Category: ಕಾವ್ಯಯಾನ

ಕಾವ್ಯಯಾನ

ಅಂಗಳದ ಚಿಗುರು

ಕವಿತೆ ಅಂಗಳದ ಚಿಗುರು ಬಿರುಕು ಬಿಟ್ಟ ಗೋಡೆಯ ಮೌನದಲಿಅಜ್ಞಾತ ಹಕ್ಕಿಯ ಗೂಡೊಂದು ಮುಗಿಲ ಕೂಗುತಿತ್ತು ಅಂಗಳ ತುಂಬಿದ ನೀರಿನ ದಡದಲಿಮರಿಗಳ ಹಿಂಡು ಕಣ್ಣಾಮುಚ್ಚಾಲೆ ಆಡುತಪೇಪರ ಬೋಟಿನ ಕಣ್ಣೊಳಗೆಅಲೆಗಳ ಲೆಕ್ಕದಲಿ ಮೈಮರೆತವು ಅವಳು ಬಿಡುಗಣ್ಣಲಿಪಾದಕ್ಕೆರಗಿದ ಗಾಯದ ಸಲಾಕೆ ಜಾಡಿಸುತ್ತಗೋಗರಿವ ಮುಳ್ಳುಗಳ ಹೃದಯದಲಿಕಸಿ ತುಂಬೊ ರಸದ ಮುಲಾಮಾದಳು ಬಿರುಕ ಗೋಡೆಗಳ ನಡುವೆಬೆಸುಗೆಯ ಚಿತ್ತ ಬೆನ್ನೊಳಗ ಬಿಗಿದುಕೊಂಡುಹರಿವ ತೊರೆಯಲಿ ತೇಲಿ ಬರೋ ನಾವೆಯಾದಳು ಉರಿವ ಒಲೆಗಳಲಿ ಗುಪ್ತ ಬೂದಿಯಾಗಿತೇದು ತೇಗಿ ನಕ್ಷತ್ರಗಳ ನೆಲಕ್ಕಿಳಿಸಿಗುಡಿಸಲು ಕಣ್ಣೊಳಗೆಸದಾ ಹುಣ್ಣಿಮೆಯ ಚಂದಿರ ಚಿತ್ರಿಸಿಬೆಳದಿಂಗಳ ನಕ್ಷೆಯಾದಳು ಅಂಗಳದ […]

ವಿಧಾಯ ಹೇಳುತ್ತಿದ್ದೇವೆ

ಕವಿತೆ ದೇವು ಮಾಕೊಂಡ ಮಧುರ ಸ್ಪರ್ಷವಿತ್ತನೆನಪುಗಳು ಮುಳುಗುತ್ತಿವೆಕಣ್ಣುಗಳ ಮುಂದೆ ಹಾದು ಹೋಗುತ್ತಿವೆದಿನ ದಿನ ಕಳೆದ ಘಟನೆಗಳುಭಯವಿದೆ ನನಗೀಗನೂರಾರು ವರುಷಗಳಿಂದ ಪಕ್ಕೆಲುಬುಗಳಲಿಬಚ್ಚಿಟ್ಟಿದ್ದ ನೆನಪುಗಳು ಅಭದ್ರಗೊಳ್ಳುತ್ತಿವೆ ಎಂದುಹೇರಳವಾಗಿರುವ ಸಿಡಿಲು ಮಳೆ ಹನಿಗಳಿಂದ ನಾನು ಏಕಾಂಗಿಯಾಗಿದ್ದೇನೆಸ್ವರ್ಗದ ಹಾದೀಲಿದುಃಖಗಳ ಗುರುತ್ವಾಕರ್ಷಣೆಯ ತುದಿಗೆ ಒರಗಿಕೊಂಡು ನಾನೀಗಕಳೆದು ಹೋದ ಜೋತಿರ್ವರ್ಷಗಳಮೆಲಕು ಹಾಕುತ್ತ ನಿಂತಿರುವೆಲಿಖಿತ ಡೈರಿಗಳುಶೀರ್ಷಿಕೆ ರಹಿತ ಪದ್ಯಗಳುರಾತ್ರಿ ಮಂಡಿಸಿದ ಕನಸುಗಳು ಕಳೆದುಕೊಂಡುಬರಿಅರೆಬರೆ ತಿದ್ದಿದ ನಂಬಿಕೆ ಹದೀಸ್ ಪುರಾಣಗಳನಡುವೆ ನಿಂತಿದ್ದೇನೆ ನೋಡಿವರ್ಷಕ್ಕೊಂದೆರಡು ಸಲತ್ರಿವರ್ಣದ ಧ್ವಜದ ಕೆಳಗೆಮಸುಕಾದ ಹೆಜ್ಜೆಗುರುತುಗಳುಉಸಿರು ಕಟ್ಟಿದ ಗಂಟಲಿಂದ ಬರುವಶುಭಾಶಯ ಸಹಾನುಭೂತಿಗಳುಮಿನುಗುತ್ತಿವೆಮರುದಿನ ಮತ್ತೆಅಸಮ ಉಸಿರುಎದೆಬಡಿತ ! […]

