ಕಾವ್ಯಯಾನ
ಕೊರೊನ ಕಾಲದಲ್ಲಿ… ಶ್ವೇತಾ ಎಂ ಯು. ಕರೋನಾ ಕಾಲದಲ್ಲಿ ಕೂತುಂಡು ಮೈ ಭಾರ ಹೆಚ್ಚಿಸಿದವರ ನಡುವೆ ದುಡಿಮೆಯಿಲ್ಲದೆ ಜೀವಭಯದಿಂದ ಬದುಕೊ ಹಠವು ನಾಳೆ ಹೇಗೆಂದು ಸೊರಗಿದವರು ಅನಾಯಾಸವಾಗಿ ಸಿಕ್ಕ ರಜೆಗೆ ಹಾಯಾಗಿ ಪ್ರವಾಸ ಮಾಡಲಾಗದೆ ಮರುಗುತಿರುವ ಮಂದಿಯ ನಡುವೆ ತವರ ಸೇರಿಕೊಳ್ಳಲು ಉಟ್ಟ ಬಟ್ಟೆಯಲಿ ಬರಿಗಾಲಲ್ಲಿ ನಡೆದು ಬೀದಿ ಪಾಲಾದವರು ಚೆಂದ ಸೀರೆಯುಟ್ಟು ತುಟಿಗೊಂದಿಷ್ಟು ಹೆಚ್ಚೇ ರಂಗು ಬಳಿದ ಲಲನೆಯರು ರಾಜಕೀಯ ಭವಿಷ್ಯವು ಲೆಕ್ಕಾಚಾರವು ಸಹಾಯ ಹಸ್ತ ಚಾಚಿ ತೆಗೆದ ಸೆಲ್ಫಿಗೆ ನಗುವ ಚೆಲ್ಲಿ, ಕೈ ಚಾಚಿದ […]
ಕಾವ್ಯಯಾನ
ಗಝಲ್ ಹೇಮಗಂಗಾ ಕೊರೋನಾ ಕನಸುಗಳ ಕಮರಿಸಿದೆ ಮರಳಿ ಊರ ಸೇರುವುದು ಹೇಗೆ ? ಹಾಳು ಸುರಿವ ಬೀದಿ ಮಸಣವಾಗಿದೆ ಮರಳಿ ಊರ ಸೇರುವುದು ಹೇಗೆ ? ಶಾಂತವಾಗಿ ಹರಿಯುತ್ತಿದ್ದ ಬಾಳಕಡಲಿನಲಿ ಎಣಿಸದ ಉಬ್ಬರವಿಳಿತ ಇರುವ ನೆಲೆ ಜೀವಗಳ ನಲುಗಿಸಿದೆ ಮರಳಿ ಊರ ಸೇರುವುದು ಹೇಗೆ ? ದುಡಿಮೆ ಆದಾಯವಿಲ್ಲದ ಬದುಕು ನರಕಸದೃಶವಲ್ಲದೇ ಮತ್ತೇನು ? ತಿನ್ನುವ ಅನ್ನಕೂ ತತ್ವಾರವಾಗಿದೆ ಮರಳಿ ಊರ ಸೇರುವುದು ಹೇಗೆ ? ಅನುಕಂಪವಿಲ್ಲದ ಸಾವು ಹಗಲಲ್ಲೂ ಭೀತಿಯ ಕಾರಿರುಳ ಹರಡಿದೆ ಬೆದರಿದ ಮನ […]
ಕಾವ್ಯಯಾನ
ಗಝಲ್ ಸಹದೇವ ಯರಗೊಪ್ಪ ಬದುಕಿಗೆ ಅರ್ಥ ಕಲ್ಪಿಸಲು ಉಲಿದೆ ನೀ ಬರಲೇ ಇಲ್ಲ ಒಲವಿಗೆ ಬಲವ ತುಂಬಲು ಕೂಗಿದೆ ನೀ ಬರಲೇ ಇಲ್ಲ ಬೆವರಿನ ಅಂಬಲಿ ಉಂಡು ಒಡಲ ಹಂಬಲ ತಣಿಸುವೆ ಬಾ ಪ್ರೇಮದ ಎಲ್ಲೆ ಮೀರಲು ಗೋಗರೆದೆ ನೀ ಬರಲೇ ಇಲ್ಲ ಇರುಳ ಕಾಲುದಾರಿ ಕತ್ತಲು ಮೆತ್ತಿ ಮೈ ಮುರಿಯುತಿದೆ ಭಾವನೆಗಳ ಬೆಳಕಲಿ ಒಂದಾಗಲು ಕರೆದೆ ನೀ ಬರಲೇ ಇಲ್ಲ ಮದಿರೆಯಲಿ ಅಧರ ಕಳಚಿ ನೂರು ನವಿಲು ಕುಣಿದಂತಾಗಿದೆ ಭಾರವಾದ ತನು ಹಗುರುಗೊಳಿಸಲು ಕೈ ಚಾಚಿದೆ […]
