Category: ಕಾವ್ಯಯಾನ

ಕಾವ್ಯಯಾನ

ಮೂಕ ಸಾಕ್ಷಿ

ಕವಿತೆ ಮೂಕ ಸಾಕ್ಷಿ ಸರೋಜಾ ಶ್ರೀಕಾಂತ್ ಇತ್ತೀಚೆಗೆ ಸುಣ್ಣವಿರದ ಗೋಡೆಯೂ ಸನಿಹ ಬರಗೊಡದುಬಣ್ಣಿಸುವ ಕಿವಿಯಾಗುವುದು ಬಿಟ್ಟು ವರ್ಷಗಳೇ ಆದವೇನು!? ನೆಪಕ್ಕಾದರೂ ಸಾಂತ್ವನದ ನುಡಿಗಳಾರೂ ಆಡಲಿಲ್ಲದಿನಂಪ್ರತಿ ಸಾಯೋರಿಗೆ ಅಳುವರಾರು ಅಂದರೆಲ್ಲ ಈಗೀಗ ಜೋತು ಬಿದ್ದ ಸೂರಿನ ಜಂತಿಗೂ ಜಿಗುಪ್ಸೆಸಂಕಷ್ಟದ ಮಾಳಿಗೆ ಬಿಟ್ಟು ಕಾಲನಡಿ ಅಡಗಿ ಮಾಯವಾಗುವುದೇ ಇಷ್ಟವಂತೆ ಇಲಿ ಬಿಡಿ,ಇರುವೆ ಜಿರಳೆಗಳ ಹಾವಳಿಯಾವುದೂ ಇಲ್ಲಿಲ್ಲಬರಿದಾದ ಡಬರಿಗೆ ಯಾವ ಸಪ್ಪಳದ ಖಬರಿಲ್ಲ….! ನಿದ್ರೆ ಇರದ ರಾತ್ರಿಗಳಲ್ಲೆಲ್ಲಾ ಹರಕು ಹಾಸಿಗೆಯಿಂದ ಹೊರ ಬರುತ್ತಲೇ ಇರುವ ಕಾಲುಗಳುಸುಳ್ಳಾಗಿಸುತ್ತವೆ ಗಾದೆ ಮಾತನ್ನು ನಿತ್ಯ ಒಂದಿಷ್ಟು […]

ಗುಟ್ಟು

ಕವಿತೆ ಗುಟ್ಟು ಎಸ್ ನಾಗಶ್ರೀ ಸಣ್ಣ ಊರಿನ ಪ್ರೇಮಿಗಳಪಾಡು ಹೇಳಬಾರದುರಂಗೋಲಿ ಗೆರೆಯಲ್ಲಿನಸಣ್ಣ ಮಾರ್ಪಾಡುಮೂಲೆಯಂಗಡಿಯ ಕಾಯಿನ್ನುಬೂತಿನನಿಮಿಷಗಳ ಲೆಕ್ಕಕಾಲೇಜು ಬಿಟ್ಟ ಕರಾರುವಕ್ಕುನಿಮಿಷ ಸೆಕೆಂಡುಯಾವ ಬಸ್ಸಿನ ದಾರಿಯಲಿಅಡ್ಡ ನಿಂತಳು ಪೋರಿಯಾರ ಮನೆಯ ಚಿತ್ರಾನ್ನತಿಂದುಂಡ ಕೈ ಘಮನಾಯಿಗೇಕೆ ಅಲ್ಲೇ ನಡೆದಾಟಕೆನ್ನೆಗುಳಿ ಹೆಚ್ಚು ಹೊತ್ತುಯಾರ ಮುಂದಿತ್ತುಬೆಳಿಗ್ಗೆ ಮುಡಿಯದ ಹೂಸಂಜೆ ಹೆರಳಿಗೆ ಬಂದದ್ದು ಹೇಗೆಂಬಸೂಕ್ಷ್ಮಗಳು ಇಲ್ಲಿನಗೋಡೆ, ಗಿಡ, ಮರ, ಬೇಲಿಗಳಿಗೆ ಸಲೀಸುಕಣ್ಣಲ್ಲೇ ತೂಕದ ಬಟ್ಟು ಹೊತ್ತುತಿರುಗುವ ತಕ್ಕಡಿಗಳುರಸ್ತೆಬದಿಗೆ ನಿರಪಾಯ ನಿಂತುಮನೆ ಹಿರಿಯರಿಗೆಸಂದೇಶ ಕಳಿಸಿಮಜಾ ನೋಡುತ್ತವೆ ಸಣ್ಣ ಊರಿನ ಹೆಂಗೆಳೆಯರಬುದ್ಧಿ ಬ್ರಹ್ಮಾಂಡ ಬೆಳೆಯುವುದು ಹೀಗೆಪ್ರೀತಿಸಿದಾಗ ಬುದ್ಧಿ ಕಳೆಯದೆಜೋಪಾನ […]

