ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಂಕ್ರಾಂತಿ ಕಾವ್ಯ ಸುಗ್ಗಿ

ಚೀನಾದ ಚೈನ…

ವಾಯ್.ಜೆ.ಮಹಿಬೂಬ

100+ Evil Pictures | Download Free Images on Unsplash

ಹೋಗ್ಹೋಗು ಕರೋನಾ
ಎಲ್ಲಾ ಕೂಗಿ ಹೇಳೋಣಾ!!ಪ!!

ಕರುಣೆಯಿಲ್ಲದ ಕರೊನಾ
ಬಂತೋ ಒಕ್ಕರಿಸಿ
ಜಗವು ನಿತ್ಯ ಹಾಳಗೆಡವಿತು
ಜೀವ ಮುಕ್ಕರಿಸಿ !!೧!!

ಚೀನಾದೊಳಗ ಚೈನ
ಭವಕ ತಂತೋ ಊನ
ಭಾರತವೂ ಮೌನ !
ಮನವೂ ಮಸಣ ತಾಣ !!೦೨!!

ಹಿಂದೂ-ಮುಸಲ್ಮಾನ
ಅದಕೇನಿಲ್ಲ ಖುನ !
ಪಾರ್ಸಿ-ಬುದ್ದ-ಜೈನ
ಮಾಡಲಿಲ್ಲ ಮನನ!!೦೩!!

ಕರುಣೆ ಇಲ್ಲ ಅದಕ
ಹೊಡತ ತಂತೊ ಧನಕ
ಜೀವ ಹಿಂಡಿತಲ್ಲೊ
ದುಡಿದು ತಿನ್ನೊ ದಿನಕ!!೦೪!!

ಹಸಿವು ತಾಳಲ್ಲಿಲ್ಲ
ಪಥವೂ ಕಾಣುತಿಲ್ಲ
ಹಂಗರೆದು ನಡೆದು ನಾವು
ನಡುವೆ ಸತ್ತೆವಲ್ಲೊ !!೦೫!!


About The Author

Leave a Reply

You cannot copy content of this page

Scroll to Top