ನಸುಕಿನ ತುಂತುರು

ಕವಿತೆ

ನಸುಕಿನ ತುಂತುರು

ಸ್ಮಿತಾ ಶ್ಯಾಮ

brown grass during daytime

ತುಂತುರು ಹನಿಗಳ ಮುಂಜಾನೆಯ ಮಳೆ
ಸರಿಗಮ ಪದನಿಸ ಹಾಡುತಿದೆ
ಸಪ್ತ ಸ್ವರಗಳ ಸಂಗಮದಲಿ ತೇಲಿದೆ
ಹಸಿರನುಟ್ಟು ಕಂಗೊಳಿಸುತಿಹ ವಸುಧೆ || ಪ||

ಹಕ್ಕಿಗಳಿಂಚರದಿ ಬೆರೆತಿದೆ ಮಳೆಗಾನ
ಹೊಮ್ಮುತಲಿದೆ ಹೊಂಬೆಳಕಿನ ರವಿ ಕಿರಣ
ಪರಿಮಳವನು ಸೂಸುತಲಿವೆ ಹೂಬನ
ಪ್ರಕೃತಿಯ ಸೊಬಗದು ರೋಮಾಂಚನ. ||೧||

ಮುಂಜಾನೆಯ ಮಳೆಯ ಸಿಂಚನ
ತನನ ತನನ ನವಿಲ ನರ್ತನ
ಸಾಗರದ ದಡಕೆ ಅಲೆಯ ಚುಂಬನ
ತಂಪು ಸೂಸುತ ಹಾಯ್ವ ಪವನ. ||೨||

ಸುಪ್ರಭಾತ ಹಾಡುತಲಿದೆ ಪ್ರಾತಃಕಾಲದಿ ವರ್ಷವು
ಗುಡಿಗೋಪುರಕದುವೆ ನಸುಕಿನ ಅಭಿಷೇಕವು
ಶುಭ್ರಗೊಂಡಿಹುದು ಮನೆ ಮನೆಯ ಅಂಗಳವು
ತನುಮನವನು ತುಂಬುತಲಿದೆ ನವೋಲ್ಲಾಸ ಚೇತನವು||೩||

*********************************


Leave a Reply

Back To Top