ಅನುವಾದಿತ ಕವಿತೆ

ರಾಹತ್ ಇಂದೋರಿ ಕನ್ನಡಕ್ಕೆ:ರುಕ್ಮಿಣಿ ನಾಗಣ್ಣವರ ವಿರೋಧವಿದ್ದರೆ ಇರಲಿ ಅದು ಪ್ರಾಣ ಅಲ್ಲವಲ್ಲಇದೆಲ್ಲವೂ ಮುಸುಕು ಹೊಗೆ ಆಕಾಶ ಅಲ್ಲವಲ್ಲ ಬೆಂಕಿ ಹೊತ್ತಿದರೆ ಆಹುತಿ ಆಗುವವು ಬಹಳ ಮನೆಇಲ್ಲಿರುವುದು ಕೇವಲ‌ ನನ್ನ ಮನೆ ಮಾತ್ರ ಅಲ್ಲವಲ್ಲ ನಾನು ಹೇಳಿರುವುದೇ ಇಲ್ಲಿ ಅಂತಿಮಬಾಯೊಳಗೆ ಇರುವುದು ನಿನ್ನ ನಾಲಗೆ ಅಲ್ಲವಲ್ಲ ನನಗೆ ಗೊತ್ತಿದೆ ಅಸಂಖ್ಯ ವೈರಿಗಳು ಇರುವರುನನ್ನ ಹಾಗೆ ಜೀವ ಕೈಯಲ್ಲಿ ಹಿಡಿದವರು ಅಲ್ಲವಲ್ಲ ಇಂದಿನ ಈ ಪಾಳೆಗಾರಿಕೆ ನಾಳೆ ಇರುವುದಿಲ್ಲಅವರು ಬಾಡಿಗೆದಾರರು, ಸ್ವಂತದ ಮನೆ ಅಲ್ಲವಲ್ಲ ಇಲ್ಲಿನ ಮಣ್ಣಲ್ಲಿ ಎಲ್ಲರ ನೆತ್ತರ […]

ರಾಧಾ ಕೃಷ್ಣ

ಕವಿತೆ ರಾಧಾ ಕೃಷ್ಣ ಲಕ್ಷ್ಮೀ ಪಾಟೀಲ್ ಕೃಷ್ಣನ ಅಷ್ಟ ಮಹಿಷಿಯರಿಗಿಂತಲೂಹದಿನಾರು ಸಾವಿರ ನೂರುಭಕ್ತಪ್ರೇಮಿಗಳಿಗಿಂತಲೂ ಆತನ ಏಕೈಕ ಜೀವರಾಧೆಯೇ ಆತನಿಗಿಷ್ಟಗಂಡಿನಂತೆ ಸ್ವಾತಂತ್ರವನ್ನು ಉಸಿರಾಡಿದಳುಪ್ರೀತಿಗೆ ಭಾಷ್ಯ ಬರೆದಂತೆ ಬದುಕಿದಳು ಅಷ್ಟ ಮಹಿಷಿಯರು ಹದಿನಾರು ಸಾವಿರ ನೂರುಭಕ್ತ ಹೆಂಗಳೆಯರೆಲ್ಲ ಕೃಷ್ಣನ ಬರುವಿಕೆಗೆಕಾದು ಸೋತು ಹಿಡಿ ಶಾಪ ಹಾಕಿ ಮಲಗುತ್ತಿದ್ದರುಕನಸಿನಲ್ಲಿ ಸುಳಿದಂತೆ ಸುಳಿದರೆ ಬರೀ ಆತದೇಹವಾಗಿ ಜಡವಾಗುತಿದ್ದ ಮುಟ್ಟಾದುದನುಹಾಡಿರೇ ನೀವೆಲ್ಲ ಸೇರಿ ಎಂದು ಗೋಗರೆದುಬೇಡಿ ಸರಕ್ಕನೆ ಸರಿಸಿ ರಾಧೆಯ ಕೂಗಿಗೆಹಾತೊರೆದು ಓಡುತ್ತಿದ್ದ ಮನಬಿಟ್ಟು ಕದಲದೆಆತ್ಮವಾಗಿ ಅರಳುತ್ತಿದ್ದ ರಾಧೆ ಕಾಯಿಸಿ ಮಜಾ ಉಡಾಯಿಸಿದಾಗಲೆಲ್ಲಪುಟಿವ ಚೆಂಡಾಗಿ […]

