ಕಾವ್ಯಯಾನ
ಗೆಳೆಯನೊಬ್ಬನ ಸ್ವಗತ ನಟರಾಜು ಎಸ್. ಎಂ. ಊರ ಮಾರಿ ಗುಡಿಯ ಮುಂದೆಆಡುತ್ತಿದ್ದ ಗೆಳೆಯರ ಜೊತೆಗೂಡಿಆಟದ ಮಧ್ಯೆ ಟೈಂ ಪಾಸ್ ಎಂದಾಗಬಸವೇಶ್ವರ ಗುಡಿಯ ಜಗುಲಿಯ ಮೇಲೆಗೆಳೆಯರ ಮಧ್ಯೆ ಕಾಲು ಇಳಿಬಿಟ್ಟು ಕುಳಿತ್ತಿದ್ದ ತಮ್ಮ ಹುಡುಗರ ಜೊತೆ ಕುಳಿತಆ ಹುಡುಗನ ನೋಡಿ‘ಯಾರ್ ಮಗಾನ್ಲಾ ನೀನುನೋಡ್ದಾ ನಿನ್ ದೈರ್ಯಾನಾ?’ಗದರಿದ್ದರು ಅವನ ಗೆಳೆಯನೊಬ್ಬನ ತಾಯಿತನ್ನ ಗೆಳೆಯರ ಜೊತೆ ಆಟವಾಡೋದು ತಪ್ಪಾ?ಅವರ ಪಕ್ಕ ಕುಳಿತುಕೊಳ್ಳೋದು ತಪ್ಪಾ?ಎಂದೆಣಿಸುತಾ ಎದ್ದು ಮೌನವಾಗಿಆ ಹುಡುಗ ಮನೆ ಕಡೆಗೆ ನಡೆದಿದ್ದ ಸ್ಕೂಲಿನಲಿ ಮಧ್ಯಾಹ್ನದ ಬಿಸಿಯೂಟಕೆಗೆಳೆಯರೊಡಗೂಡಿ ಮಿಲ್ಲಿನಲಿಗೋಧಿ ನುಚ್ಚು ಮಾಡಿಸಿದಗೋಧಿ ನುಚ್ಚಿನ […]
ಆಗಂತುಕ ಮಳೆ ಬಾಲಕೃಷ್ಣ ದೇವನಮನೆ ಧೋ… ಧೋ… ಸುರಿವಇಂಥದೇ ಧಾರಾಕಾರ ಮಳೆ ಬಂದಾಗಹೃದಯದಲಿ ನೋವು ಹೆಪ್ಪುಗಟ್ಟಿಹನಿಯುವ ಕಂಬನಿ ಮಳೆಯ ಜೊತೆ ತೋಯ್ದು ಮರೆಯಾಗುತ್ತದೆ. ಕಳೆದ ಸಲಮಳೆ ಸುರಿದು ನದಿ ಉಕ್ಕಿ,ನುಗ್ಗಿದ ಪ್ರವಾಹ ಮನೆ ಹೊಸಿಲು ದಾಟಿಹಿಂಬಾಗಿಲಲಿ ಹೊರಟಾಗಮನೆಯೊಳಗಿನ ದವಸ-ಧಾನ್ಯ,ದುಡ್ಡು-ಬಂಗಾರ, ಪಾತ್ರೆ-ಪಗಡೆ,ಅರಿವೆಯಷ್ಟೇ ಅಲ್ಲಕೊಟ್ಟಿಗೆಯ ದನಕರುಅಂಗಳದಲ್ಲಿ ಮಲಗುತ್ತಿದ್ದ ನಾಯಿಮನೆಯೊಳಗೆ ಆಡುತ್ತಿದ್ದ ಬೆಕ್ಕುಮುಂಜಾವದಲಿ ಎಬ್ಬಿಸುತ್ತಿದ್ದ ಕೋಳಿಆಸೆ ಕನಸುಗಳೆಲ್ಲವೂರಾತ್ರೋರಾತ್ರಿತೇಲಿ ಹೋಗುವಾಗ ಉಳಿದದ್ದುಗಂಜಿಕೇಂದ್ರದಲ್ಲಿದ್ದ ಜೀವ ಮಾತ್ರ! ಮೇಲ್ಛಾವಣಿ ಕುಸಿದುಅಡ್ಡಡ್ಡ ಮಲಗಿದ ಗೋಡೆಗಳ ನಡುವೆಕ್ಷಣಮಾತ್ರದಲಿ ಕೊಚ್ಚಿಹೋದ ಕನಸುವಿಲವಲ ಒದ್ದಾಡುವಾಗಭಾವನೆಗಳು ಮಡುವುಗಟ್ಟಿಉಮ್ಮಳಿಸುವ ದುಃಖಮುರಿದ ಬದುಕುಕಂಬನಿಯಾಗಿ ಮಳೆಯೊಂದಿಗೆ ಹರಿದದ್ದುಯಾರಿಗೂ […]
ಕನಸು ಪ್ರೊ.ಸುಧಾ ಹುಚ್ಚಣ್ಣವರ ಕಾಣುವ ಕನಸುಗಳಿಗೆಲ್ಲಾದಾರಿ ತೋರಿದವರು ಯಾರೋ!ಬಂದೆ ಬಿಡುವವುನಮ್ಮ ಭಾವನೆಗಳ ಅರಸಿ. ಇತಿಮಿತಿಗಳ ಅರಿವಿಲ್ಲ ಸಾಗಿದಷ್ಟು ದೂರಬಹುದೂರ ಚಲಿಸುವವು ಪ್ರಯಾಸವಿಲ್ಲದ….ಪಯಣಿಗನಂತೆ. ಹೊತ್ತು ಸಾಗುವವು ಸುಂದರ ಅತಿ ಸುಂದರ…ಕಲ್ಪನೆಗಳ ಹೂರಣವ ಪರಿಮಿತಿಯೆ ಇರದ ಬಜಾರಿನಲ್ಲಿ . ಬಯಕೆಗಳ ಭಾರವ ಹಗುರಗೊಳಿಸಲೆ೦ದೆ….. ಕಲ್ಪನಾ ಲೋಕದಲ್ಲಿ ವಿಹರಿಸುತಿಹವು ಬಂಧನದಿ ಹೊರಬಂದ ಪಕ್ಷಿಗಳಂತೆ. ಕೆಲವೊಂದು ವಾಸ್ತವಕ್ಕೆ ಹತ್ತಿರವಾಗುತ್ತಾ ಮತ್ತೆ ಕೆಲವು ಭ್ರಮೆಯಲ್ಲಿಯೇ ಉಳಿದು ಭಾವನೆಗಳ ಅರಳಿಸಿ.. ಕೆರಳಿಸಿ.. ಕನಸಿನ ಸಾಮ್ರಾಜ್ಯಕ್ಕೆ ಅಧಿಪತಿಯಾಗಿಹವು. ********
ವಿರಹಾಂತರಂಗ ಸಂತೋಷಕುಮಾರ ಅತ್ತಿವೇರಿ ನಿನ್ನ ಕಾಣದೆ ಮಾತನಾಡದೆಕ್ಷಣವೇ ಯುಗವು ಅನುದಿನಕಡಲೇ ಇರದ ಬರಿಯ ಮರಳುಬೆಂಗಾಡು ಬದುಕು ಪ್ರತಿಕ್ಷಣ ಆಲಿಸುವ ದನಿಗಳಲೆಲ್ಲ ಬರಿನಿನದೆ ಸೊಲ್ಲಿನ ಹೊಳಲಿದೆಎಲ್ಲ ಲೋಹದ ಝಣಕೃತಿಯಲುನಿನದೆ ನೂಪುರ ದನಿಯಿದೆ ಕೊರಳ ಕಾರ್ಮೋಡ ಬಿಗಿದಿದೆಹೊತ್ತು ಕಂಬನಿಯಾಗರನಿನ್ನವಜ್ಞೆಯ ತಂಪು ತಾಗಿಹನಿಗೂಡಿತೆಂಬುದೆ ಬೇಸರ ಸುರಿದ ಮೇಲಿನ್ನೇನಿದೆಖಾಲಿ ಆಗಸ ಈ ಮನನಿನ್ನ ಪ್ರೀತಿಯ ಮಳೆಯಬಿಲ್ಲಿಗೆಕಾದು ಗುನುಗಿದೆ ತಾನನ ***********
