ಕಾವ್ಯಯಾನ

ಋಜುವಾತು ಮಾಡಬೇಕಿದೆ

ರೇಶ್ಮಾಗುಳೇದಗುಡ್ಡಾಕರ್

Ana Rendich

ನನ್ನೊಳಗಿನ ನಾನು
ಋಜುವಾತು ಮಾಡಬೇಕಿದೆ

ನನ್ನೊಳಗಿನ ನಾನು ಋಜುವಾತು
ಮಾಡಬೇಕಿದೆ
ಎದೆಗೆ ಇಟ್ಟ ಕೊಳ್ಳಿ
ಅರುವ ಮುನ್ನ
ಹರಳುಗಟ್ಟಿದ ನೆನಪುಗಳು
ಹನಿಯಾಗಿ ಹರಿಯುವ ಮುನ್ನ
ಸೋಗಿನ ಕಡಲಲ್ಲಿ ಅಲೆಯಾಗುವ ಮುನ್ನ
ನನ್ನೊಳಗಿನ ನಾನು
ಋಜುವಾತು ಮಾಡಬೇಕಿದೆ …..

ಬಣ್ಣ ಬಣ್ಣದ ನೋಟಗಳು
ಮನದ ಹಂದರ ಸೇರುವ ಮುನ್ನ
ಮೋಹ ಸಲೆಗೆ ಅಡಿಯಾಳಾಗುವ ಮುನ್ನ
ವಾಸ್ತವದ ತಳಹದಿಯ ಮರೆಮಾಚಿ
ಭ್ರಮರ ಲೋಕಕೆ ಕಾಲಿಡುವ ಮುನ್ನ
ಬಾಂಧವ್ಯ ದ ಆಚೆಗೊ
ಸ್ನೇಹದ ಸೆಳೆತದಾಚೆಗೊ ನನ್ನ ನಾ
ಋಜುವಾತು ಮಾಡಬೇಕಿದೆ ….

ಏಳಿಗೆಯ ಬೇರುಗಳ ಕತ್ತರಿಸಿ
ಹಿಂದೆ ಮುಂದೆ ನಿಂದನೆಗೆ ಆಹಾರ
ಮಾಡಿ ನಾಜೂಕು ಮಾತುಗಳಾಡುತ
ನಮ್ಮೊಳಗೆ ಬೇರೆತು ದೂರ ಇರುವವರು
ಕತ್ತಿಮಸೆಯುವ ಮುನ್ನ ನನ್ನೊಳಗಿನ
ನಾನು ಋಜುವಾತು ಮಾಡಬೇಕಿದೆ
ನನ್ನೂಳಗಿನ ನಾನು ಋಜುವಾತು ಮಾಡಬೇಕಿದೆ

***********


                 

Leave a Reply

Back To Top