ಕಾವ್ಯಯಾನ

ಅಮ್ಮ

Mother and Child', Henry Moore OM, CH, 1953, cast c.1954 | Tate

ಶಿವಲೀಲಾ ಹುಣಸಗಿ

ಭುವಿಗೆ ಬಿದ್ದ ದೇಹಕೆ ಸೊಕಿಲ್ಲ ಹನಿ ಕೆಸರು
ಅಂಗೈಯಗಲ ಬೆಳೆದ ಮಾಂಸದ ಮುದ್ದೆಗೆ.

ನವಮಾಸಗಳ ಜೀವದುಸಿರ ಬಸಿರ ಹೊತ್ತವಳು
ತಾಯತನದ ಸುಖವ ಹಂಬಲಿಸಿದವಳು..

ಸಾವುನೋವಿನಲಿ ಮರುಜನ್ಮ ಪಡೆದವಳು..
ತನುವಿನೊಳು ಅಡಗಿದ ತನ್ನಾತ್ಮ ಕಂಡು ನಕ್ಕವಳು.

ಎದಗಪ್ಪಿಕೊಂಡು ಅಮೃತವ ಉಣಸಿದವಳು.
ಕರುಳ ಬಳ್ಳಿಯ ಕಡಿದು ಮಡಿಲೊಳೆರಗಿದವರೂ

ನಸು ನಕ್ಕು ಸೆರಗ ಗಂಟಲಿ ಬಿಗಿದು
ಅಂಬೆಗಾಲಿಡಲು ಹೆಜ್ಜೆಯ ಮೂಡಿಸಿದವಳು

ಬೇಕು ಬೇಡಗಳ ಕಾಡಿಬೇಡಿ ಪಡೆದವರು
ತುತ್ತನುಂಡು ತೊಳತೆಕ್ಕೆಯಲಿ ಮಲಗಿದವರು

ತೊದಲು ನುಡಿಯ ತುಂಬ ಆವರಿಸಿದವಳು
‘ಅಮ್ಮಾ’ ಯೆಂದು ಕೂಗಿ ಕರೆದಾಗ ಓಗೊಟ್ಟವಳು

ಕರುಳು ಹರಿದರೂ,ಕರುಳ ಕೂಗಿಗೆ ಧ್ವನಿಯಾಗಿ..
ಕಷ್ಟಗಳ ಸರಮಾಲೆಯಲಿ ಸಲುಹಿದವಳು…

ಹಸಿದು ಬಂದೊರ ಹಸಿದೊಡಲಿಗೆ ತುತ್ತನಿಟ್ಟವಳು
ಮನೆಯ ಅನ್ನಪೂರ್ಣೇಶ್ವರಿಯಾದವಳು.

ಅಮ್ಮಾ ನಿನಗೆ ಸರಿಸಾಟಿಯಾರಿಹರು ಜಗದೊಳಗೆ??
ನಿನ್ನೊರತು ಏನೂಂಟು ಈ ಭುವಿಯೊಳಗೆ.?

ಏನ್ನ ತಪ್ಪು ಗಳೆಲ್ಲ ನಿನ್ನ ಎದಯೊಳಗೆ ಅಪ್ಪಿರುವೆ.
ನಿನ್ನಪ್ಪಿ ಕಾಯ್ವ ಪ್ರೇಮವ ನನ್ನಲ್ಲಿ ಬಿತ್ತಿರುವೆ..

ನಿನ್ನ ದೇಹವಿದು ನಿನಗರ್ಪಿತ ಅನುದಿನವು
ಭವದೆಲ್ಲ ಸುಖವು ನಿನ್ನಡಿಗೆ ಸಮರ್ಪಿತವು…

**********

One thought on “ಕಾವ್ಯಯಾನ

Leave a Reply

Back To Top