ದೇವರು

ಕವಿತೆ

ದೇವರು

ಮಾಲತಿ ಶಶಿಧರ್

ನಿನ್ನ ಮೆಚ್ಚಿಸಲೇಬೇಕೆಂಬ
ಇರಾದೆಯೇನಿಲ್ಲ ಹುಡುಗ,
ಸೊಡರ ಹೊತ್ತಿಸುವುದು
ದೇವರ ಮೆಚ್ಚಿಸುವುದಕ್ಕಲ್ಲ
ಮನವ ಒಪ್ಪಿಸಲು…

ನಿನ್ನ ಒಲಿಸಿಕೊಳ್ಳಲೇಬೇಕೆಂಬ
ಹಠವೇನಿಲ್ಲ ಹುಡುಗ,
ಹೂವ ಅರ್ಪಿಸುವುದು
ದೇವರ ಒಲಿಸಲಲ್ಲ
ಭಕ್ತಿ ತೋರಿಸಲು…

ನಿನ್ನ ಪಡೆಯಲೇಬೇಕೆಂಬ
ಸಂಕಲ್ಪವೇನಿಲ್ಲ ಹುಡುಗ,
ನೈವೇದ್ಯೆ ಕೊಡುವುದು
ದೇವರು ಪ್ರತ್ಯಕ್ಷವಾಗಲಿ ಎಂದಲ್ಲ
ಪ್ರೀತಿ ಸಮರ್ಪಿಸಲು…

ನಿನ್ನ ಮೆಚ್ಚಿಸಿ, ಒಲಿಸಿ, ಪಡೆದುಬಿಟ್ಟರೆ
ಎಲ್ಲರಂತೆ ಕೇವಲ
ಮನುಜನಾಗಿಬಿಡುವೆ,
ನೀನೆಂದಿಗೂ ಮನದ ಗುಡಿಯೊಳಗೆ
ನೆಲೆಸಿರುವ ನನ್ನ ದೇವರಾಗೆ ಉಳಿದುಬಿಡು

**********************

18 thoughts on “ದೇವರು

  1. ಕವಿತೆಯನ್ನು ಒಂದು ಔನ್ನತ್ಯದ ತುದಿಗೆ ತಲುಪಿಸಿ,ವಾಪಾಸ್ ಬರುವುದು ಅಂದರೆ ಹೀಗೆ….ಚೆಂದ ಕವಿತೆ

  2. ಖಂಡಿತಾ ರಾಜ್ಯ ಮಟ್ಟದ ಕವಯಿತ್ರಿಯರ ಸಾಲಿಗೆ ಬರುತ್ತೀರಿ. ಶುಭವಾಗಲಿ

Leave a Reply

Back To Top