ಕಾವ್ಯ ಜುಗಲ್ ಬಂದಿ

ಖಾಲಿತನದ ಗಳಿಗೆಯ ಕವಿತೆಗಳು

ಬದುಕಿನ ಖಾಲಿತನದ ಕುರಿತಾಗಿ ಕವಯತ್ರಿ ಶ್ರೀಮತಿ ವೀಣಾ ಪಿ. ಹಾಗೂ ಮಾಧವ ‘ತನ್ನ ಗುರುತನ್ನು ಹೊರಜಗತ್ತಿಗೆ ತೋರಿಸಿಕೊಳ್ಳಲಿಚ್ಛಿಸದ ಕವಿ’ – ಇವರಿಬ್ಬರ ಕಾವ್ಯ ಜುಗಲ್ ಬಂದಿ ಸಂಗಾತಿ ಓದುಗರಿಗಾಗಿ

Swings, Playground, Swinging, Park, Entertainment

ಖಾಲಿತನದ ಗಳಿಗೆಯ ಕವಿತೆಗಳು

ಗಳಿಗೆ-೧

ಖಾಲಿತನ

ಹ್ಞೂಂ……..!!

ಖಾಲಿತನವೆಂಬುದು ಬರೀ ಭ್ರಮೆಯಷ್ಟೇ..
ಒಲವು- ಚೆಲುವು-ಬೆರಗು ಭಾವಗಳ ತೇವ ಇಂಗಿದ ಮೇಲೂ
ಹಾಯ್ವ ನೆನಪ ಮಂದಾನಿಲ ಒತ್ತುತ್ತಲಿರುವುದು
ಕಾಣದಂತೆ
ಮನದ ಗಡಿಗೆಯಲ್ಲಿ..

ಖಾಲಿತನವೆಂದೆಯಲ್ಲವೇ ತೋರು ಅದೆಲ್ಲಿ…??

ವೀಣಾ ಪಿ.


ಭ್ರಮೆಯ ಭಾವವೇನಲ್ಲ ನನ್ನೊಳಗಿನ ಖಾಲಿತನ

ಬಿಸಿಲ ಧಗೆಗೆ  ಮುದುಡಿಹೋದ ಹೂವಿನ ಒಂಟಿತನ

ತೆರೆದು ತೋರಲಿದೇನು ತನುವಿನ ಮೇಲಣ ಗಾಯವೇ

ಕೆದಕಿ ಕೇಳಿ ಹಸಿಗಾಯವ  ಮತ್ತೆ ಬಗೆಯುವುದು ತರವೇ??

ಮಾಧವ



*****(ಮುಂದುವರೆಯಲಿದೆ)*****….

ಪರಿಚಯ:

ಶ್ರೀಮತಿ ವೀಣಾ ಪಿ., ಹರಿಹರ …
ಇತಿಹಾಸ ಉಪನ್ಯಾಸಕಿ, ಸಂಶೋಧಕಿ, ಕವಯಿತ್ರಿ ಹಾಗೂ ಬರಹಗಾರ್ತಿಯಾಗಿದ್ದು, ಕನ್ನಡ ಸಾಹಿತ್ಯ ಹಾಗೂ ಐತಿಹಾಸಿಕ ಸಂಶೋಧನಾ ಕ್ಷೇತ್ರದಲ್ಲಿ ಅತೀವ ಆಸಕ್ತಿಯಿಂದ ತೊಡಗಿಸಿಕೊಂಡಿದ್ದು, ಇವರ ಚೊಚ್ಚಲ ಕೃತಿ “ಭಾವೋದ್ದೀಪ್ತಿ”ಯು ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹ ಧನ ಯೋಜನೆಯಡಿ ಆಯ್ಕೆಗೊಂಡು ಪ್ರಕಟಗೊಂಡಿದೆ. ಬದುಕಿನಲ್ಲಿ ಭರವಸೆಗಳ ಬೆಂಬತ್ತುವಿಕೆ ಇವರ ಬರವಣಿಗೆಯ ಮೂಲ ಆಶಯವಾಗಿದೆ.

Leave a Reply

Back To Top