ಕವಿತೆ
ಹೊಸತು ಉದಯಿಸಲಿ
ಪ್ರತಿಮಾ ಕೋಮಾರ
ನೋವ ಕರಿ ಛಾಯೆ
ಹಿಡಿದೇ ಹೊಸ್ತಿಲೊಳಗೆ ಬಂದೆ
ಅನುಕಂಪದ ಲವ ಲೇಷವೂ
ಇಲ್ಲದೇ ಇಡೀ ವರುಷ ನಿಂದೆ
ನಲಿವಿನ ಬಯಲಲ್ಲಿ ನೋವಿನ
ಬೀಜವನು ಬಿತ್ತಿ ನೀರೆರೆದು
ಬಲವಾಗಿ ಬೆಳೆದೆ
ಬೀಗಬೇಡ ಬಾಗು ಎಂಬ
ಪಾಠ ಪ್ರತಿ ಎದೆಯೊಳಗೆ ಬರೆದೆ
ಇಪ್ಪತ್ತರ ವರುಷ
ಮಾಯವಾಗಿಸಿದೆ ಹರುಷ
ಬದುಕು ಬೆಳಗಿಲ್ಲ
ನಡೆಸಿದೆ ಕತ್ತಲೊಳಗೆ
ಉಸಿರ ಬಿಗಿ ಹಿಡಿದು
ಈಗ ಹೊರಟಿದ್ದೀಯಾ
ದೊಡ್ಡ ಪಾಠವನು ಕಲಿಸಿ
ಎಂದೂ ಎಚ್ಚರ ತಪ್ಪದ ಹಾಗೇ
ಹಳೆಯಂಗಿ ಕಳಚಿ
ಹೊಸದಾಗಿ ಕಾಲಿಟ್ಟ ಇಪ್ಪತ್ತೊಂದು
ತೊಳೆದುಬಿಡು ಹಳೆ ಕೊಳೆಯ
ನೀರೆರೆ ತುಸು ಬತ್ತಿದ ಕನಸುಗಳಿಗೆ
ಉದಯಿಸಲಿ ಹೊಸತು ಕಾಂತಿ
ಎಲ್ಲರ ಕಂಗಳಲಿ
ಗತವು ಮತ್ತೇ ಮರುಕಳಿಸದ ಹಾಗೇ
ಹೊಸ ಹರುಷಕೆ ಮುನ್ನುಡಿ ಗೀಚಿಬಿಡು
*******************************
ಸೂಪರ್