ಕಾವ್ಯಯಾನ

ಗಝಲ್

What are some amazing facts about Indian agriculture? - Quora

ಸಹದೇವ ಯರಗೊಪ್ಪ ಗದಗ

ಹೊಲದ ಇಳಿಜಾರಿಗೆ ಅಡ್ಡ ನೇಗಿಲ ಸಾಲುಗಳ ತೆರೆದ ಮಣ್ಣಿನ ಮಗ|
ಅಂಬರದ ಎದೆ ಸೀಳಿ ಮುಗಿಲ್ವನಿಗಳ ಗೂಡು ಕಟ್ಟಿದ ಮಣ್ಣಿನ ಮಗ||

ಒಕ್ಕಲುತನ ಕಲೆ ವಿಜ್ಞಾನ ವಾಣಿಜ್ಯಗಳ ಸಂಗಮ ಎಂದು ತೋರಿಸಿದ ಜಂಗಮ|
ನೆಲದ ಜ್ವರದ ಪರಿಗೆ ವಲಸೆ ಹೋಗುವ ತಥಿಗಳಿಗೆ ಲಗಾಮ ಜಡಿದ ಮಣ್ಣಿನ ಮಗ||

ಆಗಮೆ ಮಾಡಿದರೂ ಬೀಯಕ್ಕೆ ಭತ್ತವಿಲ್ಲದೆ ಅಗುಳು ಅನ್ನಕ್ಕಾಗಿ ಚೀರಾಟ|
ಮೋಡಗಳ ಮೈಥುನವನ್ನು ಕೆರೆ ಕಟ್ಟೆ ಬಾವಿಗಳಲ್ಲಿ ಸಂಗ್ರಹಿಸಿದ ಮಣ್ಣಿನ ಮಗ||

ಗಡಿಯಾರದಂತೆ ತಿರುಗುವ ಋತುಗಳ ಹಿಂದೆ ಮೇಟಿ ಹಿಡಿದು ತಿರುಗಿದವನು|
ಕುದಿವ ಬರಡು ನೆಲಕೆ ಹಸಿರು ಕುಸುರಿ ಸೀರೆ ಉಡಿಸಿದ ಮಣ್ಣಿನ ಮಗ||

ಹಂಗಾಮುಗಳ ಜೂಜಾಟಕ್ಕೆ ಬೇಸತ್ತು ಹಳ್ಳಿಗಳಿಗೆ ಬೆನ್ನು ಮಾಡಿ ಅಲೆದವನು|
ಆಧುನಿಕ ಕೃಷಿಯ ಕವಲುದಾರಿಗಳನ್ನು ಬೇಧಿಸಿ ಸಾಧಿಸಿದ ಮಣ್ಣಿನ ಮಗ||

ಬೆನ್ನಿಗೆ ಬೆನ್ನು ಹಚ್ಚಿ ಹಗಲಿರುಳು ದುಡಿದು ಮಣ್ಣಿಗೆ ಬೆವರು ಹನಿಗಳ ಹಿಂಡಿದವನು|
ಬರ ನೆರೆಗೆ ತಾನೇ ತುತ್ತಾದರೂ ಜಗದ ತುತ್ತಿನ ಚೀಲ ತುಂಬಿದ ಮಣ್ಣಿನ ಮಗ||

ಮಣ್ಣಿಗೆ ವಿಷ ಬೆರೆಸಿ ಜಗಕೆಲ್ಲ ವಿಷವುಣಿಸುವ ಸಾಚಿ ಕೃಷಿಗೆ ದಿಕ್ಕಾರವಿರಲಿ|
ಬಂಡಿ ಬಂಡಿ ಕುಂಡಿ ಗೊಬ್ಬರವ ಉಣಿಸಿ ಖಂಡುಗದ ರಾಶಿ ಬೆಳೆದ ಮಣ್ಣಿನ ಮಗ||

***********

Leave a Reply

Back To Top