ಸರೋಜಾ ಜಾಧವ ನನ್ನವರು

ಕಾವ್ಯ ಸಂಗಾತಿ

ಸರೋಜಾ ಜಾಧವ

ನನ್ನವರು

ಅಪ್ಪನೆಂಬ ಆಲದ ಮರ
ಕಳಚಿದಾಗ ನೆರಳಾದವರು
ಜಗತ್ತಿನಲಿ ಬದುಕಲುಕಲಿಸಿದವರು
ನೋವು ಹಂಚಿಕೊಂಡವರು

ಸುಖ ದುಃಖಗಳಲಿ ಸಮನಾಗಿ
ಭರವಸೆಗೆ ಬೆಳಕಾಗಿ
ಅಂಧಕಾರದಲ್ಲಿ ಜ್ಯೋತಿಯಾಗಿ
ಇರುವರು ನಮ್ಮನೆ ಬೆಳಕಾಗಿ

ಅಕ್ಕರೆ ಸಕ್ಕರೆ ನೀಡಿದವರು
ನೀ ನಕ್ಕರೆ ನಮ್ಮನೆ ಸ್ವರ್ಗ ಎಂದವರು
ಸಕ್ಕರೆ ಸವಿಜೇನು ಅವರು
ತವರು ಮರೆಸಿದವರು

ಅರಿವು ಕಲಿಸಿ ಒಲವು ಹರಿಸಿ
ತಪ್ಪು ತಿದ್ದಿ ಗುರುವಿನಂತೆ ಹರಸಿ
ಬಾಳ ಹಣತೆ ಬೆಳಗಿಸಿ
ಒಲವು ಮಳೆ ಸುರಿಸಿ

ಬದುಕಿಗೆ ಜೊತೆಯಾದವರು
ಕನಸಿಗೆ ಕಲ್ಪನೆಯಾದವರು
ನನ್ನೆದೆಯ ಹೊನ್ನಾಡಿಗೆ ದೊರೆ ಅವರು
ಅವರು ನನ್ನವರು

———————-

ಸರೋಜಾ ಜಾಧವ

2 thoughts on “ಸರೋಜಾ ಜಾಧವ ನನ್ನವರು

Leave a Reply

Back To Top