ತೇಜಾವತಿ ಕಾವ್ಯಗುಚ್ಚ

ತೇಜಾವತಿ ಕಾವ್ಯಗುಚ್ಚ

beauty girl cry

ಕಾರಣ ಕೇಳದಿರಿ ನೀವು.. !

larmes

ಸಪ್ಪೆ ಮೊಗದ ಹಿಂದಿನ ಕಾರಣ ಕೆಳದಿರಿ ನೀವು
ದುಃಖದ ಕಟ್ಟೆಯೊಡೆದು
ನೋವಿನ ಕೋಡಿಹರಿದು
ಕಂಬನಿಯ ಪ್ರವಾಹ ಹರಿದೀತು….!

ಕ್ಷೇಮ ಕುಶಲೋಪರಿಯ ವಿಚಾರಿಸದಿರಿ ನೀವು
ಮುಳ್ಳುಹಾಸಿನ ಮೇಲೆ ನಡೆದು
ಬೆಂಕಿಯ ಕೆನ್ನಾಲಿಗೆಯಲಿ ಸಿಲುಕಿ
ಅರೆಬೆಂದಿರುವ ಪಾದಗಳಲಿ ನೆತ್ತರು ತುಳುಕಾಡೀತು…!

ಭವಿಷ್ಯದ ಗುರಿಯೇನೆಂದು ಪ್ರಶ್ನಿಸದಿರಿ ನೀವು
ತಮದ ಕೂಪದಲಿ ಮಿಂದು
ಕಣ್ಣೆದುರು ಹರಿದಾಡಿದ ನೆರಳು ಕಂಡು
ಮನಸು ಮತಿಭ್ರಮಣೆಗೆ ಒಳಗಾದೀತು.. !

ಕಲ್ಪನೆಯಾಚೆಗಿನ ವಾಸ್ತವವ ನೆನಪಿಸದಿರಿ ನೀವು
ಭರವಸೆಯ ಬೆಟ್ಟ ಕುಸಿದು
ನೆಮ್ಮದಿಯ ಕಣಿವೆ ಸವೆದು
ಕಂಡ ಕನಸುಗಳು ಕೊಚ್ಚಿ ಹೋದಾವು…!


ಎಷ್ಟು ದಿನ ಅಂತ ಉಪ್ಪಿನಕಾಯಿ ಆಗಿರಲಿ ನಾನು?

涙を流す女性

ಮೂಗಿಗೆ ಕಮ್ಮನೆ ಪರಿಮಳ ಬಂದೊಡನೆ ಬಾಯಲ್ಲಿ ನೀರೂರಿ ನಾಲಗೆ ಚಪ್ಪರಿಸಿ ನೆಕ್ಕುವರು…!

ಉಪ್ಪಿನಕಾಯಿ ಊಟದ ರುಚಿಗಷ್ಟೇ ಹೊರತು ಊಟಕ್ಕಲ್ಲ..
ಉಪ್ಪಿನಕಾಯಾಗಿ ನಾನಿಲ್ಲದಿದ್ದರೂ ಹೊಟ್ಟೆ ತುಂಬಾ ಉಣಬಹುದಲ್ಲದೆ
ಊಟವೇ ಇಲ್ಲದಿದ್ದರೆ..?!

ಉಪ್ಪಿನಕಾಯಾಗುವ ಕ್ಷಣಿಕ ಕೀರ್ತಿಗೆ ನಾನೇಕೆ ಭಾಜನವಾಗಲಿ..?
ಒಪ್ಪತ್ತಿಗಾದರೂ ಊಟವಾಗಬೇಕು ನಾನು
ಉಂಡ ಕರುಳಿಗೆ ತೃಪ್ತಿ ನೀಡಬೇಕು ಬಹುಕಾಲದವರೆಗೆ.

ರುಚಿಯೆಂದು ಅತಿಯಾಗಿ ಉಪ್ಪಿನಕಾಯನ್ನು ಸೇವಿಸಿದೆಯೋ
ಬಿಪಿ ಏರುವುದು ಗ್ಯಾರಂಟಿ.
ಜೊತೆಗೆ ಸರಣಿ ರೋಗರುಜಿನಗಳೂ ಫ್ರೀ..

ಬರಿದೇ ಊಟವಾದರೆ
ಸ್ವಲ್ಪಮಟ್ಟಿಗಾದರೂ ಅರೋಗ್ಯ ವೃದ್ಧಿಸುವುದು

ಮಿಂಚಿ ಮರೆಯಾಗುವ ಮಿಂಚುಹುಳಕ್ಕಿಂತ
ಮಾಗಿದ ರಸಭರಿತ ಹಣ್ಣಾಗಬೇಕು ನಾನು..
ನನ್ನ ಜೀವನ ಸಾರ್ಥಕವಾಗಬೇಕು

ಖಗ ಮೃಗ ಹದ್ದು ಗಿಡುಗಗಳ ಕಾಟದ ಆರ್ಭಟದಲ್ಲಿ
ಮಿಡಿಗಾಯಿ ಬಲಿಯುವುದಾದರೂ ಹೇಗೆ?
ಹೌದು.. ನಾನೀಗ ಅವಿತು ಕೂರಲೇಬೇಕು
ಎಲೆಯ ಮರೆಯೊಳಗೆ ಅನಿವಾರ್ಯವಾಗಿ

ಲೋಕಕ್ಕೆ ಕಣ್ಣಾಗಬೇಕಾದ ಹೆಣ್ಣಾಗಿರುವ
ನಾನಂತೂ ಉಪ್ಪಿನಕಾಯಿ ಆಗಲಾರೆ ಬಿಡಿ..,
ಹೂ ಹೀಚಾಗಿ ಕಾಯಾಗಿ ಬಲಿತು
ಮಾಗಿದ ಸತ್ವಯುತ ಹಣ್ಣಾಗಬಯಸುವೆ
ರಸಪುರಿ ಮಾವು ನಾನು….. !


4 thoughts on “ತೇಜಾವತಿ ಕಾವ್ಯಗುಚ್ಚ

  1. ಕೆಲವೊಮ್ಮೆ ಸಂಬಂದವಿರುತ್ತದೆ ಆದರೆ ಭಾವನೆ, ಒಲವು,ಕಾಳಜಿ ಇರುವುದಿಲ್ಲ, ಕೆಲವೊಮ್ಮೆ ಸಂಬಂಧವೇ ಇರುವುದಿಲ್ಲ ಆದರೆ ಅಲ್ಲಿ ಭಾವನೆ, ಒಲವು, ಕಾಳಜಿ, ಜವಾಬ್ದಾರಿ ಎಲ್ಲವೂ ಇರುತ್ತದೆ, ಇದೆ ತಾನೇ ದೇವರ ಆಟ ಅಂದರೆ,,,,,

  2. ಇದೆಂತಹುದು ಉಪ್ಪಿನಕಾಯಿ, ಮಾವಿನಹಣ್ಣು ಅಂದ್ಕೊಂಡು ಬರೆಯುವುದು, ಮೊದಲು subject selection ಗಟ್ಟಿಯಾಗಿರಬೇಕು, ಹುಡುಕಿದರೆ subject ಸಾವಿರ ಸಿಗುತ್ತದೆ, ಇಂಥ ಬರಹ ಬೇಕಿತ್ತಾ ನಿಮಗೆ,,,,

Leave a Reply

Back To Top