ಹೊಸದಾಗುವುದಾದರೆ…!

ಕವಿತೆ

ಹೊಸದಾಗುವುದಾದರೆ…!

ಅನಿತಾ ಪಿ. ಪೂಜಾರಿ ತಾಕೊಡೆ

timelapse photo of lights

ಎರಡು ಸಾವಿರದ ಇಪ್ಪತ್ತೊಂದರ ಪುಟಗಳಲಿ
ಏನಾದರೂ ಹೊಸದಾಗುವುದಾದರೆ
ಆ ಹೊಸತಿನೊಳು ಬದಲಾಗುವುದಾದರೆ…!

ಸ್ವಾರ್ಥದ ಕಿಚ್ಚಿಳಿದು ಸೌಹಾರ್ದತೆ ಬೆಸೆದು
ಕ್ರೌರ್ಯವಳಿದು ಮಾನವೀಯತೆ ಮೊಳೆಯಲಿ
ನಾನೆಂಬ ಅಹಂ ಮರೆತು ನಾವು ನಮ್ಮವರೆಂದು
ಉಳ್ಳವನು ಇಲ್ಲದವನ ಆಂತರ್ಯವನು ತಿಳಿಯಲಿ

ಕಾರಣಗಳು ಸಂಬಂಧಗಳ ದೂರೀಕರಿಸದೆ 
ಸಕಾರಣಗಳು ಒಡೆದ ಮನಸ್ಸುಗಳನು ಕೂಡಿಸಲಿ
ಬುದ್ಧಿಯು ಅತಿಯಾಸೆಯ ಕೈಗೆ ಸಿಲುಕದೆ
ನೆಮ್ಮದಿಯ ಬದುಕಿಗಷ್ಟೆ ಸೀಮಿತವಾಗಿರಲಿ

ಬೇಕು ಬೇಡಗಳ ನಡುವೆ ಸ್ವಾರ್ಥದೆಳೆಗಳು ಬಂದು 
ಅಂತರ ನಿರಂತರವಾಗದಿರಲಿ
ಆಪ್ತ ಪರಮಾಪ್ತತೆಯ ಆಂರ್ತರ್ಯದ ಒಲವು
ಪದಗಳಲಿ ಹೊಳೆದು ಮಾಸುವ ಬಣ್ಣವಾಗದಿರಲಿ

ಈ ವರ್ಷದಲಿ ಹೊಸತು ಹೀಗೂ ಒಂದಿರಲಿ
ವೈರಾಣುವಿನಲ್ಲಿ ವಿನಾಶದ ಗುಣವಳಿದು
ಜೀವಕ್ಕೆ ಜೀವ ಕೊಡುವ ಸಂಜೀವಿನಿಯಾಗಲಿ
ಈ ಸೃಷ್ಟಿಯಲಿ ಪ್ರತಿಯೊಂದು ಜೀವಿಗೂ
ಬದುಕುವ ಸಮಾನ ಅವಕಾಶವಿರಲಿ

ಎರಡು ಸಾವಿರದ ಇಪ್ಪತ್ತೊಂದರ ಹೊಸ್ತಿಲಿಗೆ 
ತಮಗೆಲ್ಲರಿಗೂ ಆತ್ಮೀಯ ಸ್ವಾಗತ ಕೋರುವ 

****************************

8 thoughts on “ಹೊಸದಾಗುವುದಾದರೆ…!

  1. ನಿಮ್ನ ಹೊಸಗುವದಾದರೆ ಕವಿತೆ ಸಮಹೋಚಿತವಾಗಿ ಮೂಡಿಬಂದಿದೆ. ನಾವೆಲ್ಲರೂ ಹೊಸವರ್ಷ 2021ನ್ನು ಸ್ವಾಗತಿಸೋಣ. ಈ ವರ್ಷ ನಿಮಗೆ ಸುಖ, ಸಂಪತ್ತು ಮತ್ತು ಆಯುರಾರೋಗ್ಯ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥನೆ

Leave a Reply

Back To Top