ಸಾವು ಮಾತಾದಾಗ

ಕವಿತೆ ಸಾವು ಮಾತಾದಾಗ ವಿಶಾಲಾ ಆರಾಧ್ಯ ಭಯವೆನ್ನದಿರು ಕೊನೆಯೆನ್ನದಿರುಮೈಲಿಗೆ ಎನ್ನದಿರು ನನ್ನನುಹಗುರಾಗುವಿ ಮೃದುವಾಗುವಿಕೂಡಿದ ಕ್ಷಣದೊಳು ನನ್ನನು ಭವದೊಳು ಮಾಡಿದ ಪಾಪವತೊಳೆಯುವ ಹೊನಲು ನಾನುತರತರ ಮುಖವಾಡ ಹೊತ್ತವರಿಗೆಹೊಸ/ಕಳೆಯನು ಕೊಡುವೆ ನಾನು ಬಂಧು ಬಳಗವೇ ಹಿರಿದೆನ್ನದಿರುಎನಗಿಂ ಹಿರಿಯರ ನಾ ಕಾಣೆಸತಿ ಪತಿ ಸಂಸಾರ ಜೊತೆ ಮಮಕಾರನಾ ಬಂದರೆ ಅಲ್ಲಿಯೆ ಮಾಯೇ ಅಮ್ಮ ಅಪ್ಪ ಅಣ್ಣಾ ಅಕ್ಕಾಎನ್ನುವುದೆಲ್ಲಾ ಮೋಹಕೆಬಂದೊಡನೆಯೆ ನಾ ಕ್ಷಣಕರೆವರು ಹೆಣವೆಂದಾ ದೇಹಕೆ ————-

ಗಝಲ್

ಗಝಲ್ ರೇಷ್ಮಾ ಕಂದಕೂರ. ಮುಗ್ದ ಮನಸುಗಳು ನಾವು ಚಿವುಟದಿರಿ ನಮ್ಮನ್ನಕಂಡ ಕನಸುಗಳು ನನಸಾಗ ಬೇಕಿದೆ ಇನ್ನ ನೋವುಗಳ ಸಹಿಸದ ಹಸುಳೆಗಳು ನಾವುಕ್ರೌರ್ಯದ ದಾಳಿಗೆ ಸಿಲುಕಿಸದಿರಿ ತನುವನ್ನ ಭರವಸೆಗಳ ಬೆಳಕಿನಡಿ ಸಾಗಬೇಕಿದೆ ಜೀವನಎಸೆಯ ಬೇಡಿ ಮೃದುಲತೆಗೆ ಮೋಹದ ಜಾಲವನ್ನ ಜ್ಞಾನದ ಹಂಬಲಕೆ ಕೈ ಚಾಚಿದೆ ಕರೆದಿದೆ ಮನವುವಿವಾಹ ಕೂಪಕೆ ವಶಪಡಿಸದಿರಿ ಕುಸುಮವನ್ನ ನಿರ್ಮಲತೆಯ ನಾಜೂಕು ನನ್ನೊಡನಾಟಹೊಸಕಿ ಹಾಕದಿರಿ ನಾಜೂಕು ರೇಷಿಮೆಯನ್ನ

