ಕಾವ್ಯ ಜುಗಲ್ ಬಂದಿ ಖಾಲಿತನದ ಗಳಿಗೆಯ ಕವಿತೆಗಳು ಬದುಕಿನ ಖಾಲಿತನದ ಕುರಿತಾಗಿ ಕವಯತ್ರಿ ಶ್ರೀಮತಿ ವೀಣಾ ಪಿ. ಹಾಗೂ ಮಾಧವ ‘ತನ್ನ ಗುರುತನ್ನು ಹೊರಜಗತ್ತಿಗೆ ತೋರಿಸಿಕೊಳ್ಳಲಿಚ್ಛಿಸದ ಕವಿ’ – ಇವರಿಬ್ಬರ ಕಾವ್ಯ ಜುಗಲ್ ಬಂದಿ ಸಂಗಾತಿ ಓದುಗರಿಗಾಗಿ… ಖಾಲಿತನದ ಗಳಿಗೆಯ ಕವಿತೆಗಳು ಗಳಿಗೆ-೧ ಖಾಲಿತನ ಹ್ಞೂಂ……..!! ಖಾಲಿತನವೆಂಬುದು ಬರೀ ಭ್ರಮೆಯಷ್ಟೇ..ಒಲವು- ಚೆಲುವು-ಬೆರಗು ಭಾವಗಳ ತೇವ ಇಂಗಿದ ಮೇಲೂಹಾಯ್ವ ನೆನಪ ಮಂದಾನಿಲ ಒತ್ತುತ್ತಲಿರುವುದುಕಾಣದಂತೆಮನದ ಗಡಿಗೆಯಲ್ಲಿ.. ಖಾಲಿತನವೆಂದೆಯಲ್ಲವೇ ತೋರು ಅದೆಲ್ಲಿ…?? ವೀಣಾ ಪಿ. ಭ್ರಮೆಯ ಭಾವವೇನಲ್ಲ ನನ್ನೊಳಗಿನ ಖಾಲಿತನ ಬಿಸಿಲ […]
ಗಜಲ್
ಗಜಲ್ ಡಾ.ರೇಣುಕ ಅರುಣಕುಮಾರ ಕಠಾರಿ ಹಣೆ ಬರಹವೆಂದು ಕೈ ಕಟ್ಟಿ ಮಾತಿದ್ದೂ ಸುಮ್ಮನೆ ಕೂಡಬೇಕೆ ಈ ಲೋಕದೆದುರುಒಳಮನೆಯ ಹೊಸ್ತಿಲಳೊಗೆ ಮೈಲಿಗೆಂದು ಕುದಿಯಬೇಕೆ ಈ ಲೋಕದೆದುರು ಮಡಿ ಮೈಲಿಗೆಯ ಮನದೆದುರು ಬೆತ್ತಲೆ ಒಂದಾಗಿದೆ ಬದುಕುಮನಸಿಗೆ ಮೈಲಿಗೆ ಇಲ್ಲವೆಂದು ತಿಳಿದರು ದೂರವಾಗಬೇಕೆ ಈ ಲೋಕದೆದುರು ಮೂರರೊಳಗೆ ಬಂಧನ ಮೂರರೊಳಗೆ ಬೆಂದೇನಾ ಧರ್ಮದೆದುರುಹೆಣ್ಣನೇ ದೇವರು ಮಾಡಿದ ಬದುಕಿನೊಳಗೆ ಮಾತನು ಅಡವಿಡಬೇಕೆ ಈ ಲೋಕದೆದುರು ಬೆಂಕಿಗೆ ಹಾರಿದವಳೊಬ್ಬಳು ಬೆನ್ನು ಹತ್ತಿದವಳೊಬ್ಬಳು ಕಲ್ಲಾಗಿ ಕಾದವಳೊಬ್ಬಳು ಚರಿತ್ರೆಯೇ ಹೀಗೆಗಾದೆಯೊಳಗೆ ನೇಣು ಬಿಗಿದರೂ ನಮ್ಮ ಕುಲವನು ಕುರುಡಾಗಬೇಕೆ […]
ಅಮ್ಮಾ-ನೆನಪು!
