೆ ಎಲ್ಲರೊಂದೇ ಮರಳಿ ಮಣ್ಣ ಸೇರಿರೆ […]
ಕಾವ್ಯಯಾನ
ನಿಜ ಜಗಕೆ ಧಾವಂತವಿಲ್ಲ… ದೇವಯಾನಿ ಧಾವಂತವಿರಲಿಲ್ಲ ಬೆಳಗಿಗೆ ಈ ಮೊದಲಿನಿಂದಲೂ ತನ್ನಷ್ಟಕ್ಕೆ ತಾನೇ ಮೂಡುವ ಸೂರ್ಯ ಚೆಂಬೆಳಕ ಚೆಲ್ಲುವುದಕ್ಕೆ ಚುರುಗುಟ್ಟಿಸುವ ಬಿಸಿಲಹೊಗೆ ಚಿಮ್ಮಿಸಲು ಗಡಿಯಾರ ಬೇಕಿರಲೇ ಇಲ್ಲ ಹಕ್ಕಿ ಚಿಲಿಪಿಲಿಯೂ ಹೂ ಹಣ್ಣುಗಳೂ ಎಲ್ಲವೂ ಕಾಯುತ್ತಿದ್ದುದು ಸೂರ್ಯ ತೇಜದ ಗಡಿಯಾರ ತಾನೆ? ಋತುವುರುಳಿ ಋತುವಾಗಮಿಸಿ ನಗುವ ವಸುಂಧರೆಗೆ ಆಗಾಗ ಹೊನ್ನ ಹೊದಿಕೆ , ಶ್ವೇತ ಚಾದರ ಮಳೆಹನಿಯ ತೋರಣ ಎಲ್ಲಕೂ ರವಿಕಿರಣವೇ ಕಾರಣ ಈಗಲೀಗೀಗ ಗಡಿಯಾರದ ಮುಳ್ಳುಗಳನೂ ಮೀರಿಸಿದ್ದಾಯ್ತು ಹುಲುಮಾನವ ಹಾರಾಟ ,ಧಾವಂತ ನಡೆಯದೆಲೆ ಗುರಿ ಸೇರುವ […]
ಕಾವ್ಯಯಾನ
ಸಂವಿಧಾನ ಶಿಲ್ಪಿ ತೇಜಾವತಿ ಹೆಚ್. ಡಿ ರಾಮಜಿ ಭೀಮಾಬಾಯಿಯ ಹದಿನಾಲ್ಕನೆಯ ಪುತ್ರರತ್ನವಾಗಿ ಬೆಳಗುಬೈಗು ಧೋಹೆ ರಾಮಾಯಣ ಮಹಾಭಾರತ ಸಂಸ್ಕಾರವಾಗಿ ಹೋದಲ್ಲೆಲ್ಲಾ ಅಸ್ಪೃಶ್ಯತೆಯ ಬಿಸಿಯನ್ನೇ ನೀನುಂಡೆ ಸಹಪಾಠಿಗಳೆದುರು ದಲಿತನೆಂದು ಅವಮಾನಕ್ಕೀಡಾದೆ! ಫೆಂಡೆಸೆ ಅಂಬೇಡ್ಕರರ ಪ್ರೀತಿಯ ತುತ್ತಿಗೆ ಪಾತ್ರರಾಗಿ ಗುರುಗಳ ಕೈಯಲಿ ಭೀಮರಾವ್ ಅಂಬೇಡ್ಕರ್ ಆಗಿ ಅಸ್ಪೃಶ್ಯರ ವರ್ಗದಲ್ಲೇ ಮೊದಲು ಸನ್ಮಾನಕ್ಕೆ ಪಾತ್ರನಾದೆ ಭಗವಾನ್ ಬುದ್ಧನ ಚರಿತ್ರೆಯ ಹೊತ್ತಗೆಗೆ ಆಕರ್ಷಿತನಾದೆ ! ಹೆಜ್ಜೆ ಹೆಜ್ಜೆಗೂ ತಿರಸ್ಕಾರದ ಉರಿಯಲ್ಲಿ ಹೊಗೆಯಾಗಿ ಪಣತೊಟ್ಟೆ ದಲಿತವರ್ಗದವರ ಪಾಲಿಗೆ ಜಾಗೃತಿಯಾಗಿ ಬಹಿಷ್ಕೃತ ಭಾರತ ಪತ್ರಿಕೆಗೆ ಸಾಮಾಜಿಕ […]