ಕಾವ್ಯಯಾನ
ಅವಳು ನೆನಪಾದಾಗ ಎಂ.ಜಿ.ತಿಲೋತ್ತಮೆ ಹೀಗೆ ಕಾಡುವುದಾದರೆ ನಿತ್ಯನಿನ್ನ ಸ್ವರಗಳು ಮೊದಲುನನ್ನ ಎದೆಗೆ ಇಳಿದ ದಿನದ ಕ್ಷಣದಾಚೆಪರಿಪೂರ್ಣವಾಗಿದ್ದುಪರಿತಪಿಸುತ್ತಿದ್ದ ಸಂಗಾತಿ ನಿನ್ನ ಬಿಂಬ ಬಿಗಿದ ತಂತಿಗೆ ಬೆರಳುಗಮನಿಸದೆ ತಗುಲಿ ನುಡಿಸಿದ ರಾಗಕ್ಕೆಯಾವ ಭಾಯಾನದ ಹೋಲಿಕೆ?ಸಾಟಿಯಿಲ್ಲದ ಹಂಬಲವು ಹೆಮ್ಮರವಾಗಿನುಗ್ಗುವ ಪರಿಗೆ ಕೊನೆಯೆಲ್ಲಿ?ಅಧೃಶ್ಯವಾದ ನಿನ್ನ ಚಿತ್ತಾರಹುಡುಕುತ್ತಾ ಹೊರಟ ನಯನದ ಹಟಕ್ಕೆಕಡಿವಾಣವೇ ಬೇಡ ಮರಳೇ ಸೂಸಿ ಹಾಸಿರಲಿವರುಣನು ನಿನ್ನ ಹೆಜ್ಜೆಗೆ ಸುತ್ತುಗಟ್ಟಲಿಪಾದ ಮೂಡಿದಲೆಲ್ಲಾ ನಾ ಓಡಿ ಬರುವೆನಿನ್ನಲಿ ಸೆರೆಯಾಗುವೆ ಎಂದರೆಹುಸಿಯಾಗಿ ನಗುವುದು ಹೂ ಗಿಡ ಬಳ್ಳಿ ಮುಖಾಮುಖಿಯಾದರೆ ನಿನ್ನ ನೆರಳು ನಾನುನನ್ನ ಕಣ್ಣೊಳಗೆ ನಿನ್ನ […]
ಕಾವ್ಯಯಾನ
ಮಳೆಯ ಹಾಡು ಚೈತ್ರಾ ಶಿವಯೋಗಿಮಠ ನೆಲದ ಮೇಲೆ ಪುಟಿದುಚಿಮ್ಮುವ ಸ್ಫಟಿಕದ ಮಣಿಗಳೋ?ಬಾನು ಉಲಿಯುವ ಪ್ರೀತಿಪ್ರೇಮದ ದನಿಗಳೋ! ಹನಿ ಹನಿಯ ಪೋಣಿಸಿಹೆಣೆದ ರತ್ನ ಖಚಿತ ಹಾರವೋ?ಭುವಿಯ ಒಡಲ ಹಸಿವತಣಿಸುವ ಆಹಾರವೋ? ಮೇಘ ಮಾಲೆಯ ಒಡಲತುಂಬಿ ತುಳುಕುವ ಜೀವಕಳೆಯೋ?ಭೂರಮೆಯ ಗರ್ಭಕ್ಕಿಳಿದು ಜೀವಚಿಗುರಿಸೊ ಜೀವನ ಸೆಲೆಯೋ? ಕವಿಯ ಮನದಿ ಭಾವಸ್ಫುರಿಸುವ ದಿವ್ಯ ಸಿಂಚನವೋ?ಜೀವ-ಭಾವಗಳೆರಡು ತಣಿಸಲುಮಳೆಯ ಹಾಡಿನ ರಿಂಗಣವು ******
ಕಾವ್ಯಯಾನ
