ನೀನಿರಬೇಕು
ಎಚ್. ಕೆ. ನಟರಾಜ
ಇಳಿಸಂಜೆ ನಾನು ಮುಳುಗುವ ಸೂರ್ಯ..
ನೀನೋ ರಾತ್ರೀ ಪ್ರೀತಿಸುವ ಆಗಸದ ಚಂದ್ರಮ.
ಆದರೂ ಸೂರ್ಯ ಬೆಳಗುತ್ತಲೇ
ಇರುತ್ತಾನೆ..
ಚಂದ್ರ ನೀರಂತರ..ಮುದ ಕೊಡುತ್ತಿರುತ್ತಾನೆ.
ನಿನ್ನಂತೆ ನಿನ್ನ ನಗುವಿನಂತೆ
ಈ ಕತ್ತಲೆ ಬೆಳದಿಂಗಳಾಟದ ಗೊಂಬೆ ನಾನು.
ಕತ್ತಲೆಯ ನಿಶೆತುಂಬಿದ ಮರುಳ
ಹಗಲಿನಲ್ಲಿ ಬದುಕಿನ ಬಯಲಾಟದ
ಪಾತ್ರವಾದರೂ ಆರ್ಭಟಿಸುವುದು ಇರುಳ ಬೆಳಕಿನಾಟದಲೆ..ಒಡ್ಡೋಲಗ ಪ್ರಭುಗಳು.
ನೀನೆಂದರೆ ನೀನೇ ಒಡಲಾಳದ ಕರುಣೆ
ಉಕ್ಕಿ ಬರಲು ಒಲುಮೆಯ ಚಿಲುಮೆ
ಕನಸುಕಂಗಳಿಗೆ ಕಾರಿರುಳ ರಾತ್ರಿಯಲಿ
ದೀಪ ದೀವಿಗೆಯಾಗಿ ಕಾಡುವ ನಿನ
ನಗುವಿನಂದದಿ..ಮಲ್ಲಿಗೆ ಚಫ್ಪರ
ಕಟ್ಟುವ ಬಯಕೆಯ ತಿರುಕ ನಾನು..
ಪ್ರೇಮತಪೋವನದ ಸಂತನೂ ನಾನು
ನಕ್ಕು ಬಿಡೆ ಒಮ್ಮೆ.. ಕೇಕೇ ಹಾಕಿ.. ಹಸಿಇನಾಳಕೆ ಇಳಿಯಲೀ ಭೀಬತ್ಸ.. ಚಂದ್ರ ನಗುತ್ತಾನೆ
ಹೀಗೇಕೆ ಮಾಡಿದೆ ತರುಣೆ.. ಕೇಳುತ್ತಾನೆ
ಕನಸುಕಂಗಳಿಗೆ ಹರಿದ ಮಬ್ಬುಕಗ್ಗತ್ತಲೆ
ನೀನಾಗು ನನ್ನ ನಗುವಿನ ತಿಳಿನೊರೆ.. ಬೆಳ್ನೊರೆ.
ಅಪ್ಪಿಬಿಡು ಮನಸಾರೆ..
ಸಂಗತಿಗಳೇನು ಘಟಿಸಿಲ್ಲವಿಲ್ಲಿ.. ಅಸಂಗತವೂ
ಸುಸಂಗತವೋ.. ಅರಿಯುವ ತವಕದೊಳಗೆ
ಇದ್ದವರ್ಯಾರು..?
ಬೆಚ್ಚಿ ಓಡುವ ಕುದುರೆ ಹಿಡಿದವರ್ಯಾರು..
ಬಂದು ಬಿಡೆ ನನ ಮನದೊಳಗೆ ನುಗ್ಗಿಬಿಡೆ
ತಡೆಯುವರ್ಯಾರು.. ನನ್ನ ಪದನುಡಿಯ
ಪ್ರೀತಿಥೇರಿಗೆ ಅಡ್ಡ ನಿಲ್ಲುವರಾರು…??!!
ಇರಬೇಕು ನೀನು.. ನಕ್ಷತ್ರಗಳ ನಗುವಾಗಿ..
ಹೊಳಪಾಗಿ ಇಳಿಸಂಜೆ ಸೂರ್ಯನ ಹೊನಲಾಗೀ. .
ಚಂದ್ರನ ತಂಪಾಗಿ.. ನನ್ನೊಲವ ಇಂಪಾಗಿ.. ಕಾವ್ಯಕನ್ನಿಕೆಯಾಗಿ ಏದೆಯಾಳದಿ ಸೊಂಪಾಗಿ
ಕೊರಳ ಹಾಡಿನ ಪದವಾಗಿ.. ಕಿವಿ ತಣಿಸೋ ಮಾಧುರ್ಯವಾಗಿ.. ನನ್ನ ಪ್ರೀತಿಯರಮನೆಯ ಅರಸಿಯಾಗಿ.. ಇರಬೇಕು ನೀನು..
ನನ್ನೊಲವ ಸಿರಿಯಾಗಿ ಬಿಸಿ ಬಯಕೆಯ
ಉಸಿರಾಗಿ..
**********************
ಬಹಳ ಚಂದದ ಕವಿತೆ ಸರ್… ಭಾವವೇ ಮೇಳೈಸಿವೆ….
ಕವನದ ಅಭಿವ್ಯಕ್ತಿಯನ್ನು ಆಸ್ವಾದಿಸುವ ಮುನ್ನವೇ ಕಣ್ಣಿಗೆ ರಾಚುವ ಅಕ್ಷರ ದೋಷಗಳು ಓದುಗನನ್ನು ಹಿಂದೆ ತಳ್ಳುತ್ತದೆ.
ಕತ್ತಲೆ ಎಂದರೂ ನಿಶೆ ಎಂದರೂ ಒಂದೇ ಅರ್ಥ. ಕತ್ತಲೆಯ ನಿಶೆ ತುಂಬಿದ ಎನ್ನುವುದು ಯಾವ ಅರ್ಥ ಬಿಂಬಿಸೀತು?
ಹಸಿಇನಾಳಕೆ?!!
ನಿರಂತರ, ಚಪ್ಪರ, ತೇರು, ಎದೆಯಾಳ ಇತ್ಯಾದಿ ಪದಗಳು ಅಕ್ಷರ ದೋಷಗಳಿಂದ ಕೂಡಿವೆ.
ಕವನ ಚಂದವಿದೆ. ಸೊಗಸು..
ತುಸು ವಾಚ್ಯವಾಯಿತು!!