ಕವಿತೆ
ಹುನ್ನಾರ
ಡಾ.ಸುರೇಖಾ ರಾಠೋಡ
ಕಾಲಲಿ ಗೆಜ್ಜೆ ಹಾಕಿ
ನನ್ನ ಚಲನವಲನ
ನಿಯಂತ್ರಿಸುವ
ಹುನ್ನಾರ ನಿನ್ನದು
ಕೊರಳಲಿ ತಾಳಿ ಕಟ್ಟಿ
ನನ್ನ ತಾಳ್ಮೆ
ಪರೀಕ್ಷಿಸುವ
ಹುನ್ನಾರ ನಿನ್ನದು
ಕೈಯಲ್ಲಿ ಕೈಬಳೆ ತೊಡಿಸಿ
ಏನು ಮಾಡದಂತೆ
ಕೈಕಟ್ಟಿ ಹಾಕುವ
ಹುನ್ನಾರ ನಿನ್ನದು
ಹಣೆಗೆ ನಿನ್ನ ಹೆಸರಿನ
ಕುಂಕುಮವ ಹಚ್ಚಿಸಿ
ಹಣೆಯ ಬರಹವೆ
ನಿನ್ನದಾಗಿಸಿಕೊಳ್ಳುವ
ಹುನ್ನಾರ ನಿನ್ನದು
ಕಾಲಿನ ಬೆರಳುಗಳಿಗೆ
ಕಾಲುಂಗುರವ ತೊಡೆಸಿ
ನಡೆಯನ್ನೆ ಕಟ್ಟಿ ಹಾಕುವ
ಹುನ್ನಾರ ನಿನ್ನದು
ಎಲ್ಲವ ತೊಡಿಸಿ
ಕಟ್ಟಿ ಹಾಕಿರುವೇ ಎಂದು
ನೀ ಬಿಗುತ್ತಿರುವಾಗ …
ನನ್ನ ಮನಸ್ಸನ್ನು
ಕಟ್ಟು ಹಾಕಲು
ಸಾಧ್ಯವೇ?…
*********************************************************
Nice Analysis of male dominance through culture tradition and custom angles
ಒಳ್ಳೆಯ ಕವಿತೆ