ಪ್ರೀತಿ ಹೊನಲು

ಕವಿತೆ ಶ್ರೀವಲ್ಲಿ ಶೇಷಾದ್ರಿ ಮನದ ಮಾತಿನ್ನು ಮುಗಿದಿಲ್ಲ ನಲ್ಲಮೆಲ್ಲನೆದ್ದು ಯಾಮಾರಿಸ ಬೇಡನಿನ್ನೆದೆಯೊಳಗೊಂದು ಮುಳ್ಳಿನ ಪಕ್ಕಕೆಂಪು ಗುಲಾಬಿ ಗಂಧವಿದೆಯೆಂದುನೀ ಹೇಳದಿದ್ದರೂ ನಾ ಬಲ್ಲೆಗಂಡಸು ಹಾಗೆ ಬಲು ಗಡಸುಎಲ್ಲಿಂದ ಬಂದೀತು ನಯ ಸೊಗಸುಬೇಕೆಂದೆ ಮುಖ ಗಂಟಿಕ್ಕಿ ಮುನಿಸುಲಘು ಬಿಗು ಮುತ್ತುದುರಿದ ಮಾತುಕೋಪವಾರಿದಾಗ ಅಪರೂಪಕ್ಕೊಂದು ನಗುದೂರ ನಿಂತ ಬಾನಲ್ಲಿ ಮಿಂಚಂತೆಆಲಿ ಕಲ್ಲುಗಳ ಕಲ್ಲೆಂದರಾದೀತೆಧರೆ ತಬ್ಬಿದೊಡೆ ನೀರಾದಂತೆಪ್ರೀತಿ ಹೊನಲು ಹರಿವ ಬಾ ಇನಿಯ *************************

ಕಡಲು ಕರೆದ ಗಳಿಗೆ

ಕವಿತೆ ಕಡಲು ಕರೆದ ಗಳಿಗೆ ಪ್ರೇಮಶೇಖರ ಕಡಲ ತಡಿಯಲ್ಲೊಂದು ಗುಡಿಯ ಕಂಡುಮಿಂದು ಮಡಿಯಾಗಿ ದರ್ಶನಕ್ಕೆಂದುನಡೆದರೆಗುಡಿಯಲ್ಲಿ ದೇವತೆಇರಲಿಲ್ಲ. ಮರಳಲ್ಲಿ ದಿಕ್ಕುಮರೆತು ಕಾಲಾಡಿಸಿ,ಬೊಗಸೆ ತುಂಬಶಂಖಚಿಪ್ಪಿ ಆಯ್ದು,ಪುಪ್ಪುಸ ಪೂರ್ತಿಪಡುವಣದ ಗಾಳಿಯೆಳೆದು,ಕಣ್ಣತುಂಬಾ ನೀಲಿನೀಲಿಕಡಲನು ಆಹ್ವಾನಿಸಹೊರಟರೆಅಲ್ಲಿ ಕಂಡಳು ಅವಳು. ಮುಂಗುರುಳ ಹಾರಲು ಬಿಟ್ಟುಸೆರಗಿಗೂ ಸ್ವಾತಂತ್ರ್ಯ ಕೊಟ್ಟು,ಜತೆಗೆ ಮನಕೂ ರೆಕ್ಕೆ ಕಟ್ಟಿ,ಎತ್ತಿಕೋಎಂದು ಕಾಲಪ್ಪಿದ ಅಲೆಗಳಿಗೆಕವನ ಜೋಗುಳದ ಗುಟುಕು ಕೊಡುತ್ತಲೇಕಡಲಿಗೆ ಹಾಯಿಯೇರಿಸಿಯಾನ ಹೊರಡುವಸನ್ನಾಹದಲ್ಲಿದ್ದಳು.ನನಗೆ ದೇವತೆ ಸಿಕ್ಕಿದ್ದಳು. ಶತಶತಮಾನಗಳಿಗೊಮ್ಮೆ ಬರುವಸುಮುಹೂರ್ತ ಅದು.ಗಡಬಡಿಸಿ ಎದೆಗೂಡಲ್ಲಿ ಗುಡಿಕಟ್ಟಿ ದೇವತೆಯನುಪ್ರತಿಷ್ಟಾಪಿಸಿಬಿಟ್ಟೆ. ಇಂದು ನನ್ನೆದೆಯೊಂದುಅಗಾಧ ಕಡಲು,ಕಡಲಲ್ಲೊಂದುಬೆಳ್ಳನ್ನ ಬಿಳೀ ಹಾಯಿದೋಣಿ,ದೋಣಿಯಲ್ಲಿ ದೇವತೆ. ನನ್ನ ಉಸಿರೀಗ ಅನುದಿನವೂ […]

