ಕವಿತೆ
ಕಾದಿದೆ ಮುಂಬೆಳಗು
ಯಮುನಾ.ಕಂಬಾರ
ಕಾದಿದೆ ಮುಂಬೆಳಗು
ಹೊಸ ವರುಷದ ಹೊಸ್ತಿಲಲಿ
ಹುಡುಕುತ್ತಿದೆ – ತೆರೆದ ಬಾಗಿಲುಗಳಿಗೆ !!
ತಡಕಾಡುತ್ತಿದೆ – ಕತ್ತಲಲಿ
ಬಚ್ಚಿಟ್ಟ ಪ್ರೀತಿ ಸಹಕಾರಗಳಿಗಾಗಿ
ದೂರಕೆ ಹರಿದ ಬೇರುಗಳು ಸಿಗದೇ – ನರಳುತಿದೆ !!
ತನ್ನ ಕೈ ಕೊಸರುತಿದೆ – ಜಾತಿಯ ಜಾಲಗಳಲ್ಲಿ ಸಿಕ್ಕು
ವಾಗ್ವಾದ ನಡೆಸುತಿದೆ – ಮನುಷ್ಯನ ಬರುವು ನಿರ್ಗಮನ – ಕೇವಲ ಬರಿ ಮೈ ಎಂದು!!
ತನ್ನ ಅಸ್ಮಿತೆ ಹಾಳಾಗದಿರಲೆಂದು
ರಾತ್ರಿ ಕಣ್ಣಾಗಿ ತೆರೆದುಕೊಂಡೇ ನಿಂತಿದೆ.
ಶ್ರಮವು ವ್ಯರ್ಥವಾಗದಿರಲೆಂದು
ಮುಗಿಲಿಗೆ ಮುಖಮಾಡಿ ಗೋಳಿ ಡುತಿದೆ – ಈ ಬದುಕು ಶುಭವಾಗಲೆಂದು !!
ತನ್ನ ಶಕ್ತಿ ಸಾಮರ್ಥ್ಯಗಳು ನಾಡ ಹಬ್ಬಕೆ ಎಂದು
ಮೂಡಲಿ ಕ್ಢಿತಿಯಲಿ ಹೊಸ ದಿಗಂತ ತೆರೆದು
ಒಂದಾದರೂ ಹೆಜ್ಜೆ ಗುರುತು ಉಳಿಯಲಿ ಎಂದು !!.
ಬಹು ಆಸೆ ಹೊತ್ತು ಬಂದ
ಹೊಂಗನಸು
ಹೂವಾಗಿ ಅರಳಲಿ ಎಂದು ಹಲಬುತಿದೆ
ಹಣ ಅಧಿಕಾರಗಳ ಬಂಡೆ ಗಲ್ಲಿಗೆ ಸಿಕ್ಕಿಕೊಂಡು !!
*********************************************
ಸುಂದರ ಕವನ
ಕವಿತೆ ಚೆನ್ನಾಗಿದೆ ಮೇಡಂ