ಕಾದಿದೆ ಮುಂಬೆಳಗು
ಕವಿತೆ ಕಾದಿದೆ ಮುಂಬೆಳಗು ಯಮುನಾ.ಕಂಬಾರ ಕಾದಿದೆ ಮುಂಬೆಳಗುಹೊಸ ವರುಷದ ಹೊಸ್ತಿಲಲಿಹುಡುಕುತ್ತಿದೆ – ತೆರೆದ ಬಾಗಿಲುಗಳಿಗೆ !! ತಡಕಾಡುತ್ತಿದೆ – ಕತ್ತಲಲಿಬಚ್ಚಿಟ್ಟ ಪ್ರೀತಿ ಸಹಕಾರಗಳಿಗಾಗಿದೂರಕೆ ಹರಿದ ಬೇರುಗಳು ಸಿಗದೇ – ನರಳುತಿದೆ !! ತನ್ನ ಕೈ ಕೊಸರುತಿದೆ – ಜಾತಿಯ ಜಾಲಗಳಲ್ಲಿ ಸಿಕ್ಕುವಾಗ್ವಾದ ನಡೆಸುತಿದೆ – ಮನುಷ್ಯನ ಬರುವು ನಿರ್ಗಮನ – ಕೇವಲ ಬರಿ ಮೈ ಎಂದು!! ತನ್ನ ಅಸ್ಮಿತೆ ಹಾಳಾಗದಿರಲೆಂದುರಾತ್ರಿ ಕಣ್ಣಾಗಿ ತೆರೆದುಕೊಂಡೇ ನಿಂತಿದೆ.ಶ್ರಮವು ವ್ಯರ್ಥವಾಗದಿರಲೆಂದುಮುಗಿಲಿಗೆ ಮುಖಮಾಡಿ ಗೋಳಿ ಡುತಿದೆ – ಈ ಬದುಕು ಶುಭವಾಗಲೆಂದು !! […]
ಹೊಸತು ಉದಯಿಸಲಿ
ಕವಿತೆ ಹೊಸತು ಉದಯಿಸಲಿ ಪ್ರತಿಮಾ ಕೋಮಾರ ನೋವ ಕರಿ ಛಾಯೆಹಿಡಿದೇ ಹೊಸ್ತಿಲೊಳಗೆ ಬಂದೆಅನುಕಂಪದ ಲವ ಲೇಷವೂಇಲ್ಲದೇ ಇಡೀ ವರುಷ ನಿಂದೆ ನಲಿವಿನ ಬಯಲಲ್ಲಿ ನೋವಿನಬೀಜವನು ಬಿತ್ತಿ ನೀರೆರೆದುಬಲವಾಗಿ ಬೆಳೆದೆಬೀಗಬೇಡ ಬಾಗು ಎಂಬಪಾಠ ಪ್ರತಿ ಎದೆಯೊಳಗೆ ಬರೆದೆ ಇಪ್ಪತ್ತರ ವರುಷಮಾಯವಾಗಿಸಿದೆ ಹರುಷಬದುಕು ಬೆಳಗಿಲ್ಲನಡೆಸಿದೆ ಕತ್ತಲೊಳಗೆಉಸಿರ ಬಿಗಿ ಹಿಡಿದು ಈಗ ಹೊರಟಿದ್ದೀಯಾದೊಡ್ಡ ಪಾಠವನು ಕಲಿಸಿಎಂದೂ ಎಚ್ಚರ ತಪ್ಪದ ಹಾಗೇಹಳೆಯಂಗಿ ಕಳಚಿಹೊಸದಾಗಿ ಕಾಲಿಟ್ಟ ಇಪ್ಪತ್ತೊಂದುತೊಳೆದುಬಿಡು ಹಳೆ ಕೊಳೆಯ ನೀರೆರೆ ತುಸು ಬತ್ತಿದ ಕನಸುಗಳಿಗೆಉದಯಿಸಲಿ ಹೊಸತು ಕಾಂತಿಎಲ್ಲರ ಕಂಗಳಲಿಗತವು ಮತ್ತೇ ಮರುಕಳಿಸದ ಹಾಗೇಹೊಸ […]