ಮುಗಿಯದ ಪಯಣ

ಕವಿತೆ ಮುಗಿಯದ ಪಯಣ ವೀಣಾರಮೇಶ್ ಸಾವೇ ಕಾಡದಿರು ನನ್ನಮುಗಿದಿಲ್ಲ ಇನ್ನೂ ಬದುಕುವ ಹಲವುಕಾರಣ ಮನಸ್ಸಿಗಿದೆ ಇನ್ನೂ ದ್ವಂದ್ವಅರ್ಥ ಆಗದಮುಗ್ದ ಮನಸ್ಸುಗಳ ಜೊತೆ ಯುದ್ಧ ,.ಆಸೆ ಆಮಿಷಗಳಕತ್ತು ಹಿಸುಕಿ ಕಟ್ಟಬೇಕಿದೆನನ್ನ ಸೌಧಹೇಗೆ ಮುಗಿಯುವುದುನನ್ನ ಪಯಣನನ್ನ ಜೇಬಿನ್ನೂ ಭಣ ಭಣ ತಡಕಾಡಿದರೂ ಸಿಗದು ಕಾಂಚಾಣ ಪಾಪ ಪ್ರಜ್ಞೆಗಳು ಸುತ್ತುವರಿದು,ಮೋಸ,ಭ್ರಷ್ಟಾಚಾರ ದಿಕ್ಕು ತಪ್ಪಿಸಿಭಾವನೆಗಳೆಲ್ಲ ಸತ್ತು ಹೆಣವಾಗಿದೆ ನೀನು ಮತ್ತೆ ಕಾಡದಿರುಸಾವೇ, ನಾನಿಲ್ಲಿ ಸುಟ್ಟುಕರಕಲಾಗಿದ್ದೀನಿನನ್ನ ದಾರಿಗೆ ಅಡ್ಡ ಬರಬೇಡ ಎಲ್ಲದಕ್ಕೂಹೇಳುವೆ ಸಕಾರಣ

ಸ್ಮಿತಾಭಟ್ ಕಾವ್ಯಗುಚ್ಛ

ಸ್ಮಿತಾಭಟ್ ಕಾವ್ಯಗುಚ್ಛ ನಿರಂತರ ಈಗೀಗ ಒಲವಾಗುವದಿಲ್ಲಅವನ ಮೇಲೆಮುನಿಸು ಕೂಡಾ,, ಹೇಗಿದ್ದೀ ಎಂದು ಕೇಳದಿರೂಕೇಳದೇ ಹೋದರೂಅಂತಹ ವ್ಯತ್ಯಾಸವೇನಿಲ್ಲ, ಸಿಡಿಮಿಡಿ ಬಹಳ-ದಿನ ಉಳಿಯುವುದಿಲ್ಲಪ್ರೀತಿ ಆಗಾಗ-ಹುಟ್ಟಿದ್ದು ಗೊತ್ತೇ ಆಗುವದಿಲ್ಲ. ಇಣುಕಿಣುಕಿ ನೋಡುವ ರಸಿಕತೆಯಿಲ್ಲತಿರುಗಿ ನೋಡುವ ಆತುರವೂ ಇಲ್ಲಉಪಸ್ಥಿತಿ ಅನುಪಸ್ಥಿತಿಯಲ್ಲಿಬದಲಾವಣೆ ಇಲ್ಲ. ಎತ್ತಿಟ್ಟ ಸಾಲೊಂದುಓದದೇ ಹೋಗುತ್ತಾನವ,ಬರೆಯದೇ ಇಟ್ಟ ಹಾಡಿಗೆರಾಗ ಹುಡುಕಿ ಗುನುಗಿಕೊಳ್ಳುವಾಗಕದ್ದು ಕೇಳುವ ನವಿರುಅರಿತೂ ಅರಿಯದೇ ಆತುಕೊಳ್ಳುವ ಬೆರಗು ನೀ ನನ್ನೊಳಗಿರುವದಕ್ಕೆನಾ ನಿನ್ನೊಳಗಿರುವದಕ್ಕೆಸಾಕ್ಷಿ ಆಗಾಗ ಸಿಗುತ್ತದೆಮತ್ತದು ಅಧಿಕಾರವೂಮಾತೊಗೆದು ಹೋಗುವಾಗ ಸಣ್ಣ ಮೌನಮರಳಿ ಬರುವಾಗ ಎಲ್ಲ ದಮನ ಸವೆದ ದಾರಿಯಲೂ ಗರಿಕೆತಲೆಯೆತ್ತುತ್ತಲೇ ಇರುತ್ತದೆ.ಸಂಪೂರ್ಣ ಸಮ್ಮೋಹನಗೊಂಡ […]

