ಹೌದು ; ನಿನಗಾಗಿ…
ನಾಗರಾಜ ಹರಪನಹಳ್ಳಿ
ನೀ ಮನೆಯೊಳಗೆ ಹೋದ ಮೇಲೆ ನಾವಾಡಿದ ಮಾತುಗಳನ್ನೇ ನೆನಪಿಸಿಕೊಳ್ಳುತ್ತಿದ್ದೆ….
ಎಷ್ಟೊಂದು ಕನಸುಗಳು..
ನೂರಾರು ಬಯಕೆಗಳು
ಸಾವಿರಾರು ರೆಕ್ಕೆ ಕಟ್ಟಿಕೊಂಡು ಹಾಡುವ, ಹಾರುವ ಮನಸುಗಳು
ಒಂದೊಂದು ಮಾತಿಗೂ
ಸಹಿ ಸವಿ ನೆನಪು
ಪ್ರತಿಮಾತು ಒಂದೊಂದು ವರ್ಷ ನಮ್ಮ ಆಯಸ್ಸು ಹೆಚ್ಚಿ
ಅದೇ ಕಾಲಕ್ಕೆ ನಾವು ಯುವ ಜೋಡಿಗಳಾಗುವ
ಹುಮ್ಮಸ್ಸು …
ಬರೆಯುವ ,ಓದುವ ಹೆಬ್ಬಯಕೆ
ಜೊತೆಗೊಂದಿಷ್ಟು ಪ್ರೇಮ
ಬದುಕಿಗೆ
ಉಸಿರಿಗೂ ಈಗ ಕನಸಿನ ಕಾಲ
ಬಂಧನವೂ ಬಿಡುಗಡೆಯೂ
ಏಕಕಾಲಕ್ಕೆ
ಇನ್ನೂ ಕಾಯುವುದೋ
ಅನಿವಾರ್ಯ ಸೊಗಸು
ಬೆಳಗು ಮಧ್ಯಾಹ್ನ ಅಪರಾಹ್ನ ಇಳಿಸಂಜೆ, ಮುಸ್ಸಂಜೆ ಗೋಧೂಳಿ ಸಮಯಗಳ
ಬೆಸೆದ ಬೆಸುಗೆಯ ಪ್ರೇಮ
ಇನ್ನೇನು ಈ ಬದುಕಿಗೆ
ಮುದ್ದು ; ಬಂದಾಯಿತು
ಇನಿ ಇನಿಯ ರೋಮಾಂಚನಕೆ
ಹೊಸ ಭಾಷ್ಯ ಬರೆದಾಯಿತು
ತೇರಾ ಸಹರಾ ಮಿಲ್ಗಯಾ
ಯೇ ಜಿಂದಗಿ ಗಲೇ ಲಗ್ಜಾ
ಯೇ ಜಿಂದಗಿ ಗಲೇ ಲಗ್ಝಾ …
******