ಕವಿತೆ ಅಮ್ಮಾ-ನೆನಪು! ಹೇಮಚಂದ್ರದಾಳಗೌಡನಹಳ್ಳಿ ಸದಾ ಕಾಡುವನನ್ನೊಳಗಲಿ ಇಣುಕುವ ಕೆಡುಕನು ಸುಡುವ,,ಹೊಸ ಆಲೋಚನೆ ಯೋಜನೆಗೆ ಪ್ರೇರಿಸುವ,,ನನ್ನುಸಿರೊಳಗೆ ಬೆರೆತೇನೋ ಉಸುರುತಿರುವಂತೆ,ನಿನ್ನ ನೆನಪು…. ಸದಾ ಕಾಡುವನನ್ನನಾಗ ತಿದ್ದಿ ತೀಡಿ ನಿನ್ನ ಮೆಚ್ಚು ರೂಪ ನೀಡಿಇಂದಿಗೂ ಕನಸಾಗಿ ಬಂದು ಕೂಗಿ ಎಬ್ಬಿಸುವ..ಸರಿ ದಾರಿದೋರಿ ಮುನ್ನಡೆಸುವ ಹಂಬಲಿ..ಹಸಗಟ್ಟಿದ ಹೊಟ್ಟೆಯ ಮಾಸಲು ಬಟ್ಟೆಯಮುಗುಳುನಗುಮೊಗದ ನಿನ್ನಾ ನೆನಪು ಸದಾ ಕಾಡುವದುಡಿದು ನೀನು ದಣಿದು ನಮಗೆ ತಣಿಸಿಹಸಿವನೇ ಹೊತ್ತು ಹುಸಿನಗುವಲದನು ಮುಚ್ಚಿಖಾಲಿಮಡಕೆ ನಮಗೆ ಹಣ್ಣುಗಳನೇ ತುಂಬಿಹಣ್ಣಿನಮಡಕೆ ಸ್ಥಾನ ನೀಡಿ..ತಿನ್ನದೊಂದನೂಜೋಪಾನಿಸಿ ನಡೆದಾ..ನಿನ್ನ ನೆನಪು.. ಸದಾ ಕಾಡುವಬೇಕು ನೀನೆಂಬ ಭಾವದ ನೋವತಾಳಿಕೊಂಡಿದೆ […]
ನನ್ನಪ್ಪನ ಕನ್ನಡಕ
ಕವಿತೆ ನನ್ನಪ್ಪನ ಕನ್ನಡಕ ವಿಶ್ವನಾಥ ಎನ್. ನೇರಳಕಟ್ಟೆ ನನ್ನಪ್ಪ ತೊಟ್ಟ ಕನ್ನಡಕ ಕಂಡಿದೆ ಎಲ್ಲವನ್ನೂ- ಏಳ್ನೂರರ ಪಗಾರದಲ್ಲಿ ಪ್ರತಿ ತಿಂಗಳ ಕ್ಯಾಲೆಂಡರ್ ತಿರುವಿಹಾಕಿದ್ದನ್ನುತಣ್ಣೀರು ಕುಡಿದು ಹೊಟ್ಟೆ ತಂಪಾಗಿಸಿಕೊಂಡದ್ದನ್ನುಕಣ್ಣೀರು ಕಾಣದಂತೆ ನಗೆಯಾಡಿದ್ದನ್ನು ಬಾಡಿಗೆ ಮನೆಯ ಮುರುಕುಬಾಗಿಲನ್ನು ರಾತ್ರಿ ಕಾದದ್ದನ್ನುವಾರಾನ್ನದ ಬೆಳಕಲ್ಲಿ ಬಾಳುಬೆಳಗಿಸಿಕೊಂಡದ್ದನ್ನುಬಿಟ್ಟಿ ಚಾಕರಿಗೆಜೊತೆಗಾರನಾದುದನ್ನು ಮನೆಯ ಫೌಂಡೇಶನ್ನಿಗೆಬೆವರಹನಿ ಬಿದ್ದುದನ್ನುಮಕ್ಕಳನ್ನು ನೆರಳಲ್ಲಿಟ್ಟುಬಿಸಿಲಲ್ಲಿ ಶತಪಥ ಓಡಾಡಿದ್ದನ್ನು