ತೇಜಾವತಿ ಕಾವ್ಯಗುಚ್ಚ

ತೇಜಾವತಿ ಕಾವ್ಯಗುಚ್ಚ ಕಾರಣ ಕೇಳದಿರಿ ನೀವು.. ! ಸಪ್ಪೆ ಮೊಗದ ಹಿಂದಿನ ಕಾರಣ ಕೆಳದಿರಿ ನೀವುದುಃಖದ ಕಟ್ಟೆಯೊಡೆದುನೋವಿನ ಕೋಡಿಹರಿದುಕಂಬನಿಯ ಪ್ರವಾಹ ಹರಿದೀತು….! ಕ್ಷೇಮ ಕುಶಲೋಪರಿಯ ವಿಚಾರಿಸದಿರಿ ನೀವುಮುಳ್ಳುಹಾಸಿನ ಮೇಲೆ ನಡೆದುಬೆಂಕಿಯ ಕೆನ್ನಾಲಿಗೆಯಲಿ ಸಿಲುಕಿಅರೆಬೆಂದಿರುವ ಪಾದಗಳಲಿ ನೆತ್ತರು ತುಳುಕಾಡೀತು…! ಭವಿಷ್ಯದ ಗುರಿಯೇನೆಂದು ಪ್ರಶ್ನಿಸದಿರಿ ನೀವುತಮದ ಕೂಪದಲಿ ಮಿಂದುಕಣ್ಣೆದುರು ಹರಿದಾಡಿದ ನೆರಳು ಕಂಡುಮನಸು ಮತಿಭ್ರಮಣೆಗೆ ಒಳಗಾದೀತು.. ! ಕಲ್ಪನೆಯಾಚೆಗಿನ ವಾಸ್ತವವ ನೆನಪಿಸದಿರಿ ನೀವುಭರವಸೆಯ ಬೆಟ್ಟ ಕುಸಿದುನೆಮ್ಮದಿಯ ಕಣಿವೆ ಸವೆದುಕಂಡ ಕನಸುಗಳು ಕೊಚ್ಚಿ ಹೋದಾವು…! ಎಷ್ಟು ದಿನ ಅಂತ ಉಪ್ಪಿನಕಾಯಿ ಆಗಿರಲಿ […]

ನಿನ್ನ ನಿರೀಕ್ಷೆಯಲ್ಲೇ..

ಕವಿತೆ ನಿನ್ನ ನಿರೀಕ್ಷೆಯಲ್ಲೇ.. ನೀ.ಶ್ರೀಶೈಲ ಹುಲ್ಲೂರು ಜೊತೆಯಿದ್ದವರೆಲ್ಲಹೋದರು ಮುಂದೆ ಮುಂದೆನಾನುಳಿದೆ ನಿನ್ನ ನಿರೀಕ್ಷೆಯಲ್ಲೇ…ನೀನು ಬಂದೇ ಬರುವೆ ಎಂಬಭಾಷೆ ಇತ್ತಲ್ಲ ಹೇಗೂ.. ನಿರ್ಗಮಿಸಿದ ದಿನಕರಇಣುಕಿದ ಚಂದ್ರ ನೀಲಾಗಸದಿನಕ್ಷತ್ರಗಳೆಲ್ಲ ಸಾಕ್ಷಿಯಾದವುಮಿನುಗಿತು ಬೆಳ್ಳಿಚುಕ್ಕಿಯೂಹುಂಜಗಳೆಲ್ಲ ಕೂಗು ಹೊಡೆದವುಕೋಗಿಲೆಯ ಕುಹೂ ಕುಹೂಆಗಲೂ ನಾ ನಿನ್ನ ನಿರೀಕ್ಷೆಯಲ್ಲೇ.. ದೇವ , ದೇವಲೋಕದಯೆ ತೋರಲಿಲ್ಲನಿಜಕ್ಕೂ ನೀ ಬರಲೇ ಇಲ್ಲಇಳೆಯಲಿ ಮೈದಳೆಯಿತುಹೊಸತು ಹೊಂಬೆಳಕುನಿನ್ನ ನೆನಪಲಿ ಮೊಳೆತುಕುಡಿಯೊಡೆದವು ಕಂಬನಿ ತುಂಬಿದೆದೆಯ ಶಿಖರಾಗ್ರದ ಮೇಲಿಂದಿಳಿದ ಕಣ್ಣಹನಿ ಕಣಿವೆಯ ದಾಟಿನೆಲವನಪ್ಪಿತು ಥಟ್ಟನೆಎದೆ ಮೇಲೊರಗಿದಸೆರಗಿಗೂ ತೇವ ಭಾಗ್ಯಆಗಲೂ ನೀನು ಬರಲಿಲ್ಲ ಆಗಸದಿ ಹೊಳೆಯತೊಡಗಿತು ಮಿಂಚು […]

Back To Top