ಆವರ್ತನ ಎನ್ ಆರ್ ರೂಪಶ್ರೀ ಬದುಕೆಂದರೆ ಕನಸುಗಳ ಸಂತೆಮನಸಿನ ಭಾವನೆಗಳ ಒರತೆಕನಸಿನೂರಿನ ಪಯಣಸುಖದುಃಖಗಳ ಸಮ್ಮಿಶ್ರಣ. ಅತ್ತ ಬಂದರೂ ಬರಲಾಗದೆನಿಂತರೂ ನಿಲ್ಲಲಾಗದೆತವಕ ತಲ್ಲಣಗಳ ಮಹಾಪೂರಅಲೆಗಳ ನಡುವಿನ ಸಾಗರ. ಜೀವ ಜೀವದ ಜೀವಸೆಲೆಯಿದುನಿಲ್ಲದ ನಿರಂತರ ಪಯಣವಿದುಸಾಗುತ್ತಲೇ ಸಾಗುವ ಜಿನುಗುತ್ತಲೇ ಜಿನುಗುವ ತುಂತುರು ಮಳೆ ಹನಿಯಿದು. ಕಡಿದಂತೆ ಚಿಗುರು ಕಾಂತಿಯ ಬೆರಗುಸವಿನಯ ಭಾವದ ಸೆರಗುಮತ್ತೆ ಮತ್ತೆ ಮರುಕಳಿಸುವ ಮೆರಗು ಮೌನದಿ ಜೊತೆಗೆನ್ನ ಹುದುಗು. ಹರಿವ ಸಾಗರದಿ ಅಲೆಗಳ ನಡುವೆಪ್ರೀತಿಯ ಸಂಚಲನಬಾಳಹಾದಿಯಲ್ಲಿ ಸಾಗುತ್ತಲಿರುವಆವತ೯ನ. *****
ಕಾವ್ಯಯಾನ
ಅಪ್ಪ… ಸುಜಾತ ಲಕ್ಷ್ಮೀಪುರ. ಅಪ್ಪ ನೆನಪಿಗೆ ಬರುವುದು ಅಪರೂಪ… ಕಣ್ಣು ಬಿಟ್ಟಾಗಿನಿಂದ ಕಂಡಅಮ್ಮನ ಮೊಗದಲ್ಲೇ ಅಪ್ಪನ ಸುಳಿವು..ಅಮ್ಮನಲ್ಲಿ ಪ್ರೀತಿ ತುಂಬಿದ ಭಯ ಆತಂಕಆವಸರಿಸಿದರೆ ಗೊತ್ತಾಗುತ್ತಿತ್ತು ಅಪ್ಪ ಬಂದಾ! ಚಿಕ್ಕವಳಿರುವಾಗಲೇಮಧ್ಯ ರಾತ್ರಿ ಎಬ್ಬಿಸಿ ಕುಳ್ಳಿರಿಸುತ್ತಿದ್ದ ಓದು.. ಓದು..ತಾನು ಕಲಿತ ನಾಲ್ಕು ಅಕ್ಷರ ಸಾಲದೆಂದು ನಮ್ಮನ್ನು ಬಡಿದೆಚ್ಚರಿಸುತ್ತಿದ್ದ. ರಾತ್ರಿ ಎಷ್ಟೋ ಹೊತ್ತಿಗೆ ಕುಡಿದು ತೂರಾಡುತ್ತಾ ತಿಂಡಿ ಕಟ್ಟಿಸಿಕೊಂಡುಮನೆಗೆ ಬರುತ್ತಿದ್ದ ಅಪ್ಪ..ಹೊತ್ತು ಗೊತ್ತು ನೋಡದೆಯೇ ಎಬ್ಬಿಸಿ ತಿನ್ನಿಸುತ್ತಿದ್ದ. ಕುಡಿತ ದುಡಿಮೆಯಲ್ಲೇಜೀವ ಸವೆಸಿದ ಅಪ್ಪಮುದ್ದು ಮಾಡಿದ್ದು ನೆನಪೇ ಇಲ್ಲಾ..ಒದ್ದು ಎಬ್ಬಿಸಿ ನೀರಿಗೆಂದು ಕೊಡ […]