ಶ್ರಮಿಕ
ಕವಿತೆ ಶ್ರಮಿಕ ಡಾ.ಜಿ.ಪಿ.ಕುಸುಮ, ಮುಂಬಯಿನನ್ ತಾಯಿ….ನೀ ಗೆಲ್ಲಬೇಕೆಂದುನಾ ನಿಂತೆ ಒಳಗೆ.ದೂರ ದೂರದವರೆಗೆಯಾರೂ ಇಲ್ಲ ಹೊರಗೆ.ಗಲ್ಲಿಗಲ್ಲಿಗಳಲ್ಲಿ ಮೌನ ಮಲಗಿದೆಮಣ್ಣು ಒಣಗಿದೆ.ನನ್ನೆದೆ ಗೂಡು ಒದ್ದೆಯಾಗ್ತಿದೆನಿನ್ನ ಬಿಟ್ಟು ಹೋಗೊಕಾಗಲ್ಲಹೋದ್ರೆ ಹೋದಲ್ಲಿಬದುಕೋಕಾಗಲ್ಲ.ನನ್ನ ದಿನ, ನನ್ನ ರಾತ್ರಿನನ್ನ ಸೋಲು, ನನ್ನ ಗೆಲುವುಎಲ್ಲವೂ ನೀನೆ..ನೀ ಯಾವತ್ತೂ ಹೀಗೆಮನೆಬಾಗಿಲು ಮುಚ್ಕೊಂಡುಮೂಕಿಯಾಗಿದ್ದಿಲ್ಲ.ಅಂಗಾಂಗ ಸುಟ್ಟುಕೊಂಡಾಗ್ಲೂಮಳೆನೀರು ಮುಳಗಿಸಿದಾಗ್ಲೂಭಯ ಗೆದ್ದಿಲ್ಲ…ಇದೀಗ ಏನಾಯ್ತೋ ತಾಯಿಕಾಣದ ವೈರಿಗೆಎಷ್ಟೊಂದು ಸೊರಗಿದೆ.ಹಳಿತಪ್ಪಿದೆ ನೋಡು ಬದುಕಬಂಡಿಸ್ವಪ್ನನಗರಿಯಲ್ಲೀಗಬದುಕು ಘಮಘಮಿಸುವುದಮರೆತಿದೆ.ಬರಿಗಾಲಲಿ ಬರಿಕಿಸೆಯಲಿಬರಿಹೊಟ್ಟೆಗೆ ಕೈಯನಿಟ್ಟುನೆತ್ತಿಮೇಲೆರಡು ಪ್ಯಾಂಟು ಶರ್ಟುರಾಶಿ ಬಿಸಿಲ ಸೀಳಿಕಾಲನ್ನೆತ್ತಿ ಹಾಕುತಸಾಗ್ತೇನೆ ನಾನುಹೊಸ ಕನಸುಗಳ ನೇಯಲುತೀರ ಬಿಟ್ಟುಸಾಗರವ ದಾಟಲು. ***************************
ಹುನ್ನಾರ
