ಕವಿತೆ

ಸಂಗಾತಿ

ಅರುಣಾ ರಾವ್

A red heart in hands, a face and lines. Cubistic painting.

ಎನ್ನ ಮನ ದೇಗುಲದ
ಗಂಟೆಯನು ಬಾರಿಸಿ
ಪ್ರೀತಿಯ ಬಡಿದೆಬ್ಬಿಸಿದ
ಇನಿಯ ನೀ ಯಾರು?

ಆ ನಾದವನು ಕೇಳಿ
ತಲೆದೂಗುವ ಹಾವಂತೆ
ಎನ್ನ ನಿನ್ನೆಡೆಗೆ ಸೆಳೆದಿಹ
ಸಖ ನೀ ಯಾರು?

ಬತ್ತಿದ್ದ ಎನ್ನ ಬಾಳಲ್ಲಿ
ಪ್ರೀತಿ ಹನಿಗಳ ಚಿಮುಕಿಸಿ
ಒಲವ ಹೊಳೆ ಹರಿಸಿದ
ಗೆಳೆಯ ನೀ ಯಾರು?

ಮುಚ್ಚಿದ್ದ ಎದೆ ಬಾಗಿಲಿನ
ಚಿಲಕವನು ಅತ್ತ ಸರಿಸಿ
ಒಳ ಹೊಕ್ಕು ನಿಂತಿಹ
ಸಂಗಾತಿ ನೀ ಯಾರು?

ನೀ ಯಾರಾದರೇನು
ಈಗಂತೂ ನನ್ನವ ನೀನು
ಎನ್ನ ಬಾಳ ದೇಗುಲಕೆ
ಹೊನ್ನ ಕಳಶ|

*******************************

Leave a Reply

Back To Top