Category: ಕಾವ್ಯಯಾನ

ಕಾವ್ಯಯಾನ

ಕಾವ್ಯಯಾನ

ಕಾಲ ಅರುಣ್ ಕೊಪ್ಪ ಮಳೆ ,ಚಳಿ ,ಬಿಸಿಲೂ ಮೀರಿ ಏನು ಈ ಬಾಳ ರಹದಾರಿ ಹೋಯಿತು ಕೈ ಮೀರಿ ಗ್ರಹ ಬಂಧನ, ಮೈ ಕೈ ಪರಚಿ ಚೀರಿ ಎಲ್ಲಿಗೆ ನಿನ್ನ ಸವಾರಿ ಕೊರೊನಾ ಕವಿದೆ ನೀ ಅಂಧಕಾರಿ! ಅವಳು ನಾನಿಲ್ಲದ ಅವಳಲ್ಲ ಇಂದು ಇವಳು ಪಡುತಿಲ್ಲ ಗೋಳು ಇಲ್ಲ ಕಣ್ಣೀರ ಕೂಳು ಬಿದ್ದಯ್ತಿ ಎಣ್ಣೆ ಅಂಗಡಿ ಪಾಳು ******

ಕಾವ್ಯಯಾನ

ಗಝಲ್ ಡಾ.ಗೋವಿಂದ ಹೆಗಡೆ ನೀನೆತ್ತಿ ಮುಡಿದ ಹೂವಿನ ಎಸಳಾಗಿಸು ನನ್ನ ನಿನ್ನ ಬಿಡುಗಣ್ಣ ಕರೆಯಲ್ಲಿ ಹರಳಾಗಿಸು ನನ್ನ ಎದ್ದೆದ್ದು ಬೀಳುತ್ತ ಮೊರೆಯುತ್ತಿದೆ ಕಡಲು ಸತತ ನಿನ್ನ ಎದೆಯಲ್ಲೊಂದು ಮೃದು ಅಲೆಯಾಗಿಸು ನನ್ನ ನಿನ್ನ ಗುಲಾಬಿ ಪಾದಗಳು ರಸ್ತೆಯನಿಡೀ ತುಳಿದಿವೆ ದಣಿದ ಕಾಲುಗಳನ್ನು ಒತ್ತುವ ಬೆರಳಾಗಿಸು ನನ್ನ ಕತ್ತಲ ರಾತ್ರಿಯಲ್ಲಿ ಚುಕ್ಕಿಗಳ ಎಣಿಸುತ್ತಿರುವೆ ನಿನ್ನ ಕಣ್ಣು ಚುಚ್ಚದಂತೆ ಹಗೂರ ಮಿನುಗಿಸು ನನ್ನ ದುಗುಡ ಮೋಡಗಳು ಆವರಿಸಿ ಮನಸಾಗಿದೆ ಕ್ಷುಬ್ಧ ಚದುರಿಸಿ ಮುದ ತರುವ ತಂಗಾಳಿಯಾಗಿಸು ನನ್ನ ಎಷ್ಟೊಂದು ಮಾತುಗಳ […]

ಕಾವ್ಯಯಾನ

ಹಬ್ಬ ಗೌರಿ.ಚಂದ್ರಕೇಸರಿ ನಾವು ಸಾಬೀತುಪಡಿಸಿದ್ದೇವೆ. ಪ್ರಾಣಕ್ಕಿಂತ ದೊಡ್ಡದು ಆಚರಣೆಗಳೆಂದು. ನೆತ್ತಿಯ ಮೇಲೆ ತೂಗುತ್ತಿದ್ದರೂ ಕತ್ತಿ ಬಾರಿಸುತ್ತಿದ್ದರೂ ಎಚ್ಚರಿಕೆಯ ಗಂಟೆ ನಡೆದು ಬಿಡುತ್ತೇವೆ ಚೀಲ ಹಿಡಿದು ಸಾವಿನ ಮನೆಯ ಕಡೆಗೆ ಮುಗಿ ಬೀಳುತ್ತೇವೆ ಹೂ ಕಾಯಿ ಹಣ್ಣುಗಳಿಗೆ ತುಂಬಿಕೊಳ್ಳತ್ತೇವೆ ಭವಿಷ್ಯವನ್ನೆಲ್ಲ ಭೂತವೆಂಬ ಚೀಲಗಳಿಗೆ ಹೊತ್ತು ನಡೆಯುತ್ತೇವೆ ತಪ್ಪಿಸಿ ಪೋಲೀಸರ ಕಣ್ಗಾವಲನ್ನು ಬಂದು ಸೇರಿ ಮನೆ ಬೀಗುತ್ತೇವೆ ಚಪ್ಪನ್ನೈವತ್ತಾರು ಕೋಟೆಗಳ ಗೆದ್ದಂತೆ ತಳಿರು ತೋರಣವಿಲ್ಲದ ಸಿಹಿಯಡುಗೆ ಮಾಡದ ನೆರೆಹೊರೆಯವರನ್ನು ನೋಡಿ ನಗುತ್ತೇವೆ ಜೀವವಿದ್ದಲ್ಲಿ ಮಾಡೇವು ನೂರು ಹಬ್ಬ ಹರಿದಿನ ಅವಿವೇಕಿಗಳು […]

