ಸಂಕ್ರಾಂತಿ ಕಾವ್ಯ ಸುಗ್ಗಿ
ಯಕ್ಷಿಯ ಪ್ರಶ್ನೋತ್ತರ
ಡಾ. ರೇಣುಕಾ ಅರುಣ ಕಠಾರಿ
ಗಂಭೀರವಾಗಿ ಭೀಗುತ್ತಿದ್ದ ಕಾಲವದು
ಮನಸಿನ ಹುಚ್ಚಾಟಕ್ಕೆ ಎಣೆಯೇ ಇರಲಿಲ್ಲ
ಕಾಲದೊಳಗೆಯೆ ಅಡಗಿದ ಜೀವಸಾರದ ಕಡೆಗೆ
ಬವಣೆಯ ಹುಡಕ ಹೊರಟ ಯಕ್ಷಿ ನಾ!
ಮುರುಟಿದ ಕನಸಗಳೆಲ್ಲವೂ ಮೆರವಣಿಗೆಗೆ ಸಿದ್ದವಾಗಿದ್ದು ತಿಳಿಯಲಿಲ್ಲ.
ಎಲ್ಲಾ ಎಲ್ಲೆಯನ್ನು ಮೀರಿ ಹತಾಟೆಯ ಹಿಂದೆ ಸರಿದಿತ್ತು.
ಹಂಸದ ನಡುಗೆ ಕುರ್ಮದ ಆಯಸ್ಸು ಕಣ್ಮಂದೆ ನಿಂತಿತ್ತು..
ಕಡಲಳೊಗಿನ ಲವಣ ಮಾತ್ರ ನೀರಲ್ಲಿಯೇ ತೆಲುತ್ತಿತ್ತು.
ದುಗುಡು ದುಮ್ಮಾನಗಳಿಗೆ ವಿವೇಕ ಹೇಳಿ ಸಾಕಾಗಿತ್ತು
ಅನುಭವ ಅನುಭಾವದತ್ತ ಸಾಗಿದ ಪಯಣ ನಿಲ್ಲುತ್ತಿರಲಿಲ್ಲ
ಬದುಕಿನ ಎಲ್ಲ ಮಗ್ಗಲುಗಳು ಸ್ಮಶಾನದ ಅಂಗಳದಲ್ಲಿ ನಲಿಯುತ್ತಿದ್ದವು.
ಹೇಳದೆ ಹೊರಟ ಯಕ್ಷಿಯ ಯೋಚನೆಗೆ ನಿಲುವು ಸಿಕ್ಕುವುದಾದರು ಹೇಗೆ?
ಬೇವರು, ಮಣ್ಣಿನ ವಾಸನೆಗೆ ಮೆಚ್ಚಿ ಬಂದವರು ಯಾರು ಇಲ್ಲ.
ತೊಟ್ಟು, ಮಾಗಿದ ರೂಪಲಾವಣ್ಯದ ಸಂತೃಪ್ತಿಗೆ ಸೇರೆ ಸಿಕ್ಕವರೇ ಹೆಚ್ಚು.
ಇಳೆಯ ಗರ್ಭದೊಳಗೆ ಸಿಲುಕಿದ ನಾ ಎಂಬುವುದು ಮಾಂiÀiವಾಗಿದೆ
ಹತಾಶೆಯೊಂದಿಗೆ ಅಂಟಿಕೊAಡಿದ್ದ ಒಡನಾಟಕ್ಕೆ ತೆರೆ ಹಾಕುವ ಕಾಲ ಬಂದಾಯಿತು.
ಚರಿತ್ರೆಯ ಪುಟಗಳ ಹಿಂದಿನ ಕಥೆಗೇನು ಉತ್ತರವೂ ಇದೆ, ಬರೆದಿದ್ದು ಇದೆ.
ಆದರೆ ಮುಂದಿನ?
ಪ್ರೀತಿ ಸಂಕೋಲೆಗಳಿAದ ಹೆಣೆದುಕೊಂಡ ಅದೆಷ್ಟೋ ಹೆಣ್ಣು ತಡಕಾಡಿ,
ಬೆಂದ ಕಥೆ ಮೂಲೆಗೆ ಸೇರಿದ್ದು ಇದೆಲ್ಲಾ?
ಈ ಯಕ್ಷಿಯ ಪ್ರಶ್ನೊತ್ತರಗಳಿಗೆ ಉತ್ತರದ ಮಾತೆಲ್ಲಿ,
ಸಿಗದೆ, ಬತ್ತದ ಬದುಕು ಹುಡುಕುತ್ತ,
ಹೊರಟ ನಾ ಯಕ್ಷಿಯಲ್ಲದೇ ಮತ್ತೇನು ??