ದೇವರು

ಕವಿತೆ ದೇವರು ಮಾಲತಿ ಶಶಿಧರ್ ನಿನ್ನ ಮೆಚ್ಚಿಸಲೇಬೇಕೆಂಬಇರಾದೆಯೇನಿಲ್ಲ ಹುಡುಗ,ಸೊಡರ ಹೊತ್ತಿಸುವುದುದೇವರ ಮೆಚ್ಚಿಸುವುದಕ್ಕಲ್ಲಮನವ ಒಪ್ಪಿಸಲು… ನಿನ್ನ ಒಲಿಸಿಕೊಳ್ಳಲೇಬೇಕೆಂಬಹಠವೇನಿಲ್ಲ ಹುಡುಗ,ಹೂವ ಅರ್ಪಿಸುವುದುದೇವರ ಒಲಿಸಲಲ್ಲಭಕ್ತಿ ತೋರಿಸಲು… ನಿನ್ನ ಪಡೆಯಲೇಬೇಕೆಂಬಸಂಕಲ್ಪವೇನಿಲ್ಲ ಹುಡುಗ,ನೈವೇದ್ಯೆ ಕೊಡುವುದುದೇವರು ಪ್ರತ್ಯಕ್ಷವಾಗಲಿ ಎಂದಲ್ಲಪ್ರೀತಿ ಸಮರ್ಪಿಸಲು… ನಿನ್ನ ಮೆಚ್ಚಿಸಿ, ಒಲಿಸಿ, ಪಡೆದುಬಿಟ್ಟರೆಎಲ್ಲರಂತೆ ಕೇವಲಮನುಜನಾಗಿಬಿಡುವೆ,ನೀನೆಂದಿಗೂ ಮನದ ಗುಡಿಯೊಳಗೆನೆಲೆಸಿರುವ ನನ್ನ ದೇವರಾಗೆ ಉಳಿದುಬಿಡು **********************

ಕವಿತೆ

ನೀನಿರಬೇಕು ಎಚ್. ಕೆ. ನಟರಾಜ ಇಳಿಸಂಜೆ ನಾನು ಮುಳುಗುವ ಸೂರ್ಯ..ನೀನೋ ರಾತ್ರೀ ಪ್ರೀತಿಸುವ ಆಗಸದ ಚಂದ್ರಮ.ಆದರೂ ಸೂರ್ಯ ಬೆಳಗುತ್ತಲೇಇರುತ್ತಾನೆ..ಚಂದ್ರ ನೀರಂತರ..ಮುದ ಕೊಡುತ್ತಿರುತ್ತಾನೆ.ನಿನ್ನಂತೆ ನಿನ್ನ ನಗುವಿನಂತೆಈ ಕತ್ತಲೆ ಬೆಳದಿಂಗಳಾಟದ ಗೊಂಬೆ ನಾನು.ಕತ್ತಲೆಯ ನಿಶೆತುಂಬಿದ ಮರುಳಹಗಲಿನಲ್ಲಿ ಬದುಕಿನ ಬಯಲಾಟದಪಾತ್ರವಾದರೂ ಆರ್ಭಟಿಸುವುದು ಇರುಳ ಬೆಳಕಿನಾಟದಲೆ..ಒಡ್ಡೋಲಗ ಪ್ರಭುಗಳು.ನೀನೆಂದರೆ ನೀನೇ ಒಡಲಾಳದ ಕರುಣೆಉಕ್ಕಿ ಬರಲು ಒಲುಮೆಯ ಚಿಲುಮೆ ಕನಸುಕಂಗಳಿಗೆ ಕಾರಿರುಳ ರಾತ್ರಿಯಲಿದೀಪ ದೀವಿಗೆಯಾಗಿ ಕಾಡುವ ನಿನನಗುವಿನಂದದಿ..ಮಲ್ಲಿಗೆ ಚಫ್ಪರಕಟ್ಟುವ ಬಯಕೆಯ ತಿರುಕ ನಾನು..ಪ್ರೇಮತಪೋವನದ ಸಂತನೂ ನಾನುನಕ್ಕು ಬಿಡೆ ಒಮ್ಮೆ.. ಕೇಕೇ ಹಾಕಿ.. ಹಸಿಇನಾಳಕೆ ಇಳಿಯಲೀ ಭೀಬತ್ಸ.. […]

