ದಾಟಿದೆವು ನಾವೂ… ಎರಡಿಪ್ಪತ್ತರ ವರುಷ

ದಾಟಿದೆವು ನಾವೂ… ಎರಡಿಪ್ಪತ್ತರ ವರುಷ

Mirror Now rewinds India's COVID journey | Good-Bye 2020 - YouTube

ಅನಿತಾ ಪಿ. ಪೂಜಾರಿ ತಾಕೊಡೆ

ಹಾಗೆಯೇ ಕಳೆದು ಹೋಗಿಲ್ಲ…!
ಇದ್ದಲ್ಲಿ ಇರುವ ಹಾಗೆಯೇ
ಇರುವಷ್ಟಕ್ಕೆ ಹೊಂದಿಸಿಕೊಳ್ಳುವ ನೆಲೆಯಲಿ
ಚಿತ್ರ ವಿಚಿತ್ರದೊಳ ಸತ್ಯವನು ಅರುಹಿ
ಜೀವ ಜೀವನದ ಒಳಮರ್ಮವನು
ಕಲಿಸಿಯೇ ತೀರಿತಲ್ಲಾ ಎರಡಿಪ್ಪತ್ತರ ಈ ವರುಷ

‘ಒಂದು ವರ್ಷದ ಲೆಕ್ಕ
ಬಿಟ್ಟೇ ಬಿಡಬೇಕು’ ಎಂದವರೆಲ್ಲ ಕೇಳಿ…!
ಹಾಗೆಯೇ ಕಳೆದು ಹೋಗಿಲ್ಲ ಈ ವರ್ಷ
ಜಗದಗಲ ಗಣ್ಯ ನಗಣ್ಯಗಳ ಚಿತ್ರಪಟಗಳನು
ತಿರುಗಾ ಮುರುಗಾ ಮಾಡಿ
ಹಿತ ಅಹಿತಗಳ ನಡುವೆ ತೂಗಿಸಿ
ಮುಖ್ಯ ಅಧ್ಯಾಯವನೇ ತೆರೆದಿರಿಸಿತ್ತಲ್ಲಾ…!

ಕಾಸು ಮೋಜಿನ ಪರಾಕಾಷ್ಠೆಯಲಿ
ಕಳೆದು ಹೋದವರನೂ
ಅಡ್ದ ದಾರಿಯನಪ್ಪಿಕೊಂಡು ಬೀದಿ ಬೀದಿ ಸುತ್ತುವವರನೂ
ಅತಂತ್ರದ ಸುಳಿಯಲಿಟ್ಟು ಉಪ್ಪು ಖಾರ ಬೆರೆಸಿ
ಎರಡಿಪ್ಪತ್ತರ ನಲುಗಿನ ಶ್ಲೇಷೆಯಲಿ ತಿಳಿ ಹೇಳದೆ ಬಿಡಲಿಲ್ಲ

ಅರ್ಥ ಸ್ವಾರ್ಥಗಳು ಎಲ್ಲೆ ಮೀರದ ಹಾಗೆ
ಇರುವಷ್ಟು ದಿನದ ಬದುಕಿನ ಮೌಲ್ಯವನು
ಅಳೆದಳೆದು ತೋರಿಸಿದ ರೀತಿಯ ಸಲುವಾಗಿಯೇ
ಸೇರಿತೊಂದು ವರುಷ ಇತಿಹಾಸದ ಮುಖ್ಯ ಪುಟದೊಳಗೆ

ದಾಟಿದೆವು ನಾವೂ…
ಹೊಸ ಅರಿವು ಹೊಸದೊಂದು ತಿರುವಿನೊಡನೆ
ಎರಡಿಪ್ಪತ್ತರ ವರುಷವನು
ಕಹಿಯನು ಮರೆತು ಸಿಹಿಯನು ನೆನೆದು
ಬರೀ ಇಂದಷ್ಟೆ ಅಲ್ಲ ಹೊಸದಾಗಬೇಕು ಪ್ರತಿ ನಾಳೆಯೂ

Goodbye 2020!' Songs: Let's Push This Year Over a Cliff Already

**********

3 thoughts on “ದಾಟಿದೆವು ನಾವೂ… ಎರಡಿಪ್ಪತ್ತರ ವರುಷ

  1. Datedeve navu…. Ardippattara varusha. A well tribute to the bitter killar virus Carona Virus of year of 2020, by our own young dashing n dynamic writer, lyrictist n poet Anita P ತಾಕೋಡೆ. Goodby 2020 n let us welcome 2021

  2. ಕವನ ಚೆನ್ನಾಗಿದೆ..ಒಂದಿಷ್ಟು ಸಂಭ್ರಮ ಇನ್ನೊಂದಿಷ್ಟು ಸಂಕಟ ಕೊಟ್ಟಂತಹ ವರುಷ ಕಳೆದು ನಿರೀಕ್ಷೆಯ ಬರುವ ವರುಷಕ್ಕೆ ಕಾಲಿಡುತ್ತಿದ್ದೆವೆ…….!
    ಕವಯಿತ್ರಿ ಅನಿತಾ ಪೂಜಾರಿಯವರಿಗೆ ಧನ್ಯವಾದಗಳು

Leave a Reply

Back To Top