ಕವಿತೆ ಹುನ್ನಾರ ಡಾ.ಸುರೇಖಾ ರಾಠೋಡ ಕಾಲಲಿ ಗೆಜ್ಜೆ ಹಾಕಿನನ್ನ ಚಲನವಲನನಿಯಂತ್ರಿಸುವಹುನ್ನಾರ ನಿನ್ನದು ಕೊರಳಲಿ ತಾಳಿ ಕಟ್ಟಿನನ್ನ ತಾಳ್ಮೆಪರೀಕ್ಷಿಸುವಹುನ್ನಾರ ನಿನ್ನದು ಕೈಯಲ್ಲಿ ಕೈಬಳೆ ತೊಡಿಸಿಏನು ಮಾಡದಂತೆಕೈಕಟ್ಟಿ ಹಾಕುವಹುನ್ನಾರ ನಿನ್ನದು ಹಣೆಗೆ ನಿನ್ನ ಹೆಸರಿನಕುಂಕುಮವ ಹಚ್ಚಿಸಿಹಣೆಯ ಬರಹವೆನಿನ್ನದಾಗಿಸಿಕೊಳ್ಳುವಹುನ್ನಾರ ನಿನ್ನದು ಕಾಲಿನ ಬೆರಳುಗಳಿಗೆಕಾಲುಂಗುರವ ತೊಡೆಸಿನಡೆಯನ್ನೆ ಕಟ್ಟಿ ಹಾಕುವಹುನ್ನಾರ ನಿನ್ನದು ಎಲ್ಲವ ತೊಡಿಸಿಕಟ್ಟಿ ಹಾಕಿರುವೇ ಎಂದುನೀ ಬಿಗುತ್ತಿರುವಾಗ …ನನ್ನ ಮನಸ್ಸನ್ನುಕಟ್ಟು ಹಾಕಲುಸಾಧ್ಯವೇ?… *********************************************************
“ಶಾವಾ”ತ್ಮ ಪದಗಳು
ಮನದ ಮಾತು ಶಾಂತಿವಾಸು ಮನಸನ್ನೊಂದು ಮಾತು ಕೇಳು….ಹುಟ್ಟಿನಿಂದ ಕಲಿತು, ಸರಿತಪ್ಪುಗಳನ್ನರಿತು, ಲೋಕಾರೂಢಿಯನುಭವ ಪಡೆದರೇನು? ಕಾರ್ಯಸಿದ್ದಿಗೆ,ಮನಸನ್ನೊಂದು ಮಾತು ಕೇಳು…. ಮನಕ್ಕೊಪ್ಪುವ ಕೆಲಸ ಮಾಡು….ಯಾರೆಷ್ಟು ನಿಂದಿಸಲೇನು? ನಿನ್ನೆತ್ತರವನ್ಹೊಗಳಲೇನು? ತಟಸ್ಥ ಮನಕೆ ಶಕ್ತಿ ತುಂಬಿ ಆತ್ಮತೃಪ್ತಿಯಿಂದ,ಮನಕ್ಕೊಪ್ಪುವ ಕೆಲಸ ಮಾಡು…. ಮನವನೊಮ್ಮೆ ಇಣುಕಿ ನೋಡು….ಎಲ್ಲವೂ ನಿನದಾಗಿ ಕಂಡರೂ, ಬಂದುದು ಕೈತಪ್ಪಿ ಹೋಗಲು ನೆಪವೊಂದಿದೆಯೆಂಬ ಸತ್ಯವರಿತ,ಮನವನೊಮ್ಮೆ ಇಣುಕಿ ನೋಡು…. ಮನಸಿಗೊಂದು ಮಾತು ಹೇಳು…ಜಗದೆಲ್ಲವೂ ನೀನಲ್ಲ, ಜಗದಲ್ಲಿಹುದೆಲ್ಲವೂ ನಿನದಲ್ಲ. ಇರುವರರಿತು, ಬಾಳಲದುವೇ ಬದುಕೆಂದು,ಮನಸಿಗೊಂದು ಮಾತು ಹೇಳು…. *****************************