ಕಾವ್ಯಯಾನ

ಗಝಲ್ ಸಹದೇವ ಯರಗೊಪ್ಪ ಗದಗ ಹೊಲದ ಇಳಿಜಾರಿಗೆ ಅಡ್ಡ ನೇಗಿಲ ಸಾಲುಗಳ ತೆರೆದ ಮಣ್ಣಿನ ಮಗ| ಅಂಬರದ ಎದೆ ಸೀಳಿ ಮುಗಿಲ್ವನಿಗಳ ಗೂಡು ಕಟ್ಟಿದ ಮಣ್ಣಿನ ಮಗ|| ಒಕ್ಕಲುತನ ಕಲೆ ವಿಜ್ಞಾನ ವಾಣಿಜ್ಯಗಳ ಸಂಗಮ ಎಂದು ತೋರಿಸಿದ ಜಂಗಮ| ನೆಲದ ಜ್ವರದ ಪರಿಗೆ ವಲಸೆ ಹೋಗುವ ತಥಿಗಳಿಗೆ ಲಗಾಮ ಜಡಿದ ಮಣ್ಣಿನ ಮಗ|| ಆಗಮೆ ಮಾಡಿದರೂ ಬೀಯಕ್ಕೆ ಭತ್ತವಿಲ್ಲದೆ ಅಗುಳು ಅನ್ನಕ್ಕಾಗಿ ಚೀರಾಟ| ಮೋಡಗಳ ಮೈಥುನವನ್ನು ಕೆರೆ ಕಟ್ಟೆ ಬಾವಿಗಳಲ್ಲಿ ಸಂಗ್ರಹಿಸಿದ ಮಣ್ಣಿನ ಮಗ|| ಗಡಿಯಾರದಂತೆ ತಿರುಗುವ […]

ಕಾವ್ಯಯಾನ

ಋಜುವಾತು ಮಾಡಬೇಕಿದೆ ರೇಶ್ಮಾಗುಳೇದಗುಡ್ಡಾಕರ್ ನನ್ನೊಳಗಿನ ನಾನುಋಜುವಾತು ಮಾಡಬೇಕಿದೆ ನನ್ನೊಳಗಿನ ನಾನು ಋಜುವಾತುಮಾಡಬೇಕಿದೆಎದೆಗೆ ಇಟ್ಟ ಕೊಳ್ಳಿಅರುವ ಮುನ್ನಹರಳುಗಟ್ಟಿದ ನೆನಪುಗಳುಹನಿಯಾಗಿ ಹರಿಯುವ ಮುನ್ನಸೋಗಿನ ಕಡಲಲ್ಲಿ ಅಲೆಯಾಗುವ ಮುನ್ನನನ್ನೊಳಗಿನ ನಾನುಋಜುವಾತು ಮಾಡಬೇಕಿದೆ ….. ಬಣ್ಣ ಬಣ್ಣದ ನೋಟಗಳುಮನದ ಹಂದರ ಸೇರುವ ಮುನ್ನಮೋಹ ಸಲೆಗೆ ಅಡಿಯಾಳಾಗುವ ಮುನ್ನವಾಸ್ತವದ ತಳಹದಿಯ ಮರೆಮಾಚಿಭ್ರಮರ ಲೋಕಕೆ ಕಾಲಿಡುವ ಮುನ್ನಬಾಂಧವ್ಯ ದ ಆಚೆಗೊಸ್ನೇಹದ ಸೆಳೆತದಾಚೆಗೊ ನನ್ನ ನಾಋಜುವಾತು ಮಾಡಬೇಕಿದೆ …. ಏಳಿಗೆಯ ಬೇರುಗಳ ಕತ್ತರಿಸಿಹಿಂದೆ ಮುಂದೆ ನಿಂದನೆಗೆ ಆಹಾರಮಾಡಿ ನಾಜೂಕು ಮಾತುಗಳಾಡುತನಮ್ಮೊಳಗೆ ಬೇರೆತು ದೂರ ಇರುವವರುಕತ್ತಿಮಸೆಯುವ ಮುನ್ನ ನನ್ನೊಳಗಿನನಾನು […]

ಕಾವ್ಯಯಾನ

ಗಝಲ್ ಎ.ಹೇಮಗಂಗಾ ಬಾಳಿನೆಲ್ಲ ಏಳುಬೀಳುಗಳ ದಾಟಿದ್ದೇನೆ ಕಾಲವೇ ಮುನ್ನಡೆಸು ನನ್ನ ಗೋಳಿನೆಲ್ಲ ಸರಮಾಲೆಗಳ ಬಿಸುಟಿದ್ದೇನೆ ಕಾಲವೇ ಮುನ್ನಡೆಸು ನನ್ನ ನಂಜಾದ ಅವನ ಕಹಿನೆನಪುಗಳು ಅಸ್ತಿತ್ವವನ್ನೇ ಬಲಿಪಡೆಯುತ್ತಿವೆ ಅಂತರಾಳದಿ ನೋವನ್ನೆಲ್ಲ ಹೂಳಿದ್ದೇನೆ ಕಾಲವೇ ಮುನ್ನಡೆಸು ನನ್ನ ಹೂವಿಂದ ಹೂವಿಗೆ ಹಾರುವ ದುಂಬಿ ಅವನೆಂದು ತಿಳಿಯಲಿಲ್ಲ ತಪ್ಪಿನ ಅರಿವಾಗಿ ಎಚ್ಚೆತ್ತುಕೊಂಡಿದ್ದೇನೆ ಕಾಲವೇ ಮುನ್ನಡೆಸು ನನ್ನ ವಂಚನೆಯ ಕತ್ತಿಯೇಟಿಗೆ ಹೃದಯದ ಗಾಯವಿನ್ನೂ ಮಾಯಬೇಕಿದೆ ಸತ್ತ ಕನಸಿಗೆ ಜೀವ ತುಂಬಬೇಕೆಂದಿದ್ದೇನೆ ಕಾಲವೇ ಮುನ್ನಡೆಸು ನನ್ನ ಜೀವನಕ್ಕೆ ಬೆನ್ನು ತಿರುಗಿಸಿ ಹೇಡಿಯಂತೆ ಸಾವ ಬಯಸದಿರು […]

ಕಾವ್ಯಯಾನ

ಇವನೊಂದಿಗೆ ಅವನನ್ನೂ ಧಾಮಿನಿ ಸತ್ತಂತಿದ್ದೆನು ನಾನುಅದಕೆ ಕಾರಣ ನೀನು ಏನೊಂದೂ ಅರಿವಾಗಲಿಲ್ಲತಿಳಿಯುವಷ್ಟರಲ್ಲಿ ಮುಗಿದಿತ್ತೆಲ್ಲ ಮೈ ತುಂಬಾ ಚೇಳುಅದಕಿಂತ ಸಾವೇ ಮೇಲು ಮೈಯೋ ಬೆಣ್ಣೆಯಂತೆ ಮೃದುಮನಸೋ ಕಲ್ಲಿನಂತೆ ಕಠಿಣ ತಾನಾಗಿ ಚಲಿಸಲಿಲ್ಲ ಒಂದೂ ಬೆರಳುಬಲವಂತಕ್ಕಾಗಿ ಚೀರಿದವುಎಲ್ಲಾ ನರಳು ಸತ್ತಂತಿದ್ದೆನು ನಾನುಅದಕೆ ಕಾರಣ ನೀನು. ಹುಚ್ಚಿಇವನನ್ನು ಅವನೆಂದು ತಿಳಿಯಬಾರದಿತ್ತೇಹಬ್ಬವೇ ಆಗಿಹೋಗುತಿತ್ತಲ್ಲೆ! ಬರೀ ಗಂಡಸರಷ್ಟೇ ಇವಳೊಂದಿಗೆ ಅವಳನ್ನುಹೋಲಿಸಿಕೊಳ್ಳುವುದೇ? ನಮಗೇನು ಹಕ್ಕಿಲ್ಲವೇಇವನೊಂದಿಗೆ ಅವನನ್ನೂ ಮುಡಿದುಕೊಳ್ಳುವುದು. ********