ಮಕ್ಕಳಿಗೆ ಹೊಡೆದುದನ್ನುಹೆಂಡತಿಗೆ ಬೈದುದನ್ನುಹೊದಿಕೆಯೊಳಗಿನ ಕತ್ತಲಲ್ಲಿಸದ್ದೇಳದಂತೆ ಅತ್ತುದನ್ನು ಮಾಡದ ತಪ್ಪಿಗೆಬೈಸಿಕೊಂಡದ್ದನ್ನುಮರ್ಯಾದೆಗೆ ಅಳುಕಿತೆಪ್ಪಗಿದ್ದುದನ್ನುಬಿಗಿಗೊಂಡ ಮುಷ್ಟಿಸಡಿಲವಾದದ್ದನ್ನು *********************************
ಗಜಲ್
ನಾನು ದೇಹಾ ನೀನು ಜೀವಾ ನನ್ನ ಗರ್ಭದಿ ನೀ ಶಿವಾ
ನಮ್ಮ ಮಿಲನದ ಭಾರ ಇನ್ನು ಈ ನಿಸರ್ಗಾ ವಹಿಸಲಿ
ಅಮ್ಮನಿಗೊಂದು ಗಜಲ್
ಅಮ್ಮನಿಗೊಂದು ಗಜಲ್ ಸುಜಾತಾ ರವೀಶ್ ಅಣುರೂಪದಲಿಂದ ಅಸುವ ತುಂಬಿ ಪೊರೆದ ಚೈತನ್ಯಧಾಯಿ ಅಮ್ಮ ಭ್ರೂಣವಾದಾಗಿನಿಂದ ಕಸುವ ನೀಡಿ ಸಾಕಿದ ಜೀವನಧಾಯಿ ಅಮ್ಮ ನವಮಾಸಗಳು ಒಡಲಲ್ಲಿ ಕಂದನ ಭಾರ ಹೊತ್ತು ಸಲಹಿದೆಯಲ್ಲಮ್ಮ ತನ್ನ ಜೀವವನೆ ಒತ್ತೆಯಿಟ್ಟು ಭುವಿಗೆ ತಂದ ಮಮತಾಮಯಿ ಅಮ್ಮ ಅಮೃತಸದೃಶ ಎದೆ ಹಾಲೂಡಿಸಿ ಶಕ್ತಿ ತುಂಬಿಸಿದೆಯಲ್ಲಮ್ಮ ಅನೃತವಾಡದೆ ಬದುಕು ನಡೆಸ ಕಲಿಸಿದ ವಾತ್ಸಲ್ಯಮಯಿ ಅಮ್ಮ ಕೆಟ್ಟ ಮಕ್ಕಳಿರಬಹುದು ಎಂದೂ ಕುಮಾತೆಯರು ಲೋಕದಲ್ಲುಂಟೇನಮ್ಮ? ಸಿಟ್ಟು ಮಾಡಿಕೊಳ್ಳದೇ ಯಶಸ್ಸಿನ ದಾರಿ ತೋರಿದ ಸಹನಾಮಯಿ ಅಮ್ಮ ವಿಜಯ ಪಥದಿ ಸಾಧನೆಯ ಕಾಣಲು ದಾರಿದೀಪ ನೀನೇನಮ್ಮ ಸುಜಿಯ ರಥದ […]
ಸತ್ವ ಪರೀಕ್ಷೆ
ಕವಿತೆ ಸತ್ವ ಪರೀಕ್ಷೆ ಲಕ್ಷ್ಮೀದೇವಿ ಪತ್ತಾರ ಸತ್ತವರ ಬಾಯಿಗೆ ಮಣ್ಣುಬದುಕುಳಿದರೆ ಹೋಳಿಗೆ , ಹುಗ್ಗಿ ಇದ್ದೆ ಇದೆ ಮುಂದೆ ಉಣ್ಣಲು ಸ್ವಲ್ಪ ತಾಳ್ಮೆ ಸಹನೆ ಇರಲಿ ಬಾಳಿಗೆಹೊರಗೆ ಬರದೆ ಇದ್ದದರಲ್ಲೆ ಹೊಂದಿಕೊಂಡು ಹೋಗಿ ಸುಮ್ಮನೆ ರಾಜಮಹಾರಾಜರೇ ಹದಿನಾಲ್ಕು ವರ್ಷಗಳ ಕಾಲ ವನವಾಸ ಗೈದರುಹದಿನಾಲ್ಕು ದಿನಗಳವರೆಗೆ ಮಾತ್ರಮನೆಯೊಳಗೆ ಇದ್ದರೆ ಏನು ತ್ರಾಸು ಇಂದು ಮನೆಯೆ ಆನಂದವಾಗಿರಲು ಬಲು ಸುರಕ್ಷಿತನಮ್ಮವರೊಂದಿಗೆ ಕಳೆಯಲು ಇದೂಂದು ಅವಕಾಶ ಇಂದಿನ ಕಷ್ಟದ ದಿನಗಳು ಕಳೆದರೆ ಸಾಕುಮುಂದೆ ಇದೆ ಭಾಗ್ಯದ ಬಾಗಿಲುಯಮ ಒಡ್ಡಿರುವನು ನಮ್ಮ ತಾಳ್ಮೆಗೊಂದು […]
ಮೂರು ದಿನಗಳ ಆಚೆ…
ಕವಿತೆ ಮೂರು ದಿನಗಳ ಆಚೆ… ಕವಿತಾ ಹೆಗಡೆ ಅಭಯಂ ಅಣುವೊಡೆದು ಚೂರಾಗಿ,ಪಿಂಡವೊಂದು ಬ್ರಹ್ಮಾಂಡಸೇರಲೊಲ್ಲದ ತಪ್ಪಿಗೆ,ನೀರಲ್ಲಿ ನೀರಾಗಿ,ಮಲಿನದ ಹೆಸರಲ್ಲಿ ಹರಿದುಹೋದರೆ;ರಜ ಸೋರಿದ್ದು ದೇಹಕ್ಕೆ,ತಮ ಕವಿದದ್ದು ಮನಕ್ಕೆ. ೧. ಆಚೆ ಕೂತರೆ:ಇಡೀ ಮನೆಯಲ್ಲಿ ಇವಳೊಬ್ಬಳೇ ಅಸ್ಪೃಶ್ಯೆ,ಮೂರು ದಿನ ಯಾಚನೆಯೇ ಜೀವನ.ಕೊಟ್ಟರುಂಟು …ತಿನ್ನು..ಉಡು.ಯಾತನೆಯೇ ಜೀವನ.ಕೂತು, ಮಲಗಿ ಬೇಸರಪಡು,ಇಲ್ಲ, ಹೊರೆ ಹೊರಗೆಸಲ ಮಾಡು.ಕತ್ತೆಯಾಗುವುದು ಲೇಸು! ೨. ಆಚೆಯಾಗಿ ಈಚೆಯಿದ್ದರೆ:ರಿಯಾಯತಿಯಿಲ್ಲದ ನಿತ್ಯ ಕರ್ಮಗಳು,ನೆಂಟರು, ಒಮ್ಮೊಮ್ಮೆ ದುಪ್ಪಟ್ಟಾಗುವಬಿಡುವಿಲ್ಲದೆ ಬೆಂಬತ್ತುವ ಜವಾಬ್ದಾರಿಗಳು.ಮಗುವಾದರೆ ಒಳ್ಳೆಯದಿತ್ತು! ೩. ಶಾಲೆಯ ಹುಡುಗಿ:ನೂರು ಆಚರಣೆ – ಸ್ಪರ್ಧೆಗಳಹೆಸರಲ್ಲಿ, ಎಳೆಜೀವವ ಕುಣಿಸಿ,ಹೆಣಗಿಸಿ, ಯಾರು ಯಾರದೋಕಾಣದ […]
ಅವ್ವ ವರ್ಣಿಸದಳ