ಕಾವ್ಯಯಾನ
ಗಝಲ್ ಈರಪ್ಪ ಬಿಜಲಿ ಕಗ್ಗೊಲೆಯಾದ ಕನಸುಗಳನು ಗಂಟುಕಟ್ಟಿ ಹೊತ್ತುಕೊಂಡು ನಡೆದಿದ್ದೇವೆ ಹತ್ಯೆಯಾದ ಮನಸುಗಳನು ವಸ್ತ್ರದಲಿ ಸುತ್ತಿಕೊಂಡು ನಡೆದಿದ್ದೇವೆ ।। ವಿಧಿಯಾಟಕೆ ಬದುಕು ಬಲಿಯಾಗಿ ಕೊನೆಯಾದಂತೆ ಕಾಣುತಿದೆ ಬೂಟಾಟಿಕೆ ಮಾತಿಗೆ ಮರುಳಾಗಿ ಬಾಳಬಂಡಿ ಹತ್ತಿಕೊಂಡು ನಡೆದಿದ್ದೇವೆ ।। ಶ್ರಮಿಕರು ಸತ್ತರು ನೆತ್ತರು ಬೀದಿಬೀದಿಗೆಲ್ಲ ನದಿಯಾಗಿ ಹರಿದಿದೆ ಧನಿಕರು ಮೂಗಿಗೆ ಸವರಿದ ತುಪ್ಪವನು ಮೆತ್ತಿಕೊಂಡು ನಡೆದಿದ್ದೇವೆ ।। ಹೊತ್ತೊತ್ತಿಗೂ ಅನ್ನಆಹಾರ ನೀರಿಲ್ಲದೇ ಕ್ಷಣಕ್ಷಣವು ಬಳಲಿದೇವು ಉಸಿರಳಿವ ಮುನ್ನ ಗೂಡುನೆನೆದು ಮನೆ ಸೇರುವಾಸೆ ಕಟ್ಟಿಕೊಂಡು ನಡೆದಿದ್ದೇವೆ।। ಬೆಂದುಬೆಂಡಾದ ಜೀವಿಗಳ ಮೊಗದಲಿ ಬಿಜಲಿ […]
ಕಾವ್ಯಯಾನ
‘ಒಲವ ವಿಜ್ಞಾಪನೆ ವಸುಂಧರಾ ಕದಲೂರು ಹೀಗೆ…ಮಾತು ಮಾತಿಗೂ ಮಾರುತ್ತರ ಬೇಡಎನ್ನವೆಯಲ್ಲಾ ನನ್ನ ಸೋಗೆಮಾತೇ ಆಡದಲೆ ನಾ ನಿನಗೆಅರ್ಥ ಮಾಡಿಸುವುದು ಹೇಗೆ ಚೆಂದದಲಿ ಮಾತನಾಡದೆಬಿಮ್ಮನೆ ಬಿಗುಮಾನದಲಿನೀ ನಿನ್ನ ಪಾಡಿಗೆ, ನಾ ನನ್ನಷ್ಟಕೆಇರಲೇನು ಸೊಗಸು ಹೇಳು ಮುನಿಸು ಮೋಡ ಕರಗಿಸೋನೆ ಸುರಿದು ಕುದಿ ಮನಸುತಂಪಾಗಿ, ಹಸಿರು ಚಿಗುರಿತೆನೆ ತುಂಬಿ ಬಾಗುದಿರಲೇನು ಚೆಂದ ಮೌನಕ್ಕೂ ಬೇಸರ ಬಂತೀಗಮನಸು ಸೋಲುತಿದೆ ಬಾ ಬೇಗಈ ಬಾಳಿನಾಚೆ ಇನ್ನೇನಿದೆನಾನಿನಗೆ ನೀನನಗೆಂದು ಒಲವಾಗಿದೆ *****
ಕಾವ್ಯಯಾನ
