ಅರುಣಾ ನರೇಂದ್ರ ಅವರ ಗಜಲ್

ಕಾವ್ಯಸಂಗಾತಿ

ಅರುಣಾ ನರೇಂದ್ರ

ಗಜಲ್

ಮೋಡ ಕಟ್ಟಿದೆ ಮುಗಿಲು ಮಳೆ ಸುರಿಯದೆ ಹೋಯಿತು
ನೀರಿರದೆ ಧರೆಯ ಮುತ್ತಿನ ಸೆರಗು ಕಣ್ಣೀರಲಿ ತೋಯಿತು

ಮಳೆಬಿಲ್ಲ ಬಣ್ಣ ನನಗಾಗಿ ತರುವೆನೆಂದಿದ್ದ ಅವನು
ರಾತ್ರಿ ಇಡಿ ಕೋಣೆಯ ದೀಪ ನಿದ್ದೆಯಿರದೆ ಉರಿಯಿತು

ಕಾಲ್ಗೆಜ್ಜೆಗೆ ನಶೆ ಏರಿದ ಹೊತ್ತು ದುಪ್ಪಟ್ಟ ಮೈ ಮರೆತಿದೆ
ನಡೆದಷ್ಟು ದಾರಿ ಸಿಗದ ನಿಲ್ದಾಣ ಹೆಜ್ಜೆ ನೋಯಿತು

ಗೂಡಿರದ ಹಕ್ಕಿ ಜೋಡಿರದ ಚ್ಚುಕ್ಕಿ ಚಳಿಯ ಶಪಿಸಿವೆ
ವತ್ತರಿಸಿ ಬಂದ ನಿಟ್ಟಿಸಿರ ಧಗೆಗೆ ಒಲುಮೆ ಕುದಿಯಿತು

ಸುಮ ಅರಳಿ ಗಂಧ ಸೂಸಿವೆ ಅವ ಬಂದಿದ್ದಾನೆ ಸಖಿ
ಘಾಸಿಯಾದ ಅರುಣಾಳ ಎದೆಗಾಯ ಮದ್ದಿರದೆ ಮಾಯಿತು


ಅರುಣಾ ನರೇಂದ್ರ

Leave a Reply

Back To Top