ಸಂಕ್ರಾಂತಿ ಕಾವ್ಯ ಸುಗ್ಗಿ

ಹುಟ್ಟು

ಪೂರ್ಣಿಮಾಸುರೇಶ್

woman wrapped by white textile

ಹಚ್ಚಡದ ಗಂಟಿನಲಿ
ನೆನೆದು
ಬೆದರಿ ಅವಚಿ
ಕೂತ ಕಾಳು

ಎದೆಯ ಮೇಲೆ ಬುಲ್ ಡೋಜರ್

ನೋವಿನ ಹಿಡಿತ
ಆವರಿಸಿದ ಕಪ್ಪು

ತಡೆಯಲಾರೆ ಹೊರೆ
ಅಂತರಾಳದ ಮೊರೆ

ಬಿಗಿದ ಸೆರೆ ಸಡಿಲ
ಆಯಾಸದ ದಿಟ್ಟಿ
ತೆರೆದರೆ
ತೂರಿ ಬಂದ ಬೆಳಕು


ಒಡಲು ಹಗುರ
ಒಳಗೆ ಹಸಿರು

ಹೊಸ ಕನಸು
ಹೊಸ ಹುಟ್ಟು

ಬಾಹು ಚಾಚಿದ ಆಗಸ
ನಾನು ಊರ್ಧ್ವಮುಖಿ


One thought on “

Leave a Reply

Back To Top