ಜಿಹ್ವೆ
ಕವಿತೆ ಜಿಹ್ವೆ ಅರುಣ ರಾವ್ ಈ ನಾಲಿಗೆಗೇನು?ಅಂದು ಕೊಂಡದ್ದು ನೋಡಿದ್ದುಊಹಿಸಿಕೊಂಡದ್ದು ಕಲ್ಪಿಸಿಕೊಂಡದ್ದು ನುಡಿದುಬಿಡುತ್ತದೆ ನುಡಿದೇ ಬಿಡುತ್ತದೆತುಸು ತಡೆದರೇನು ನಷ್ಟ? ಎಂದೊಮ್ಮೆಕೇಳಿದರೆ ಸರಸರನೆ ತಿರುಗಿ ಗಿರಗಿರನೆ ಸುತ್ತಿಮೇಲೆ ಕೆಳಗೆ ಹಾರಿ ಉರಿದುರಿದು ಬೀಳುತ್ತದೆ ತಾಳ್ಮೆಯಿಂದಿದ್ದು ಕೊಂಚಯೋಚಿಸಬಾರದೇ ಕ್ಷಣಕಾಲ?ಮನಃಶಾಂತಿಯಾದರೂ ಇರುತಿತ್ತು ಆಗಕೇಳಿದ್ದಷ್ಟೇ ಅಲ್ಲ, ನೋಡಿದ್ದೂ ಸುಳ್ಳಾಗುವ ಕಾಲಇದುವೆ ಎಂದೊಂದರೆಗಳಿಗೆ ನೆನೆಯಬಾರದೆ? ಗಳಿಗೆಗೊಂದರಂತೆ ಮಾತಂತೆ ಕತೆಯಂತೆಅದರಲೊಂದಿಷ್ಟು ಹುರುಳು ಹೂರಣಮತ್ತೆ ಕೆಲವೇನೋ ಕಸ ಕಡ್ಡಿ ಕೊಚ್ಚೆ ಕೂಳೆಕೆಸರೆರೆಚಾಟ ಅರೆಚಾಟ ಅಬ್ಬರಕಲ್ಪನೆಯ ಕೂಸಿನ ಅರೆನಗ್ನ ಕುಣಿದಾಟ ಮುಂದೊಂದು ಹಿಂದೊಂದು ಮತ್ತೊಂದು ಮಗದೊಂದು ಆಗೊಂದು ಈಗೊಂದುನನಗೊಂದು […]
ನಸುಕಿನ ತುಂತುರು
ಕವಿತೆ ನಸುಕಿನ ತುಂತುರು ಸ್ಮಿತಾ ಶ್ಯಾಮ ತುಂತುರು ಹನಿಗಳ ಮುಂಜಾನೆಯ ಮಳೆಸರಿಗಮ ಪದನಿಸ ಹಾಡುತಿದೆಸಪ್ತ ಸ್ವರಗಳ ಸಂಗಮದಲಿ ತೇಲಿದೆಹಸಿರನುಟ್ಟು ಕಂಗೊಳಿಸುತಿಹ ವಸುಧೆ || ಪ|| ಹಕ್ಕಿಗಳಿಂಚರದಿ ಬೆರೆತಿದೆ ಮಳೆಗಾನಹೊಮ್ಮುತಲಿದೆ ಹೊಂಬೆಳಕಿನ ರವಿ ಕಿರಣಪರಿಮಳವನು ಸೂಸುತಲಿವೆ ಹೂಬನಪ್ರಕೃತಿಯ ಸೊಬಗದು