ಕಾವ್ಯಯಾನ
ಮಳೆ ಪದ್ಯಗಳು ಜಿ.ಲೋಕೇಶ ಮತ್ತೆ ಮತ್ತೆ ಮಳೆ ಹುಯ್ದುನೆನೆದ ನೆನಪು ತರಿಸಿದೆ ಹಾರಿಹೋದ ಕೊಡೆಯು ಕೂಡಕಣ್ಣು ಸನ್ನೆ ಮಾಡಿದೆ ಮೊದಲ ಭೇಟಿಗೆ ಮರದ ನೆಳಲುಮಳೆಯು ಗುಡುಗು ಜೊತೆಗೆ ಸಿಡಿಲು ಎದೆಯ ತಬ್ಬಿ ಭಯದಿ ಹಿಡಿತ ಬಿಗಿದುತಬ್ಬಲೇನು ಅಡ್ಡಿ ಯಾಕೋ ಬೆರಳು ತಡೆದು ತೋಯ್ದ ದೇಹ ತಣ್ಣನೆ ಬಿಸಿಯ ಫಲವುಇರದು ಜೀವ ಮೆಲ್ಲ ಮುರಿದುನಿಯಮವು ಕಾಲ ಹೊತ್ತ ತಬ್ಬಿದೆದೆಗೆ ಅನ್ಯ ನಾದಹುಯ್ದು ಮರೆತ ಮಳೆಗೆ ಒಂದು ಧನ್ಯವಾದ ಮತ್ತೆ ಬರಲಿ ಕ್ಷಣವು ಅವಕಾಶದಂತೆಮತ್ತೆ ತೊಯ್ದು ತೆಪ್ಪೆಯಾಗುವಂತೆ ****
ಮತ್ತೆ ಮಳೆ ಬಂದಿದೆ.. ಹರಿವ ನೀರಲ್ಲಿ ತನ್ನ ಪುಟ್ಟ ಕೈಗಳಿಂದದೋಣಿಗಳ ಬಿಟ್ಟುಅವು ಚಲಿಸುವ ಚಂದಕ್ಕೆಬೆರಗಾಗಿ ನಕ್ಕು ಹಗುರಾಗಿದೆ ಅರಳಿದ ನೆಲಸಂಪಿಗೆಯ ಕೇಸರಗಳಮುಟ್ಟಿ ನೋಡುತ್ತಹನಿ ಮುತ್ತಿಕೊಂಡ ದಳಗಳಸವರಿ ಇನ್ನಷ್ಟು ನಯವಾಗಿಸುತ್ತದೆ ಬೀಸುವ ತಂಗಾಳಿ ಅಲೆಯುವಎಲೆಗಳ ಜೊತೆ ಗುಟ್ಟುಗಳನಿಟ್ಟುಹೂವಿಂದ ಹೂವಿಗೆ ಅಲೆದುಪರಿಮಳವ ಹೊತ್ತೊಯ್ಯುತ್ತದೆ ಸಂಜೆ ಬಂದ ಮಳೆಗೆ ಖಾಸಾನೆಂಟರ ಕರೆದುತಾಜಾ ಮೀನುಗಳ ಹಿಡಿದುಊಟ ಬಡಿಸುವ ಭೂಮಿರಾತ್ರಿ ಪಟ್ಟಾಂಗ ಹೊಡೆದುಬದುಕಿನ ಖುಷಿಯ ದ್ವಿಗುಣಗೊಳಿಸುತ್ತದೆ ರಾಶಿ ರಾಶಿ ರಾಶಿ ಮೋಡಗಳು ಜಗದ ತುಂಬೆಲ್ಲಾ ಕವಿಯುವಾಗನವಿಲಿನ ಹಜ್ಜೆಗೆ ಗೆಜ್ಜೆದನಿಮೂಡಿ ಮುಸ್ಸಂಜೆಯ ಆಲಾಪಕ್ಕೆಶೃತಿ ಕೊಡುತ್ತದೆ ಕತ್ತಲಾಗಲಿ,ಜೀರುಂಡೆಗಳ […]