ಶಂಕರಾನಂದ ಹೆಬ್ಬಾಳ-ಗಝಲ್
ಕಾವ್ಯಸಂಗಾತಿ
ಶಂಕರಾನಂದ ಹೆಬ್ಬಾಳ
ಗಜಲ್
ಇಂದಿರಾ ಮೋಟೆಬೆನ್ನೂರ ಕವಿತೆ-ಗಜಲ್
ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ.
ಗಜಲ್
ಮಾಜಾನ್ ಮಸ್ಕಿ ಕವಿತೆ-ಸ್ಫೂರ್ತಿ
ಕಾವ್ಯ ಸಂಗಾತಿ
ಸ್ಫೂರ್ತಿ
ಮಾಜಾನ್ ಮಸ್ಕಿ
ಅರ್ಚನಾ ಯಳಬೇರು ಗಜಲ್
ಕಾವ್ಯ ಸಂಗಾತಿ
ಗಜಲ್
ಅರ್ಚನಾ ಯಳಬೇರು
ಪಾರಿಜಾತ-ಅಕ್ಷತಾ ಜಗದೀಶ್
ಕಾವ್ಯ ಸಂಗಾತಿ
ಪಾರಿಜಾತ
ಅಕ್ಷತಾ ಜಗದೀಶ್
ಅನುರಾಧಾ ಶಿವಪ್ರಕಾಶ್-ಜೀವ – ಭಾವ
ಕಾವ್ಯ ಸಂಗಾತಿ
ಅನುರಾಧಾ ