ಮಳೆ ಪದ್ಯಗಳು
ಜಿ.ಲೋಕೇಶ
ಮತ್ತೆ ಮತ್ತೆ ಮಳೆ ಹುಯ್ದು
ನೆನೆದ ನೆನಪು ತರಿಸಿದೆ
ಹಾರಿಹೋದ ಕೊಡೆಯು ಕೂಡ
ಕಣ್ಣು ಸನ್ನೆ ಮಾಡಿದೆ
ಮೊದಲ ಭೇಟಿಗೆ ಮರದ ನೆಳಲು
ಮಳೆಯು ಗುಡುಗು ಜೊತೆಗೆ ಸಿಡಿಲು
ಎದೆಯ ತಬ್ಬಿ ಭಯದಿ ಹಿಡಿತ ಬಿಗಿದು
ತಬ್ಬಲೇನು ಅಡ್ಡಿ ಯಾಕೋ ಬೆರಳು ತಡೆದು
ತೋಯ್ದ ದೇಹ ತಣ್ಣನೆ ಬಿಸಿಯ ಫಲವು
ಇರದು ಜೀವ ಮೆಲ್ಲ ಮುರಿದು
ನಿಯಮವು
ಕಾಲ ಹೊತ್ತ ತಬ್ಬಿದೆದೆಗೆ ಅನ್ಯ ನಾದ
ಹುಯ್ದು ಮರೆತ ಮಳೆಗೆ ಒಂದು ಧನ್ಯವಾದ
ಮತ್ತೆ ಬರಲಿ ಕ್ಷಣವು ಅವಕಾಶದಂತೆ
ಮತ್ತೆ ತೊಯ್ದು ತೆಪ್ಪೆಯಾಗುವಂತೆ
****