ಕವಿತೆ

ಕವಿತೆ ಹಾಳೆ ತಿರುವಿದರೆ ಅಧ್ಯಾಯ ಮುಗಿಯದುಧರ್ಮಸ್ಥಾಪನೆಗೆ ಮತ್ತೆ ಮತ್ತೆ ಬರುತ್ತೇನೆಂದವಹೇಳಿದ್ದೂ ಅದನ್ನೇಎಲ್ಲವೂ ಮುಗಿಯದ ಅಧ್ಯಾಯ ದಾರಿಗಳು ಎಂದೋ ಕವಲೊಡೆದವುಎಲ್ಲ ಮರೆತಂತೆ ಹೆಜ್ಜೆಗಳೂ ನಡೆದವುಉಸಿರು ಭಾರದ ಜೋಕಾಲಿಜೀಕಿದಷ್ಟೂ ಎಳೆದಾಡುತ್ತಿತ್ತು ಕಟಕಟೆಯ ತೀರ್ಪಿನಲ್ಲಿಇವರು ಬೇರೆ ಬೇರೆಉಳಿಯುವುದು ಏನಿದ್ದರೂ ಲೆಕ್ಕಾಚಾರಉತ್ತರ ಹುಡುಕುವ ಪುಟ್ಟ ಕಂಗಳಲ್ಲಿಪ್ರಶ್ನೆಗಳ ಮಹಾಪೂರ ಹಾಳೆಗಳೂ ನಾಳೆಗಳಂತೆಕರೆದಷ್ಟೂ ತೆರೆಯುತ್ತವೆಚುಕ್ಕೆಯಿಡುವ ಮುನ್ನ ಅಲ್ಪವಿರಾಮಮುಗಿಸಲು ಮನಸ್ಸಿಲ್ಲಹೇಗೆಂದರೂಇದು ಮುಗಿಯದ ಅಧ್ಯಾಯ.

ಕವಿತೆ

ಕರೋನಾದ ಕತ್ತಲು ರೇಷ್ಮಾ ಕಂದಕೂರ ಕಳೆಗುಂದಿದೇಕೋ ಮೈಮನಸುಳಿಯದೆ, ನಿನ್ನ ಛಾಯೆ ಸೋಕದೆ ಭ್ರಾಂತಿಯ ಕೇಡು ತಾಗಿಮತಿ ಬಿರುಕಿನ ಕಂದಕದ ಮಾಯೆಗತಿ ಮೀರಿದೆ ಕನಸ ತೇಪೆ ನಿನ್ನಂತರಾಳವ ಹೊಕ್ಕಿರುವೆನೆಂದುಕಕ್ಕಾಬಿಕ್ಕಿಯಾಗಿರುವೆ ತಿಕ್ಕಲು ತನದಿ ಬಿಕ್ಕುತಲಿರುವೆ ಬದುಕಿನ ಚುಕ್ಕಾಣಿಯ ಹಿಡಿಯಲುದಕ್ಕಬಹುದೆ ಒಲುಮೆಅತೀ ಪ್ರೀತಿಯ ಪಾಪಶಂಕೆ ಬೆಂಗಾಡಿನ ವಶವಾಗಿರುವೆತಿದ್ದಿ ತೀಡಲುಪ್ರಗತಿಗೆ ಭಯ ಬುದ್ದಿ ಭ್ರಮಣೆಗೆಅನಂತ ಕನಸುಅದು ಹಾಗೆಯೇನಾಳೆಯಾದರೂ ಆಗಲಿಬದುಕಿನ ಅನಂತ ದಕ್ಕಲಿ **********************

