ಸಂಕ್ರಾಂತಿ ಕಾವ್ಯ ಸುಗ್ಗಿ
ಮತ್ತದೇ ಮನವರಿಕೆ
ಸರೋಜಾ ಶ್ರೀಕಾಂತ್ ಅಮಾತಿ,
ತೇಲುತ ಬರುವ ಮಧುರ ನೆನಪಾಗಿ
ದಿನವೂ ಕಾಡುತಿರುವೆಯಲ್ಲ
ತೊರೆದ ಘಳಿಗೆ ಅರಿತ ಉಸಿರು
ನನ್ನನೇ ಮರೆತಿರುವೆನಲ್ಲ
ದೊರೆವೆ ಹೇಗೆ ಮರಳಿ ಪ್ರೀತಿಗೆ
ಕನಸು ಕೂಗುತಿದೆಯಲ್ಲ
ಹೃದಯದಿ ಬೆರೆತ ನಿನ್ನ ಒಲವು
ಬಳಿ ಬಂದು ಸತಾಯಿಸುತ್ತಿದೆಯಲ್ಲ
ಒಪ್ಪಿದ ಪ್ರೇಮವೇ ಚೆಲುವ ತುಂತುರು
ತಪ್ಪನು ಸರಿಪಡಿಸುವೆನಲ್ಲ
ಮತ್ತದೇ ತುಡಿತ ಜೊತೆಯ ಹೆಜ್ಜೆಗೆ
ಹರಸು,ಪರಿತಪಿಸುತ್ತಿರುವೆನಲ್ಲ
ನಿನ್ನಯ ನೋಟಕೆ ಕಾದಿಹ ಕಂಗಳು
ಲಜ್ಜೆಗೆ ಹೊಳೆಯುತ್ತಿರುವವಲ್ಲ
ಮತ್ತೊಮ್ಮೆ ಭೇಟಿಗೆ ವೇಳೆಯ ತಿಳಿಸು
ಕರೆಗೆ ಕಾಯುತಿರುವೆ ನಲ್ಲ!!.