ಕಾವ್ಯಯಾನ

ಜೀತ

ಸ್ವಪ್ನ ಆರ್.ಎ.

Bonded minor labourers in Delhi beaten with hammers for not doing ...

ಜೀತದಾಳು ಆಗಿ ಹುಟ್ಟಿ ಜೀತದ
ಆಳಾಗಿ ದುಡಿ ಯೋ ಕಾಲ ನಮ್ಗೆ
ಹೋಗಲಿಲ್ಲ ವ ಲ್ಲೋ ಕರ್ಮ
ತಮ್ಮ ಹೋಗಲಿಲ್ಲ ವಲ್ಲೋ!!!
ಜೀತ ಪದ್ದತಿ ಬೇಡ ಕಣೋ!!

ನಮ್ಮ ರಕ್ತ ಸುರಿಸಿ ಅವ್ರು ಜಗ್ಗಿ
ಕೂಳು ಕೊಡದೆ ಚಿತ್ರ ಹಿಂಸೆ
ಕೊಡ್ತರಲ್ಲೋ ಶಿವನೇ
ನಮ್ಮ ಕಷ್ಟ ದಿನಕ್ಕೆ ಕಷ್ಟ ಕೊಡ್ತಾರಲ್ಲೋ
ಜೀತ ಪದ್ದತಿ ಬೇಡ ಕಣೋ!!

ಬಟ್ಟೆ ಇಲ್ಲ ಬರೆ ಇಲ್ಲ ,ಸ್ನಾನ ಇಲ್ಲ
ಮೈ ಮೈಲಿಗೆ ಎಲ್ಲ ನಮ್ಮ ಪಾಡು
ನಾಯಿ ಗಿಂತ ಕೀಳು ಕಣೋ
ಜೀತ ಪದ್ದತಿ ಬೇಡ ಕಣೋ!!

ನಮ್ಗೆ ಮನೆಯಿಲ್ಲ,ನೆಲೆ ಇಲ್ಲ,
ಬಂಧು ಇಲ್ಲ,ಭಗಿನಿ ಇಲ್ಲ
ತಂದೆಯಿಲ್ಲ ತಾಯಿ ಇಲ್ಲ
ಸಾಯೋವಾರ್ಗು ನಾವೇ ಕತ್ತೆ
ತರ ದುಡಿಯೋ ಕರ್ಮ ನಮ್ದು
ಜೀತ ಪದ್ದತಿ ಬೇಡ ಕಣೋ!!

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು
ದೂರ ಹೋಗಿಲ್ಲ ನಮ್ಮ ಊರ
ಜೀತ ದ ಎತ್ತುಗಳು ನಾವೇ ಕಣೋ ,
ರಕ್ತ ಮುಗಿಯೋ ವರ್ಗೂ
ಜೀವ ಅಷ್ಟೆ ಕಣೋ
ಜೀತ ಪದ್ದತಿ ಬೇಡ ಕಣೋ!!

ಚಪ್ಲಿ ಇಲ್ಲ,ಚಂದ ಇಲ್ಲ ನಮ್ಮ
ಗೋಳು ಕೇಳೋರು ಇಲ್ಲ ತುತ್ತು
ಊಟ ಕೂಡ ನಟ್ಟ ಗೆ ಕೊಡುವ
ಜೀವ,ಜೀವನ ನಮ್ಗಿ ಇಲ್ವಲ್ಲೋ
ಸುಖ ಅನ್ನೋದು ನಮ್ಮ ಬಾಳಲ್ಲಿ ಬರಲ್ವಲ್ಲೋ.
ಜೀತ ಪದ್ದತಿ ಬೇಡ ಕಣೋ

*******

One thought on “ಕಾವ್ಯಯಾನ

Leave a Reply

Back To Top