Category: ಕಾವ್ಯಯಾನ

ಕಾವ್ಯಯಾನ

ಡಾ ಸಾವಿತ್ರಿ ಕಮಲಾಪೂರ-ಕನ್ನಡ

ಬೇಡಲಾರೆ ಕಾಡಲಾರೆ
ಬಸವಳಿದು ಬಧುಕಿದೆ
ಸತ್ತು ಇಂದಿಗೆ ವರುಷ
ಚಿಗುರುತ್ತಿತ್ತು ನನ್ನದೇ
ಗೋರಿಯ ಮೇಲೆ
ನೀವು ನಡೆದ ಹೆಜ್ಜೆಗಳು
ಮೂಡುತ್ತಿದ್ದವು
ನೂರೆಂಟು ಕನಸುಗಳ
ಇಟ್ಟಿಗೆಯ ಕಲ್ಲುಗಳು
ಮೇಲೆ ನನ್ನದೊಂದು
ಚಿಕ್ಕ ಹೆಸರು ಕ-ನ್ನ-ಡ
ಹೀಗಾಗಬಾರದಿತ್ತು
ಇಷ್ಟು ಬೇಗ
ಕರೆದುಕೊಂಡು ಬಿಟ್ಟ
ಭಗವಂತ
ಭಾವಗಳ ಸುರಿಮಳೆಯಲಿ
ಮಿಯ್ಯುತ್ತಿದ್ದೆ ಎಚ್ಚರಾಗಿ
ಕಣ್ದೆರೆದೆ ತುಳಿದ ನನ್ನದೇ
ಗೋರಿಯ ಮೇಲೆ ನಡೆದ
ಹೆಜ್ಜೆಗಳ ನೆರಳ ಬಯಸಿ
ಬಂದು ನೊಂದೆ ಇಂದು
ನೋಯಲಾರೆ ನೋಯಿಸಲಾರೆ
ನಮಿಸಿ ಸಾಗುವೆ
ದೂರದಿ ನೋಡುತ್ತ
ಸಂತಸದಿ ಅಡಿ ಇಡುವೆ
ಅಳಿಸಿದವರನು ನಗಿಸುತ್ತ
ಸಾಗುವೆ ಹೀಗೆ ಇದ್ದು ಇಲ್ಲದಂತೆ
ಇದ್ದು ಬಿಡುವೆ ಬಯಕೆಯಿಲ್ಲದ
ಹಸು ಗೂಸಂತೆ
ಗೋಗರೆಯಲಾರೆ ಗಹ ಗಹಸಿ ನಗುವ ಜಗದಲಿ
ನಾನೊಬ್ಬಳೇ ಅಳುತ್ತ ಸಾಗುವೆ
〰️〰️〰️〰️〰️〰️〰️
ಡಾ ಸಾವಿತ್ರಿ ಕಮಲಾಪೂರ

Back To Top