ಗಝಲ್ ಹೇಮಗಂಗಾ ಲೌಕಿಕ ಸುಖಗಳು ತೃಣಸಮಾನವೆಂದು ಹೊರಟವಳು ನೀನು ಎಲ್ಲ ತ್ಯಜಿಸಿ ವೈರಾಗ್ಯವನೇ ಆಭರಣದಂತೆ ಧರಿಸಿದವಳು ನೀನು ಮೋಹಿಸಿದ ಕೌಶಿಕನೊಡನೆ ಬಾಳು ಮುಳ್ಳಿನ ಮಂಚವಾಯಿತು ಅರಮನೆಯ ವೈಭೋಗದತ್ತ ಚಿತ್ತವಿಡದೇ ನಡೆದವಳು ನೀನು ಹಸಿವೆ, ನಿದಿರೆ, ಅಂಜಿಕೆಗಳಾವುವೂ ಕಾಡಲಿಲ್ಲ ನಿನ್ನ ಹೇಗೆ ? ಚೆನ್ನಮಲ್ಲಿಕಾರ್ಜುನನ ಅರಸುತ್ತಾ ಕಾನನದಿ ಅಲೆದವಳು ನೀನು ಅಗಣಿತ ಅನುಭವದ ಮೂಸೆಯಲಿ ಪುಟಕ್ಕಿಟ್ಟ ಚಿನ್ನವಾದೆ ಹೆಣ್ಣೂ ಗಂಡಿಗೆ ಸಮಾನವೆಂಬ ತತ್ವ ಜಗಕೆ ಸಾರಿದವಳು ನೀನು ಆಧ್ಯಾತ್ಮವನಪ್ಪಿ ಮೊದಲಿಗಳಾದೆ ಶಿವಶರಣೆಯರ ಸಾಲಿನಲ್ಲಿ ವಚನಕ್ಷೇತ್ರದ ಹೇಮ ಮುಕುಟಕೆ ರತ್ನವಾದವಳು […]
ಕಾವ್ಯಯಾನ
ಮಳೆ ವಸುಂಧರಾ ಕದಲೂರು ಕಿಟಕಿ ಸರಳಾಚೆಸುರಿವ ಮಳೆ ಕಂಡುಮೂಗೇರಿಸುತ್ತೇನೆಮಣ್ಣ ಘಮಲಿಗೆ.. ಬಿದ್ದ ಹನಿಯೆಲ್ಲಾಸಿಮೆಂಟು ರೋಡಿನಲಿಉರುಳಾಡಿ ಕೊಚ್ಚೆಮೋರಿ ಸೇರುವಾಗಎಲ್ಲಿಂದ ಬರಬೇಕುಮಣ್ಣ ವಾಸನೆ.. ಊರ ಮನೆಯಲ್ಲಿಪುಟ್ಟ ತೊರೆಯಾಗಿಮಳೆ ನೀರು ತುಂಬಿಹರಿಯುತ್ತಿದ್ದ ಮೋರಿಗಳುಘಮ್ಮೆನುತ್ತಿದ್ದವು… ಪುಟ್ಟ ಫ್ರಾಕಿನ ಹುಡುಗಿಬಿಟ್ಟ ಕಾಗದದ ದೋಣಿಹೊತ್ತೋಯ್ದು ಮರೆಯಾದನೆನಪೂ ಘಮ್ಮೆಂದಿತು.. ಊರ ಮಳೆ ಕೇರಿ ಮಳೆನೆಲದ ಮಳೆಯಾಗಿತ್ತು.ಹರಿದು ಕಡಲ ಸೇರಿದಟ್ಟ ಮುಗಿಲಾಗಿ ಘಮ್ಮೆಂದಿತು… ಈ ನಗರ ಮಳೆ ಮಾತ್ರಒಂದು ನೆನಪೂ ತುಂಬುವುದಿಲ್ಲ.ಭೋರೆಂದು ಸುರಿದ ಮಳೆಗೆಮಣ್ಣಿಲ್ಲದ ನೆಲವೂ ಇಂಗುವುದಿಲ್ಲಮಣ್ಣಿಲ್ಲದೆ ಘಮಲು ಅಡರುವುದಿಲ್ಲ ********
ಕಾವ್ಯಯಾನ
ಅಮ್ಮ ಶಿವಲೀಲಾ ಹುಣಸಗಿ ಭುವಿಗೆ ಬಿದ್ದ ದೇಹಕೆ ಸೊಕಿಲ್ಲ ಹನಿ ಕೆಸರು ಅಂಗೈಯಗಲ ಬೆಳೆದ ಮಾಂಸದ ಮುದ್ದೆಗೆ. ನವಮಾಸಗಳ ಜೀವದುಸಿರ ಬಸಿರ ಹೊತ್ತವಳು ತಾಯತನದ ಸುಖವ ಹಂಬಲಿಸಿದವಳು.. ಸಾವುನೋವಿನಲಿ ಮರುಜನ್ಮ ಪಡೆದವಳು.. ತನುವಿನೊಳು ಅಡಗಿದ ತನ್ನಾತ್ಮ ಕಂಡು