Category: ಕಾವ್ಯಯಾನ

ಕಾವ್ಯಯಾನ

ನಡುವೆ ಅಂತರ…

ಆಶಾ ಜಗದೀಶ್
ಇತ್ತ ನಾನು ಅತ್ತ ನೀನು…
ಕೂತ ಬೆಂಚು ಒಂದೇ ತಾನೇ!?
ಅಂತರವೆಂಬ ವಾಮನನಿಗೆ
ಅಷ್ಟೇ ಸಾಕಿತ್ತು!

ಸಂಕ್ರಾಂತಿ ಕಾವ್ಯ ಸುಗ್ಗಿ ನಂದಿನಿ ಹೆದ್ದುರ್ಗ ನನ್ನದೆಯ ಗಾಯಗಳಾವೂ ನನ್ನವಲ್ಲ..ನೀನದರ ಒಡೆಯ..ನನ್ನ ವಾಸ್ತವ ,ಭ್ರಮೆ, ಕಲ್ಪನೆಗಳೂ‌ನಿನ್ನವೇ ಕೊಡುಗೆ..ನೊಂದು ನೋಯಿಸಿದ್ದಾದ ಮೇಲೆಒಂದು ಅಂತರದಲಿ ನೀ ನಿಂತು‌ ನೋಡುವೆ.ಈ ಕ್ರೂರ ಮೌನದೊಳಗೆಎಷ್ಟೊಂದು ಪ್ರಶ್ನೆಗಳು.. ಬಗೆದು ತೋರಬಹುದೇ ಒಲವ ಈ ಬಗೆಯನ್ನು?ಹಗಲು ಹೊಳೆಯುವುದೆ ಇರುಳ ಈ ಹುಣ್ಣಿಮೆಗೆ?ಎದೆಯೊಳಗೆ ನೋವು ಉಲಿಯುವ ಹಕ್ಕಿಗೆ ಹೆಸರಿದೆಯೇ?ನಾನು ಬರುವ ಮೊದಲು ಎಷ್ಟೊಂದು ಸುಖಿ ನೀನು!! ಮಾತು ಮಹಲುಗಳಿಗಿಲ್ಲಿ ನೋವ ಅಡಿಪಾಯಹೊರಡಲೇ ಎನುವಾಗಷ್ಟೇ ನರಳು ನಿಟ್ಟುಸಿರುಎರಡು ಹೂವೆಸಳು,ಬೆಳುದಿಂಗಳು,ಎದೆಯ ಆಲಾಪಕ್ಕೂಬಿಡುವಿಲ್ಲ ನಿನಗೆ ಶೂನ್ಯ ಹುಟ್ಟಿಸಿದ್ದೂ‌ ನೀನೇ.ಕೋಲಾಹಲಕ್ಕೆ ಕಾರಣವೂ ನೀನೇನಾನು […]

ಸಂಕ್ರಾಂತಿ ಕಾವ್ಯ ಸುಗ್ಗಿ ಹೊಸ ಹಾಡು ವಸುಂಧರಾ ಕದಲೂರು ಇಂದಿನ ಹೊಸತುನಾಳೆ ಹಳತಾಗಬೇಕುಮತ್ತೆ ನಾಳೆಯೂ ಹೊಸತುದಿನವಾಗಬೇಕು.ಕ್ಷಣ ಕಳೆದು ಸಮಯಉರುಳುತಿರಬೇಕುಬೇರೆ ಗಳಿಗೆ ನಮಗಾಗಿಮರಳಿ ಬರಬೇಕು. ಬೆಳಕು ಮತ್ತೆ ಮತ್ತೆಉದಯಿಸುತಾ ತಾಹೇಳುವುದು ಏನನ್ನು?ನಿನ್ನೆಯೂಬಂದಿದ್ದೆನೆಂಬ ಬೇಸರವನ್ನೇ?!ಇರುಳ ಕತ್ತಲಲಿ ಮತ್ತೆಮುಳುಗುವ ಭಯವನ್ನೇ..?! ಅನುಕರಿಸು ದಿನಪನನುಅನುಸರಿಸು ಇಳೆಯಪರಿಭ್ರಮಣೆಯನು.ಆಗು ನೀ ನವ ನಾವೀನ್ಯಚೈತನ್ಯ ದೀವಿಗೆ.ಅಲೆಯಾಗು ಸೆಲೆಯಾಗುಭೋರ್ಗರೆದು ಮೊರೆದುಮಗುವಾಗಿ ಶರಣಾಗುಕಡಲ ದೇವಿಗೆ. ನೀನಾಗದಿರು ಎಂದೆಂದಿಗೂಚಿತ್ತ ಚಾಂಚಲ್ಯಚಕ್ರವ್ಯೂಹದಲಿ ಸಿಲುಕಿತೊಳಲುವ ಬಂಧಿಯಾದಖೈದಿಯಂತೆ;ಚಿಂತಿಸೊಮ್ಮೆ ಮನದೆರೆದುನೀ ಆಗು ನಿಗೂಢ ವ್ಯೂಹಕಳಿಚಿ ಅನಂತದೆಡೆಗೆ ಹಾರುವಪತಂಗದಂತೆ.

ಸಂಕ್ರಾಂತಿ ಕಾವ್ಯ ಸುಗ್ಗಿ ಸಂಕ್ರಾಂತಿಗೊಂದು ಪ್ರಶ್ನೆ   ಸುಜಾತಾ ರವೀಶ್ ದುಗುಡದ ಛಾಯೆ ಆವರಿಸಿದ ಚಿಂತೆಯ ಕಾವಳ ಹೊದ್ದ ಮನಕೆ ತರಬಹುದೇ ಸಂಕ್ರಾಂತಿ ನಿನ್ನಾಗಮನ ಹೊಸ ಚೈತನ್ಯದ ಶಾಖದ ಕಾವನು? ಜಡ್ಡು ಕಟ್ಟಿರುವ ಜೀವನ ಜಾಡ್ಯಕೆಋತು ಪರಿವರ್ತನೆಯ ಔಷಧಿಯೇ? ಹೇಮಂತನ ಮಬ್ಬು ಆಲಸ್ಯಕೆ ಮಾಗಿಯ ರೋಗಕೆ ನೀ ಮದ್ದೇ? ಪ್ರಕೃತಿಗಂತೂ ಈ ಭೂಮಿ ಪರಿಭ್ರಮಣೆನಿತ್ಯ ನೂತನ ಸಂಭ್ರಮ ತರುವ ಆವರ್ತನೆ ಏಕತಾನತೆಯ ಬೇಸರದ ಬದುಕಿಗೆ ನೀ ತರಬಹುದೇನು ಹೊಸ ಬದಲಾವಣೆ?  ಬದುಕಿನಿಡೀ ನಡೆಯುತಿದೆ ಬವಣೆ ಕೃಷಿ ಬರಬಹುದೆ ಈಗ ಸಫಲತೆಯ ಸುಗ್ಗಿ? ಸಿಗುವುದೇ ಪರಿಶ್ರಮಕ್ಕೊಂದು ಬೆಲೆ ಬಾಳಪಯಣಕೊಂದು ಗಮ್ಯ ನೆಲೆ? ಕಾಯುತಲಿದೆ ಹೃದಯ […]

ಸಂಕ್ರಾಂತಿ ಕಾವ್ಯ ಸುಗ್ಗಿ ಯಕ್ಷಿಯ ಪ್ರಶ್ನೋತ್ತರ ಡಾ. ರೇಣುಕಾ ಅರುಣ ಕಠಾರಿ ಗಂಭೀರವಾಗಿ ಭೀಗುತ್ತಿದ್ದ ಕಾಲವದುಮನಸಿನ ಹುಚ್ಚಾಟಕ್ಕೆ ಎಣೆಯೇ ಇರಲಿಲ್ಲಕಾಲದೊಳಗೆಯೆ ಅಡಗಿದ ಜೀವಸಾರದ ಕಡೆಗೆಬವಣೆಯ ಹುಡಕ ಹೊರಟ ಯಕ್ಷಿ ನಾ! ಮುರುಟಿದ ಕನಸಗಳೆಲ್ಲವೂ ಮೆರವಣಿಗೆಗೆ ಸಿದ್ದವಾಗಿದ್ದು ತಿಳಿಯಲಿಲ್ಲ.ಎಲ್ಲಾ ಎಲ್ಲೆಯನ್ನು ಮೀರಿ ಹತಾಟೆಯ ಹಿಂದೆ ಸರಿದಿತ್ತು.ಹಂಸದ ನಡುಗೆ ಕುರ್ಮದ ಆಯಸ್ಸು ಕಣ್ಮಂದೆ ನಿಂತಿತ್ತು..ಕಡಲಳೊಗಿನ ಲವಣ ಮಾತ್ರ ನೀರಲ್ಲಿಯೇ ತೆಲುತ್ತಿತ್ತು. ದುಗುಡು ದುಮ್ಮಾನಗಳಿಗೆ ವಿವೇಕ ಹೇಳಿ ಸಾಕಾಗಿತ್ತುಅನುಭವ ಅನುಭಾವದತ್ತ ಸಾಗಿದ ಪಯಣ ನಿಲ್ಲುತ್ತಿರಲಿಲ್ಲಬದುಕಿನ ಎಲ್ಲ ಮಗ್ಗಲುಗಳು ಸ್ಮಶಾನದ ಅಂಗಳದಲ್ಲಿ ನಲಿಯುತ್ತಿದ್ದವು.ಹೇಳದೆ […]

ಸಂಕ್ರಾಂತಿ ಕಾವ್ಯ ಸುಗ್ಗಿ ಚೀನಾದ ಚೈನ… ವಾಯ್.ಜೆ.ಮಹಿಬೂಬ ಹೋಗ್ಹೋಗು ಕರೋನಾಎಲ್ಲಾ ಕೂಗಿ ಹೇಳೋಣಾ!!ಪ!! ಕರುಣೆಯಿಲ್ಲದ ಕರೊನಾಬಂತೋ ಒಕ್ಕರಿಸಿಜಗವು ನಿತ್ಯ ಹಾಳಗೆಡವಿತುಜೀವ ಮುಕ್ಕರಿಸಿ !!೧!! ಚೀನಾದೊಳಗ ಚೈನಭವಕ ತಂತೋ ಊನಭಾರತವೂ ಮೌನ !ಮನವೂ ಮಸಣ ತಾಣ !!೦೨!! ಹಿಂದೂ-ಮುಸಲ್ಮಾನಅದಕೇನಿಲ್ಲ ಖುನ !ಪಾರ್ಸಿ-ಬುದ್ದ-ಜೈನಮಾಡಲಿಲ್ಲ ಮನನ!!೦೩!! ಕರುಣೆ ಇಲ್ಲ ಅದಕಹೊಡತ ತಂತೊ ಧನಕಜೀವ ಹಿಂಡಿತಲ್ಲೊದುಡಿದು ತಿನ್ನೊ ದಿನಕ!!೦೪!! ಹಸಿವು ತಾಳಲ್ಲಿಲ್ಲಪಥವೂ ಕಾಣುತಿಲ್ಲಹಂಗರೆದು ನಡೆದು ನಾವುನಡುವೆ ಸತ್ತೆವಲ್ಲೊ !!೦೫!!

ಸಂಕ್ರಾಂತಿ ಕಾವ್ಯ ಸುಗ್ಗಿ ಮತ್ತದೇ ಮನವರಿಕೆ ಸರೋಜಾ ಶ್ರೀಕಾಂತ್ ಅಮಾತಿ, ತೇಲುತ ಬರುವ ಮಧುರ ನೆನಪಾಗಿದಿನವೂ ಕಾಡುತಿರುವೆಯಲ್ಲತೊರೆದ ಘಳಿಗೆ ಅರಿತ ಉಸಿರುನನ್ನನೇ ಮರೆತಿರುವೆನಲ್ಲ ದೊರೆವೆ ಹೇಗೆ ಮರಳಿ ಪ್ರೀತಿಗೆಕನಸು ಕೂಗುತಿದೆಯಲ್ಲಹೃದಯದಿ ಬೆರೆತ ನಿನ್ನ ಒಲವುಬಳಿ ಬಂದು ಸತಾಯಿಸುತ್ತಿದೆಯಲ್ಲ ಒಪ್ಪಿದ ಪ್ರೇಮವೇ ಚೆಲುವ ತುಂತುರುತಪ್ಪನು ಸರಿಪಡಿಸುವೆನಲ್ಲಮತ್ತದೇ ತುಡಿತ ಜೊತೆಯ ಹೆಜ್ಜೆಗೆಹರಸು,ಪರಿತಪಿಸುತ್ತಿರುವೆನಲ್ಲ ನಿನ್ನಯ ನೋಟಕೆ ಕಾದಿಹ ಕಂಗಳುಲಜ್ಜೆಗೆ ಹೊಳೆಯುತ್ತಿರುವವಲ್ಲಮತ್ತೊಮ್ಮೆ ಭೇಟಿಗೆ ವೇಳೆಯ ತಿಳಿಸುಕರೆಗೆ ಕಾಯುತಿರುವೆ ನಲ್ಲ!!.

ಸಂಕ್ರಾಂತಿ ಕಾವ್ಯ ಸುಗ್ಗಿ ನದಿ ನಾಗರಾಜ್ ಹರಪನಹಳ್ಳಿ ನದಿ ಕುಲು ಕುಲು ನಕ್ಕಿತುಅವಳು ಜೊತೆ ಇದ್ದಾಗ ನದಿ ಉಸಿರೆಳೆಯಿತುಅವಳು ಕಿವಿಯಲ್ಲಿ ಉಸುರಿದಾಗ ನದಿ ಮಾತಾಡಿತುಅವಳು ನನ್ನ ಭುಜಕ್ಕೆ ಭುಜ ತಾಗಿಸಿ ಕುಳಿತಾಗ ನದಿ ವೈಯಾರದಿ ಬಳುಕಿತುಅವಳು ಹೊಸ ಸೀರೆಯುಟ್ಟುನನ್ನೆದುರು ಬಂದಾಗ ನದಿ ಕಣ್ಣೀರಾಯಿತುಅವಳು ವಿರಹದಿ ಬೆಂದಾಗ ನದಿ‌ ಮಗ್ಗಲು ಬದಲಿಸಿತುಅವಳು ದೂರವಿದ್ದಾಗ ನದಿ ನಿಟ್ಟುಸಿರಾಯಿತುಅವಳು ನಾಳೆಗಳಿವೆ ಬರುವೆಎಂದಾಗ ನದಿ ಮೌನವಾಯಿತುಅವಳು ಮಾತೇ ಆಡದೆ ಹೋದಾಗ ನದಿ ನಿದ್ದೆ ಹೋಯಿತುಅವಳೂ ನಿದ್ದೆಹೋದಾಗ ನದಿ ಬೆಳಕಾಯಿತುಅವಳು ಮರಳಿ ಬಂದಾಗ

ಸಂಕ್ರಾಂತಿ ಕಾವ್ಯ ಸುಗ್ಗಿ ಹುಟ್ಟು ಪೂರ್ಣಿಮಾಸುರೇಶ್ ಹಚ್ಚಡದ ಗಂಟಿನಲಿನೆನೆದುಬೆದರಿ ಅವಚಿಕೂತ ಕಾಳು ಎದೆಯ ಮೇಲೆ ಬುಲ್ ಡೋಜರ್ ನೋವಿನ ಹಿಡಿತಆವರಿಸಿದ ಕಪ್ಪು ತಡೆಯಲಾರೆ ಹೊರೆಅಂತರಾಳದ ಮೊರೆ ಬಿಗಿದ ಸೆರೆ ಸಡಿಲಆಯಾಸದ ದಿಟ್ಟಿತೆರೆದರೆತೂರಿ ಬಂದ ಬೆಳಕು ಒಡಲು ಹಗುರಒಳಗೆ ಹಸಿರು ಹೊಸ ಕನಸುಹೊಸ ಹುಟ್ಟು ಬಾಹು ಚಾಚಿದ ಆಗಸನಾನು ಊರ್ಧ್ವಮುಖಿ

ಸಂಕ್ರಾಂತಿ ಕಾವ್ಯ ಸುಗ್ಗಿ ಬಿಟ್ಟು ಯೋಚಿಸಬಹುದೇ..? ಸ್ಮಿತಾ ಅಮೃತರಾಜ್. ಸಂಪಾಜೆ ದಿನದ ಕನಸುಗಳೆಲ್ಲಾಗುಲಾಬಿ ಬಣ್ಣ ಮೆತ್ತಿದಬೊಂಬಾಯಿ ಮಿಠಾಯಿಸವಿಯುವ ಮುನ್ನವೇ ಕರಗಿಬರೇ ಅಂಟು ಜಿನುಗಷ್ಟೇಉಳಿಯುವ ನಂಟು. ಈ ಹೊತ್ತಲ್ಲದ ಹೊತ್ತಿನಲ್ಲಿನೀ ಬಂದು ಮೈದಡವಿ ತಲೆನೇವರಿಸದೇ ಇರುತ್ತಿದ್ದರೆ..ನಾಳೆಯ ಕನಸುಗಳಿಗೆ ಬಣ್ಣಬಳಿಯಲು ನನ್ನ ಬಳಿ ರಂಗುಉಳಿಯುತ್ತಿತ್ತೇ? ಕಣ್ಣಾಲಿ ತೆರೆದಷ್ಟೂಸಂತೆ ನೆರೆಯುವ ಬಿನ್ನಾಣ ಲೋಕಹೊರಗೆ ತೆಳ್ಳಗೆ ಹಚ್ಚಿದ ಬೆಡಗಿನ ಲೇಪಲೋಪವೇ ಇಲ್ಲದ ಬದುಕಿದೆ ಒಳಗೆಬಗೆದು ಕಂಡವರಿಲ್ಲ ಪಾಪ! ಆಳದಲ್ಲೆಲ್ಲೋ ಛಳಕ್ ಎಂದ ನೋವು..ಹೊತ್ತಿಗೆ ನೀ ಬಂದು ಮುಲಾಮುಹಚ್ಚದೇ ಹೋಗುತ್ತಿದ್ದರೆ..ಗಾಯವೇನೋ ಮಾಯುತ್ತಿತ್ತು.ನೋವು ಮಾಸುತ್ತಿತ್ತೇ..? ಮುದುಡಿಕೊಂಡಷ್ಟೂ […]

Back To Top