ಅವ್ವ ವರ್ಣಿಸದಳ ಅಭಿಜ್ಞಾ ಪಿ ಎಮ್ ಗೌಡ ಅವ್ವ ವರ್ಣಿಸದಳಹಗಲಿರುಳು ನೋವಂಡುದುಡಿದು ದಣಿದ ಅಕ್ಷಯನಿಧಿ.!ಯುಗದ ಅವತಾರನವ್ಯತೆಯ ಮಮಕಾರಮೌನದ ಪ್ರತಿರೂಪ ಈ ಅವ್ವತನ್ನೊಡಲ ನೋವುಗಳ ಬಚ್ಚಿಟ್ಟುಮೆರೆಯುವಳು ನಲಿಯುವಳು…. ಹೊಲದಲಿ ಸೀರೆಯೆತ್ತಿನಡು ಸಿಕ್ಕಿಸಳೆಂದರೆಆ ಬಾನು ಹಕ್ಕಿ ಪತಂಗಳ ಹಿಂಡೆನಾಚಿ ನೀರಾಗಿ ಸುರಿದಿಹವು…ಪಚ್ಚೆಯರಸಿನೊಳಗಿನ ಕೆಸರಾಟಮೈಮಾಟ ಕಂಡ ಪೈರೆಲ್ಲಾಲಕಲಕ .! ಥಕಥಕ.! ಅಬ್ಬಬ್ಬಾ.!ಸಾನುರಾಗದ ವೈಭೋಗಅವಳೊಳಗೆ ಮೈದಳೆದು ಹೊಮ್ಮಿರಲು… ಅಂತಃಕರಣದ ಒಲವರಸಿ.!ಅಗಣಿತ ವಿಷಯವರಿತ ಜ್ಞಾನನಿಧಿಪತಿಗೆ ಹೆಗಲಾಗಿ ಸಾರಥಿಯಸಾರೋಟಲಿ ಸಾಗುವ ಬಾಳಿನ ಒಡತಿ.!ಮರುಭೂಮಿ ಅಂಗಳದಿಚಿಮ್ಮುತಿಹ ಹನಿಯಲಿ ಚಿಗುರುವಓಯಸಿಸ್ ಅಂತೆ ಭರವಸೆಯ ಚೈತನ್ಯಬೆಳಕನ್ನೀಡೊ ಧ್ರುವತಾರೆಮಕ್ಕಳಿಗೆ ಜೀವದುಸಿರಧಾರೆ… ಮುದ್ದು […]
ಅಮ್ಮನ ದಿನಕ್ಕೊಂದು ಕವಿತೆ
ಅಮ್ಮನ ದಿನಕ್ಕೊಂದು ಕವಿತೆ ವಿಜಯಲಕ್ಷ್ಮಿ ಕೊಟಗಿ ಮುಸ್ಸಂಜೆ ಹೊತ್ತಿನ್ಯಾಗ ದೀಗಿ ಮುಡಿಸಿ ಒಲೆಯೊಳ್ಗ ಬೆಂಕಿ ಹೊತ್ಸಿಕೈ ಚಾಚಾಳ ಅವ್ವ ಮೈ ಚಾಚಾಳಹಡ್ದು ಬ್ಯಾನಿ ಅಪ್ಪನ ಗ್ಯಾನಅದೆಲ್ಲಿ ಕುಡಿದು ಬಿದ್ದಾನೋ?ಗಳಿಗಳಿಗೀ ನಿಟ್ಟುಸಿರಿಗೆಬೂದ್ಯಾಗಿನ ಕೆಂಡ ನಿಗಿನಿಗಿಆಕಿ ಮನಸಿನ ತುಂಬಾ ದಟ್ಟ ಹೊಗಿ,ಬಡವ್ರಿಗೆ ಹೊಟ್ಟಿ ಯಾಕ ಕೊಟ್ಟಾನೋ ಶಿವ?ಹಸ್ದು ತೆಕ್ಕಿ ಬಡ್ದು ಅಳಾಮಕ್ಕಳ್ನ ರಮ್ಸಿಹೊಟ್ಟಿ ಸಂಕ್ಟಾನ ಹೊಟ್ಯಾಗ ಒತ್ತಿಮಜಾಕಟಾ ತೋರಿಸ್ತೀನಂತಸ್ವಾರಾಗ ನೀರು ತುಂಬಿಚಂದ್ರಮನ ಬಿಂಬ ತೋರಿಸಿದ್ರಯವ್ವಾ! ನೀರಿನ್ಯಾಗ ರೊಟ್ಟಿ ನಂದಿತಬೇಅಂತ ಆಸೆಗಣ್ಣಿಲೇ ನೋಡಕತ್ಯಾವುಕರುಳಿಗೆ ಕಳ್ಳಿ ಬಡ್ದುದೊಡ್ಡ ದೊಡ್ಡ ಗುಳ್ಳಿಯಾಗೆವುಹಿರೇಮಗಳು ಮೈನೆರ್ತಾಳಸಾಣದು ಮಲಿ […]