ಕಾವ್ಯ ಸಂಗಾತಿ
ಲಲಿತಾ ಪ್ರಭು ಅಂಗಡಿ
ಕರುನಾಡ ದೀಪ
ಕನ್ನಡದ ಸಂಸ್ಕಾರ ಅಂದ
ಕನ್ನಡದ ಸಂಸ್ಕೃತಿಯೆ ಚೆಂದ
ಜಗವೆಲ್ಲ ಬೆಳಗಿದ
ಕನ್ನಡದ ನುಡಿಗಳೇ ಮಕರಂದ
ತನುಮನ ತಣಿಸಿದ ಕನ್ನಡ
ಹಸಿರಾಗಿ ಉಸಿರಾದ ಕನ್ನಡ
ಕಸ್ತೂರಿ ಪರಿಮಳದ ಸಿರಿಗನ್ನಡ
ಕಾರುಣ್ಯ ಕಂಪು ಚೆಲುವಕನ್ನಡ
ಮ್ರೃದು ವಚನಗಳ ದೀವಿಗೆ ಕನ್ನಡ
ಜನಪದರ ಸೊಗಡಿನ ಸೊಬಗು ಕನ್ನಡ
ಕವಿ ಪುಂಗವರು ಪೋಷಿಸಿದ ಸಿರಿಗನ್ನಡ
ಸಾಧು ಸತ್ಪುರುಷರ ಮೆಟ್ಟಿದ ನೆಲಕನ್ನಡ
ವೀರ ಶೂರರಾಳಿದ ಚೆಲುವ ಕನ್ನಡ
ವೀರ ವನಿತೆಯರ ಕೆಚ್ಚೆದೆಯ ಕನ್ನಡ
ಕಾವೇರಿಯಿಂದ ಗೋದಾವರಿಗೆ ಬೆಳೆದ ಭವ್ಯತೆಯ ಭಾವೈಕ್ಯತೆಯ ಕನ್ನಡ
ಹರಿವ ನದಿಯಲಿ ಜುಳುಜುಳು ನಿನಾದ ಕನ್ನಡ
ಹಕ್ಕಿ ಪಕ್ಷಿಗಳ ಕುಹೂ ಕುಹೂ ಕಲರವ ಕನ್ನಡ
ಅಂಬಾ ಎನುವ ಕರುವಿನ ಕರೆ ಕನ್ನಡ
ಅಳುವ ಕಂದನ ನುಡಿ ಸ್ವರ ಕನ್ನಡ
ಕನ್ನಡ ನುಡಿಯ ತಾಯಿ ಗುಡಿಗೆ
ಗಡಿನಾಡೆ ಇರಲಿ ಹೊರನಾಡೆಇರಲಿ
ಬೇಧ ಭಾವ ಅಳಿಸಿ ಭಾವದೊಲುಮೆ ಬೆರಸಿ
ಕರುನಾಡ ದೀಪ ಬೆಳಗೋಣ ಬನ್ನಿ.
ಲಲಿತಾ ಪ್ರಭು ಅಂಗಡಿ