ಕವಿತೆ
ಮುಗಿಯದ ಪಯಣ
ವೀಣಾರಮೇಶ್
ಸಾವೇ ಕಾಡದಿರು ನನ್ನ
ಮುಗಿದಿಲ್ಲ ಇನ್ನೂ ಬದುಕುವ ಹಲವು
ಕಾರಣ
ಮನಸ್ಸಿಗಿದೆ ಇನ್ನೂ ದ್ವಂದ್ವ
ಅರ್ಥ ಆಗದ
ಮುಗ್ದ ಮನಸ್ಸುಗಳ ಜೊತೆ ಯುದ್ಧ ,.
ಆಸೆ ಆಮಿಷಗಳ
ಕತ್ತು ಹಿಸುಕಿ ಕಟ್ಟಬೇಕಿದೆ
ನನ್ನ ಸೌಧ
ಹೇಗೆ ಮುಗಿಯುವುದು
ನನ್ನ ಪಯಣ
ನನ್ನ ಜೇಬಿನ್ನೂ ಭಣ ಭಣ ತಡಕಾಡಿದರೂ ಸಿಗದು ಕಾಂಚಾಣ
ಪಾಪ ಪ್ರಜ್ಞೆಗಳು ಸುತ್ತುವರಿದು,ಮೋಸ,
ಭ್ರಷ್ಟಾಚಾರ ದಿಕ್ಕು ತಪ್ಪಿಸಿ
ಭಾವನೆಗಳೆಲ್ಲ ಸತ್ತು ಹೆಣವಾಗಿದೆ
ನೀನು ಮತ್ತೆ ಕಾಡದಿರು
ಸಾವೇ, ನಾನಿಲ್ಲಿ ಸುಟ್ಟು
ಕರಕಲಾಗಿದ್ದೀನಿ
ನನ್ನ ದಾರಿಗೆ ಅಡ್ಡ ಬರಬೇಡ ಎಲ್ಲದಕ್ಕೂ
ಹೇಳುವೆ ಸಕಾರಣ