ರಾಹತ್ ಇಂದೋರಿ
ಕನ್ನಡಕ್ಕೆ:ರುಕ್ಮಿಣಿ ನಾಗಣ್ಣವರ
ವಿರೋಧವಿದ್ದರೆ ಇರಲಿ ಅದು ಪ್ರಾಣ ಅಲ್ಲವಲ್ಲ
ಇದೆಲ್ಲವೂ ಮುಸುಕು ಹೊಗೆ ಆಕಾಶ ಅಲ್ಲವಲ್ಲ
ಬೆಂಕಿ ಹೊತ್ತಿದರೆ ಆಹುತಿ ಆಗುವವು ಬಹಳ ಮನೆ
ಇಲ್ಲಿರುವುದು ಕೇವಲ ನನ್ನ ಮನೆ ಮಾತ್ರ ಅಲ್ಲವಲ್ಲ
ನಾನು ಹೇಳಿರುವುದೇ ಇಲ್ಲಿ ಅಂತಿಮ
ಬಾಯೊಳಗೆ ಇರುವುದು ನಿನ್ನ ನಾಲಗೆ ಅಲ್ಲವಲ್ಲ
ನನಗೆ ಗೊತ್ತಿದೆ ಅಸಂಖ್ಯ ವೈರಿಗಳು ಇರುವರು
ನನ್ನ ಹಾಗೆ ಜೀವ ಕೈಯಲ್ಲಿ ಹಿಡಿದವರು ಅಲ್ಲವಲ್ಲ
ಇಂದಿನ ಈ ಪಾಳೆಗಾರಿಕೆ ನಾಳೆ ಇರುವುದಿಲ್ಲ
ಅವರು ಬಾಡಿಗೆದಾರರು, ಸ್ವಂತದ ಮನೆ ಅಲ್ಲವಲ್ಲ
ಇಲ್ಲಿನ ಮಣ್ಣಲ್ಲಿ ಎಲ್ಲರ ನೆತ್ತರ ಹನಿಯೂ ಸೇರಿದೆ
ಈ ಹಿಂದೂಸ್ತಾನ್ ಯಾರ ಅಪ್ಪನದೂ ಅಲ್ಲವಲ್ಲ
******************************
ಅನುವಾದ ಆಪ್ತವಾಯಿತು..
ಶುಭವಾಗಲಿ
ಧನ್ಯವಾದಗಳು ಸರ್…
Very well transacted…I had heard this from Rahatji in mushira programme on ETV Urdu..You have retained its flavour and the zeal in it ❤️
ಧನ್ಯವಾದಗಳು ಸರ್ 🙂
ಚೆನ್ನಾಗಿದೆ
ಧನ್ಯವಾದಗಳು ಸರ್…
Nice poem Rukmini
ಧನ್ಯವಾದಗಳು ಸರ್
ಧರ್ಮದ ಅಮಲು ತುಂಬಿದವರಿಗೆ ಅದರಿಂದ ಹೋರಬರಲು ನಿಮ್ಮ ಕವಿತೆಯೊಂದು ಔಷಧಿಯಾಗಿದೆ ಮೇಡಂ ತುಂಬಾ ಆಪ್ತ ಎನಿಸುವ ಅನುವಾದ ಮೇಡಂ ತುಂಬಾ ಇಷ್ಟವಾಗಿ ಐದುಬಾರಿ ಓದಿದೇನೆ ಆದರೆ ಅದರ ಘಮಲಿನಿಂದ ಹೋರಬರಲ್ಲು ಆಗುತ್ತಿಲ್ಲ ಮೇಡಂ
ಧನ್ಯವಾದಗಳು ತಮ್ಮ ಪ್ರತಿಕ್ರಿಯೆಗೆ
ಮೇಡಂ ಜೀ ಬಹೊತ್ ಅಚ್ಚಾ ಅನುವಾದ್ ಕಿಯಾ ಹೈ ಆಪ್ನೆ, ಜಿಸ್ಕೊ ಉರ್ದು ನಹಿ ಆತಿ, ಲಾಹೋರ್ ಇಂದೋರಿ ಸಾಹೆಬ್ ಕೆ ಹರ್ ಏಕ್ ಶೇರ್, ಔರ್ ವುನ್ಕಾ ಶಾಯರಿ ಸೇ ಪ್ಯಾರ್ ವತನ್ ಸೇ ಮೊಹಬ್ಬತ್.. Thank you ji
ಧನ್ಯವಾದಗಳು ಮೇಡಂ ಜೀ.
ಚೆಂದವಾಗಿ ಅನುವಾದಿಸಿದ್ದೀರಿ. ಅನುವಾದದ ಪ್ರಕ್ರೀಯೆ ಹೀಗೆಯೇ ಮುಂದುವರೆಯಲಿ.
ಧನ್ಯವಾದಗಳು ತಮ್ಮ ಪ್ರತಿಕ್ರಿಯೆಗೆ… ಖಂಡಿತ ಬರೆಯುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವೆ.
ರಾಹತ್ ಇಂಧೋರಿ ಅವರ ವಾಚನದಲ್ಲೇ ಕೇಳಿದ್ದೆ…. ಅದರ ಅನುವಾದ ಚೆನ್ನಾಗಿ ಮಾಡಿದೀರಾ.. ರುಕ್ಕಮ್ಮ…
ಧನ್ಯವಾದಗಳು ಸರ್… 🙂
ಅದ್ಭುತ ಅಕ್ಕಾ
ಅನುವಾದ ಆಪ್ತವಾಗಿದೆ