ಕವಿತೆ

ಕಣ್ಣೀರಿಗೆ ದಂಡೆ ಸಾಕ್ಷಿ ನಾಗರಾಜ ಹರಪನಹಳ್ಳಿ -೧-ಬೀಜಕ್ಕೆ ನೆಲವಾದರೇನುಗೋಡೆಯ ಬಿರುಕಾದರೇನುಬೇಕಿರುವುದುಒಂದು ಹಿಡಿ ಮಣ್ಣು, ಹನಿಯಷ್ಟು ನೀರು -೨- ನದಿಯಾರಿಗೆ ತಾನೇ ಬೇಡ -೩-ನದಿ ಎಷ್ಟೇ ಕವಲಾಗಿ ಹರಿದರೂಕೊನೆಗೆ ಸೇರುವುದು ಕಡಲನ್ನೇ -೪-ಕೋಣೆನಿಟ್ಟುಸಿರಿಗೆ ಫ್ಯಾನ್ಗಾಳಿ ಹಾಕಿದೆ -೫-ಅವಳುನೆರಳಾಗಿದ್ದಳು ಕನ್ನಡಿಯಲ್ಲಿಈಗಅದಕ್ಕೂ ವಿರಹ -೬ಅಲೆಗಳ ಕಣ್ಣೀರಿಗೆದಂಡೆ ಸಾಕ್ಷಿ -೭-ಕಾಯುವುದು ಎಂದರೆಎದೆಯೊಳಗೆಕನಸುಗಳ ಬಿತ್ತುವುದು -೮-ಸಹನೆ ಇದೆಯಾಹಾಗಾದರೆ ;ನಾಳೆಯೂ ಇದೆ -೯-ಆಸೆಯ ಬೆನ್ನು ಹತ್ತುಸಂಚುಗಳಅರ್ಥಮಾಡಿಕೊದಾರಿ ಹೊಳೆದೀತು -೧೦-ಬದುಕಿನ ಅಂತಿಮ‌ ಸತ್ಯಏನುಏನುಏನುಏನು ಅಂದರೆಬಯಲಲ್ಲಿ ಬಯಲಾಗು************************************************–

ಕವಿತೆ

ಸಂಗಾತಿ ಅರುಣಾ ರಾವ್ ಎನ್ನ ಮನ ದೇಗುಲದಗಂಟೆಯನು ಬಾರಿಸಿಪ್ರೀತಿಯ ಬಡಿದೆಬ್ಬಿಸಿದಇನಿಯ ನೀ ಯಾರು? ಆ ನಾದವನು ಕೇಳಿತಲೆದೂಗುವ ಹಾವಂತೆಎನ್ನ ನಿನ್ನೆಡೆಗೆ ಸೆಳೆದಿಹಸಖ ನೀ ಯಾರು? ಬತ್ತಿದ್ದ ಎನ್ನ ಬಾಳಲ್ಲಿಪ್ರೀತಿ ಹನಿಗಳ ಚಿಮುಕಿಸಿಒಲವ ಹೊಳೆ ಹರಿಸಿದಗೆಳೆಯ ನೀ ಯಾರು? ಮುಚ್ಚಿದ್ದ ಎದೆ ಬಾಗಿಲಿನಚಿಲಕವನು ಅತ್ತ ಸರಿಸಿಒಳ ಹೊಕ್ಕು ನಿಂತಿಹಸಂಗಾತಿ ನೀ ಯಾರು? ನೀ ಯಾರಾದರೇನುಈಗಂತೂ ನನ್ನವ ನೀನುಎನ್ನ ಬಾಳ ದೇಗುಲಕೆಹೊನ್ನ ಕಳಶ| *******************************

Back To Top