ಕಾವ್ಯಯಾನ

ನಿಸಾರ ನಮನ ಗಝಲ್ ರೇಮಾಸಂ ಹತ್ತನೇ ವಯಸ್ಸಲೇ ಮಿಂದೆದ್ದ ಕಾವ್ಯ ಕವಿ ಅಹ್ಮದ ನಿಸಾರ ನಿತ್ಯೋತ್ಸವ/ ಜಲಪಾತ ಪ್ರಥಮ ಭಾವಗೀತೆ ಪತ್ರಿಕೆಲಿ ಪ್ರಕಟಿಸಿದ ಹರಿಕಾರ ನಿತ್ಯೋತ್ಸವ// ಮೃದು ಮಾತಿನ ಭಾವುಕದ ಸಾಹಿತಿಯೇ ಮೋಡದಲೇಕೆ ಮರೆಯಾದಿರಿ/ ಬುದ್ದಿಜೀವಿ ಸಂವೇದನಾಶೀಲ ಭಾವದ ಚಿಂತನಕಾರ ನಿತ್ಯೋತ್ಸವ// ರಾಜಕೀಯ ಸಮರ್ಥ ವಿಡಂಬನೆಯಲಿ ಕುರಿಗಳು ಸಾರ್ ಕುರಿಗಳು ಎಷ್ಟು ಚಂದ/ ಬೆಣ್ಣೆ ಕದ್ದವ ಕೃಷ್ಣನೆಂದು ತೋರಿದ ಪ್ರತಿಭಾಕಾರ ನಿತ್ಯೋತ್ಸವ// ಭಾವೈಕ್ಯದ ರುವಾರಿ ಕರುನಾಡಿನ ರಾಯಭಾರಿಯು ನೀವಲ್ಲವೇ/ ಕನ್ನಡದಲ್ಲಿ ಸಾರೆ ಜಹಾಂಸೆ ಅಛ್ಛಾ ನುಡಿಸಿದ ಗೀತಕಾರ […]

ಕಾವ್ಯಯಾನ

ಯಾನ ಪ್ರೊ.ಕವಿತಾ ಸಾರಂಗಮಠ ಲೋಕದಿ ಆವರಿಸಿದೆ ಕೊರೊನಾ ಛಾಯೆ ನಿತ್ಯೋತ್ಸವದ ಬೆಳಕು ಆರಿತಾವ ಮಾಯೆ! ನವ್ಯ ಕಾವ್ಯದ ನೇತಾರ ಕನ್ನಡದ ಕುರಿತ ಪ್ರೀತಿ ಅಪಾರ! ಕುರಿಗಳು ಸಾರ್ ಕುರಿಗಳು ರಾಜಕೀಯ ವಿಡಂಬನೆ ಮನದಲಿಲ್ಲ ನಾ ಸಾಹಿತಿ ಎಂಬ ಅಹಂಭಾವನೆ! ಪಡೆದದ್ದು ಪದವಿ ಭೂ ವಿಜ್ಞಾನದಲ್ಲಿ ಸ್ನಾತಕೋತ್ತರ ಕನ್ನಡ ಸಾಹಿತ್ಯದಲ್ಲಿ ಏರಿದರು ಶಿಖರ! ನಗುವಿನ ದಿನವೇ ನಿಧನ ಇದುವೇ ವಿಧಿಯ ವಿಧಾನ! ಕನ್ನಡ ಸಾಹಿತ್ಯದಲ್ಲಿ ಮಾಡಿದರು ಕ್ರಾಂತಿ ವಿಧಿವಶರಾದ ಇವರ ಆತ್ಮಕ್ಕೆ ದೊರೆಯಲಿ ಶಾಂತಿ! ಒಮ್ಮೆ ನಗು ಒಮ್ಮೆ […]

ಕಾವ್ಯಯಾನ

ಜೀತ ಸ್ವಪ್ನ ಆರ್.ಎ. ಜೀತದಾಳು ಆಗಿ ಹುಟ್ಟಿ ಜೀತದ ಆಳಾಗಿ ದುಡಿ ಯೋ ಕಾಲ ನಮ್ಗೆ ಹೋಗಲಿಲ್ಲ ವ ಲ್ಲೋ ಕರ್ಮ ತಮ್ಮ ಹೋಗಲಿಲ್ಲ ವಲ್ಲೋ!!! ಜೀತ ಪದ್ದತಿ ಬೇಡ ಕಣೋ!! ನಮ್ಮ ರಕ್ತ ಸುರಿಸಿ ಅವ್ರು ಜಗ್ಗಿ ಕೂಳು ಕೊಡದೆ ಚಿತ್ರ ಹಿಂಸೆ ಕೊಡ್ತರಲ್ಲೋ ಶಿವನೇ ನಮ್ಮ ಕಷ್ಟ ದಿನಕ್ಕೆ ಕಷ್ಟ ಕೊಡ್ತಾರಲ್ಲೋ ಜೀತ ಪದ್ದತಿ ಬೇಡ ಕಣೋ!! ಬಟ್ಟೆ ಇಲ್ಲ ಬರೆ ಇಲ್ಲ ,ಸ್ನಾನ ಇಲ್ಲ ಮೈ ಮೈಲಿಗೆ ಎಲ್ಲ ನಮ್ಮ ಪಾಡು ನಾಯಿ […]

Back To Top