ರೋಮಾಂಚನ. ||೧|| ಮುಂಜಾನೆಯ ಮಳೆಯ ಸಿಂಚನತನನ ತನನ ನವಿಲ ನರ್ತನಸಾಗರದ ದಡಕೆ ಅಲೆಯ ಚುಂಬನತಂಪು ಸೂಸುತ ಹಾಯ್ವ ಪವನ. ||೨|| ಸುಪ್ರಭಾತ ಹಾಡುತಲಿದೆ ಪ್ರಾತಃಕಾಲದಿ ವರ್ಷವುಗುಡಿಗೋಪುರಕದುವೆ ನಸುಕಿನ ಅಭಿಷೇಕವುಶುಭ್ರಗೊಂಡಿಹುದು ಮನೆ ಮನೆಯ ಅಂಗಳವುತನುಮನವನು ತುಂಬುತಲಿದೆ ನವೋಲ್ಲಾಸ ಚೇತನವು||೩|| *********************************
ಮುನ್ನಡೆಗೆ ಹಿಂಬಾಗಿ
ಕವಿತೆ ಮುನ್ನಡೆಗೆ ಹಿಂಬಾಗಿ ಹರೀಶ ಕೋಳಗುಂದ ಕಣ್ಣ ಪರದೆಯ ಮೇಲೆ ಓಡುವಬಣ್ಣ ಬಣ್ಣದ ಚಿತ್ರಗಳುಉರುಳುವ ಗಾಲಿಚಕ್ರದ ಪರಿಧಿಯಲಿಸರಿದು ಮರೆಯಾಗುವ ಮೈಲುಗಲ್ಲುಗಳುದೂರ ತೀರದಲ್ಲೆಲ್ಲೋ ಇಳಿಬಿದ್ದು ನೆಲಕಚ್ಚಿದಾಕಾಶಕಾಗಜದೋಣಿಯ ಬಟ್ಟಲಿಗೆ ತೊಟ್ಟಿಕ್ಕುವ ಪಾತಾಳಗಂಗೆಭೂಮಧ್ಯರೇಖೆಗೂ ಭ್ರಮಣದ ನಶೆಇರುಳು ಬೆಳಕಿನಾಟಗೇಲಿ ನಗುವ ಕತ್ತಲುಬೆಂಕಿಯುಗುಳುವ ಮುಗಿಲುತಣ್ಣಗೆ ಸುಡುವ ಹಸಿವ ಜ್ವಾಲೆಕುದಿವ ಮೌನತುಮುಲಗಳ ಅದುಮಿಟ್ಟಂತೆಲ್ಲಾರೆಕ್ಕೆ ಬಡಿವ ತವಕಮಂಜು ಹೊದ್ದು ಮಲಗಿದ ಬೂದಿಯೊಳಗೂಹೆಪ್ಪುಗಟ್ಟಿ ಕುಳಿತ ಅಗ್ನಿಶಿಲ್ಪಜೀವದುಸಿರಿನ ಕಾತರಉರಿವ ಮಂದಾಗ್ನಿಯ ಬುತ್ತಿಗೆ ಕೈಯಿಕ್ಕುವ ತುಡಿತದೊಂದಿಯಾಗದ ಕಟ್ಟಿಗೆಯ ನಿರಾಶಾಭಾವನೋಯುವ ಕರುಳ ಕಣ್ಣ ಹನಿಗೆಚಿಗುರೊಡೆವ ಸಾಂತ್ವನದ ಬೆರಳುಒಂದೋ ಎರಡೋಒಡಕಲು ಬಿಂಬಕ್ಕೆ ಕೈ ಚಾಚಿ […]
ಹೊಸದಾಗುವುದಾದರೆ…!
