ಕವಿತೆ

ಕರೋನಾದ ಕತ್ತಲು

ರೇಷ್ಮಾ ಕಂದಕೂರ

ಕಳೆಗುಂದಿದೇಕೋ ಮೈಮನ
ಸುಳಿಯದೆ, ನಿನ್ನ ಛಾಯೆ ಸೋಕದೆ

ಭ್ರಾಂತಿಯ ಕೇಡು ತಾಗಿ
ಮತಿ ಬಿರುಕಿನ ಕಂದಕದ ಮಾಯೆ
ಗತಿ ಮೀರಿದೆ ಕನಸ ತೇಪೆ

ನಿನ್ನಂತರಾಳವ ಹೊಕ್ಕಿರುವೆನೆಂದು
ಕಕ್ಕಾಬಿಕ್ಕಿಯಾಗಿರುವೆ ತಿಕ್ಕಲು ತನದಿ

ಬಿಕ್ಕುತಲಿರುವೆ ಬದುಕಿನ ಚುಕ್ಕಾಣಿಯ ಹಿಡಿಯಲು
ದಕ್ಕಬಹುದೆ ಒಲುಮೆ
ಅತೀ ಪ್ರೀತಿಯ ಪಾಪಶಂಕೆ

ಬೆಂಗಾಡಿನ ವಶವಾಗಿರುವೆ
ತಿದ್ದಿ ತೀಡಲು
ಪ್ರಗತಿಗೆ ಭಯ

ಬುದ್ದಿ ಭ್ರಮಣೆಗೆ
ಅನಂತ ಕನಸು
ಅದು ಹಾಗೆಯೇ
ನಾಳೆಯಾದರೂ ಆಗಲಿ
ಬದುಕಿನ ಅನಂತ ದಕ್ಕಲಿ

**********************

Leave a Reply

Back To Top