ನಕ್ಕವಳು. ಎದಗಪ್ಪಿಕೊಂಡು ಅಮೃತವ ಉಣಸಿದವಳು. ಕರುಳ ಬಳ್ಳಿಯ ಕಡಿದು ಮಡಿಲೊಳೆರಗಿದವರೂ ನಸು ನಕ್ಕು ಸೆರಗ ಗಂಟಲಿ ಬಿಗಿದು ಅಂಬೆಗಾಲಿಡಲು ಹೆಜ್ಜೆಯ ಮೂಡಿಸಿದವಳು ಬೇಕು ಬೇಡಗಳ ಕಾಡಿಬೇಡಿ ಪಡೆದವರು ತುತ್ತನುಂಡು ತೊಳತೆಕ್ಕೆಯಲಿ ಮಲಗಿದವರು ತೊದಲು ನುಡಿಯ ತುಂಬ ಆವರಿಸಿದವಳು ‘ಅಮ್ಮಾ’ […]
ಕಾವ್ಯಯಾನ
ಅವ್ವ ಲಕ್ಷ್ಮಿ ದೊಡಮನಿ ನಮ್ಮನೆ ಮುತ್ತೈದಿಯಾದಾಕಿ ಅವ್ವ ನೀನಂದ್ರ ನನ್ಜೀವ ಅಪ್ಪನ ಅರ್ಧಾಂಗಿಯಾದಾಕಿ ಅವ್ವ ನೀನಂದ್ರ ನನ್ಜೀವ ಚಳಿಗಾಲದಾಗ ಸೂರ್ಯಾನು ವ್ಯಾಳಿ ಮೀರ್ತಾನ ಆದ್ರ ಹೊತ್ತೀಗ ಕೈತುತ್ತಿಡುವಾಕಿ ಅವ್ವ ನೀನಂದ್ರ ನನ್ಜೀವ ನನ್ನ ಚಿಕ್ಕಂದನ್ನ ಚಿನ್ನದ ಚಣಗಳಿಂದ ಹೆಣಿದು ಒಲವು ಸುರಿಸಿದಾಕಿ ಅವ್ವ ನೀನಂದ್ರ ನನ್ಜೀವ ಜೇನುಗೂಡಿನ ಛಾವಣಿ ನಿಸರ್ಗ ಕೋಪಕ ನಡುಗಿದ್ರೇನ ಸೆರಗು ಅಲ್ಲಾಡಿಸದಾಕಿ ಅವ್ವ ನೀನಂದ್ರ ನನ್ಜೀವ ಕಾಡೋ ಒಲಿ,ಉರಿಸೋ ಹೊಗಿ, ಅಳಿಸೋ ಬಡತನವ ಸೋಲಿಸಿ ನಗುವಾಕಿ ಅವ್ವ ನೀನಂದ್ರ ನನ್ಜೀವ ಊಟದ ನಡುವ […]
ಕಾವ್ಯಯಾನ
ಗುಲಾಬಿ ನಕ್ಷತ್ರ ಅಂಜನಾ ಹೆಗಡೆ ಶಾಪಿಂಗ್ ಹೋದಾಗಲೊಮ್ಮೆ ಪರಿಚಯದ ಅಂಗಡಿಯವ ಗುಲಾಬಿ ಬಣ್ಣದ ಚಪ್ಪಲಿ ಹೊರತೆಗೆದ ಬೆಳ್ಳನೆಯ ಪೇಪರಿನೊಳಗೆ ಬೆಚ್ಚಗೆ ಸುತ್ತಿಟ್ಟ ರಾಣಿ ಪಿಂಕ್ ಚಪ್ಪಲಿ! “ಸೈಜ್ ನೋಡಿ ಮೇಡಂ; ನಿಮ್ಮ ಕಾಲಿಗೆ ಹೇಳಿ ಮಾಡಿಸಿದ ಬಣ್ಣ” ಎಂದ ಹಳೆ ಚಪ್ಪಲಿಯ ಕಳಚಿ ಪಾದಗಳನ್ನೊಮ್ಮೆ ಕೈಯಿಂದ ತಡವಿ ಧೂಳು ಕೊಡಹಿ ಅಳೆಯಲು ನಿಂತೆ ಬಣ್ಣ ಗಾತ್ರಗಳ! ಬಳಸಲಾಗದು ಅಳತೆ ದಕ್ಕದೆ ಕುತ್ತಿಗೆಯ ತುಸುಬಾಗಿಸಿ ಬಿಳಿಯ ಸ್ಟ್ರೈಪ್ ಗಳೊಳಗೆ ಬೆರಳುಗಳ ಬಂಧಿಸಿ ದಿಟ್ಟಿಸಿದೆ! ಕನ್ನಡಿಯೊಳಗಿನ ಪಾದಗಳ ಮೇಲೆ ಹೊಳೆದವು […]