ಕವಿತೆ ಹೊಸದಾಗುವುದಾದರೆ…! ಅನಿತಾ ಪಿ. ಪೂಜಾರಿ ತಾಕೊಡೆ ಎರಡು ಸಾವಿರದ ಇಪ್ಪತ್ತೊಂದರ ಪುಟಗಳಲಿಏನಾದರೂ ಹೊಸದಾಗುವುದಾದರೆಆ ಹೊಸತಿನೊಳು ಬದಲಾಗುವುದಾದರೆ…! ಸ್ವಾರ್ಥದ ಕಿಚ್ಚಿಳಿದು ಸೌಹಾರ್ದತೆ ಬೆಸೆದುಕ್ರೌರ್ಯವಳಿದು ಮಾನವೀಯತೆ ಮೊಳೆಯಲಿನಾನೆಂಬ ಅಹಂ ಮರೆತು ನಾವು ನಮ್ಮವರೆಂದುಉಳ್ಳವನು ಇಲ್ಲದವನ ಆಂತರ್ಯವನು ತಿಳಿಯಲಿ ಕಾರಣಗಳು ಸಂಬಂಧಗಳ ದೂರೀಕರಿಸದೆ ಸಕಾರಣಗಳು ಒಡೆದ ಮನಸ್ಸುಗಳನು ಕೂಡಿಸಲಿಬುದ್ಧಿಯು ಅತಿಯಾಸೆಯ ಕೈಗೆ ಸಿಲುಕದೆನೆಮ್ಮದಿಯ ಬದುಕಿಗಷ್ಟೆ ಸೀಮಿತವಾಗಿರಲಿ ಬೇಕು ಬೇಡಗಳ ನಡುವೆ ಸ್ವಾರ್ಥದೆಳೆಗಳು ಬಂದು ಅಂತರ ನಿರಂತರವಾಗದಿರಲಿಆಪ್ತ ಪರಮಾಪ್ತತೆಯ ಆಂರ್ತರ್ಯದ ಒಲವುಪದಗಳಲಿ ಹೊಳೆದು ಮಾಸುವ ಬಣ್ಣವಾಗದಿರಲಿ ಈ ವರ್ಷದಲಿ ಹೊಸತು ಹೀಗೂ ಒಂದಿರಲಿವೈರಾಣುವಿನಲ್ಲಿ ವಿನಾಶದ […]
ದಾಟಿದೆವು ನಾವೂ… ಎರಡಿಪ್ಪತ್ತರ ವರುಷ
ದಾಟಿದೆವು ನಾವೂ… ಎರಡಿಪ್ಪತ್ತರ ವರುಷ ಅನಿತಾ ಪಿ. ಪೂಜಾರಿ ತಾಕೊಡೆ ಹಾಗೆಯೇ ಕಳೆದು ಹೋಗಿಲ್ಲ…!ಇದ್ದಲ್ಲಿ ಇರುವ ಹಾಗೆಯೇಇರುವಷ್ಟಕ್ಕೆ ಹೊಂದಿಸಿಕೊಳ್ಳುವ ನೆಲೆಯಲಿಚಿತ್ರ ವಿಚಿತ್ರದೊಳ ಸತ್ಯವನು ಅರುಹಿಜೀವ ಜೀವನದ ಒಳಮರ್ಮವನುಕಲಿಸಿಯೇ ತೀರಿತಲ್ಲಾ ಎರಡಿಪ್ಪತ್ತರ ಈ ವರುಷ ‘ಒಂದು ವರ್ಷದ ಲೆಕ್ಕಬಿಟ್ಟೇ ಬಿಡಬೇಕು’ ಎಂದವರೆಲ್ಲ ಕೇಳಿ…!ಹಾಗೆಯೇ ಕಳೆದು ಹೋಗಿಲ್ಲ ಈ ವರ್ಷಜಗದಗಲ ಗಣ್ಯ ನಗಣ್ಯಗಳ ಚಿತ್ರಪಟಗಳನುತಿರುಗಾ ಮುರುಗಾ ಮಾಡಿಹಿತ ಅಹಿತಗಳ ನಡುವೆ ತೂಗಿಸಿಮುಖ್ಯ ಅಧ್ಯಾಯವನೇ ತೆರೆದಿರಿಸಿತ್ತಲ್ಲಾ…! ಕಾಸು ಮೋಜಿನ ಪರಾಕಾಷ್ಠೆಯಲಿಕಳೆದು ಹೋದವರನೂಅಡ್ದ ದಾರಿಯನಪ್ಪಿಕೊಂಡು ಬೀದಿ ಬೀದಿ ಸುತ್ತುವವರನೂಅತಂತ್ರದ ಸುಳಿಯಲಿಟ್ಟು ಉಪ್ಪು ಖಾರ […]