ಕಾವ್ಯ ಸಂಗಾತಿ
ಸವಿತಾ ಮುದ್ಗಲ್-
ನಮ್ಮ ಉಸಿರು ಕನ್ನಡ
ಕರ್ನಾಟಕ ಹೆಸರಾಯಿತು ಕನ್ನಡ ಉಸಿರಾಯಿತು
ಕರ್ನಾಟಕ ಕನ್ನಡ ರಾಜ್ಯೋತ್ಸವದ ಸಂಭ್ರಮವಾಯಿತು
ಪಠ್ಯ ಪುಸ್ತಕಕಷ್ಟೆ ಸೀಮಿತವಾಗದೆ ಕನ್ನಡದ ಭಾಷೆಯು
ಬೆಳೆಸಲು ಕಲಿಸಲು ಉಳಿಸಲು ನಮ್ಮೆಲ್ಲರ ಶ್ರಮವು ನಿರತವು||
ಕನ್ನಡದ ಕಂದಮ್ಮಗಳಿರ ನೋಡಿರಿ ಕನ್ನಡ ನಾಡನ್ನು
ಕನ್ನಡದ ಕಂಪನ್ನ ಸಾರಿರಿ ಮರೆಯದೆ ಮನಸ್ಸನ್ನು
ಹಲವು ರಾಜಮನೆತನವಾಳಿದ ಕನ್ನಡ ನಾಡನು
ಉತ್ತರದಿಂದ ದಕ್ಷಿಣದವರೆಗೂ ಕಂಗೊಳಿಸುವ ಬೀಡನು||
ಚಾಲುಕ್ಯರಾಳಿದ ಬಾದಾಮಿಯ ಕೆತ್ತನೆಯ ಸೊಬಗು
ಐಹೊಳೆ ಪಟ್ಟದಕಲ್ಲಿನ ಕೆತ್ತನೆಯ ಬೆಡಗು
ರಾಯಚೂರು, ಕಿತ್ತೂರಿನ, ದುರ್ಗದ ಕೋಟೆಯ ಮೆರಗು
ನಭದ ನಕ್ಷತ್ರದಂತೆ ಮಿನುಗುವ ಮೈಸೂರು ಅರಮನೆ ಸೊಬಗು||
ಕನ್ನಡದ ಪಂಪ ರನ್ನ ವ್ಯಾಸರನ್ನು ಮರೆಯದೆ
ಜ್ಞಾನಪೀಠವನ್ನು ತಂದುಕೊಟ್ಟ ಕನ್ನಡದ ಕವಿಗಳಿಗೆ ನಮಿಸುತ
ಹಳೆಗನ್ನಡ,ಹೊಸಕನ್ನಡವೆನ್ನದೇ ಇರುವ ಕನ್ನಡವ ಉಳಿಸುತ
ಒಟ್ಟಾಗಿ ಎಲ್ಲರೂ ಆಚರಣೆ ಕನ್ನಡದ ಸಂಭ್ರಮ ಪಡುತ||
ಜಾತಿಮತದ ಲೆಕ್ಕವ ಮಾಡದೆ ಮುಂದಾಗಿ
ಶಾಂತಿ ಸಂಯಮಕೆ ಮನಸೆಲ್ಲ ಜೊತೆಯಾಗಿ
ಮನದಲ್ಲಿ ಮೂಡಲಿ ಸಂತೋಷದ ಕಹಳೆಯು
ಭುವನೇಶ್ವರಿ ತಾಯಿಗೆ ಸಿಗಲಿ ಶಾಂತಿ ನೆಮ್ಮದಿಯು||
ತೊದಲು ನುಡಿಯಲ್ಲೇ ಸಿಗುವುದು ಆನಂದ
ವರ್ಣನೆ ಮಾಡಲು ಬೇಕಲ್ಲವೇ ವರ್ಣಮಾಲೆಯ ಬಂಧ
ಕಲಿಯಿರಿ, ಕಲಿಸಿರಿ ಮಾತಾಡಿ ನಿತ್ಯ ಕನ್ನಡವನ್ನು
ಮಾತೃ ಭಾಷೆಯ ಆಡಳಿತದಲಿ ಇರಲಿ ರಾಜ್ಯದ ತುಂಬೆಲ್ಲ||
ಹರಿಯುವ ನದಿಗಳಿಗೆ,ಚಿಗುರುವ ವನಗಳಿಗೆ ಚೈತನ್ಯ ಬೇಕಾಗಿದೆ
ಹಾರಾಡುವ ಹಕ್ಕಿಗಳಿಗೆ, ತಟಸ್ತವಾದ ಕಲ್ಲುಗುಡ್ಡಗಳಿಗೆ ಸವಿನುಡಿವಂತಾಗಿದೆ
ಬಣ್ಣದ ಚಿಟ್ಟೆಗಳಿಗು,ಮೂಕ ಪ್ರಾಣಿಗಳಿಗೂ ರಂಗು ಕಾಣುವಂತಾಗಿದೆ
ಕರುನಾಡ ಕನ್ನಡದತಾಯಿ ಪಡುವ ರಾಜ್ಯೋತ್ಸವದ ಗಳಿಗೆಯ ಶುಭದಿನಕ್ಕಾಗಿ||
————————————–
ಸವಿತಾ ಮುದ್ಗಲ್
ಸಂಗಾತಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ನನ್ನ ಕವನ ಪ್ರಕಟಿಸಿದ ಪತ್ರಿಕೆ ಬಳಗಕ್ಕೆ ಹೃತ್ಪೂರ್ವಕ ಧನ್ಯವಾದಗಳು q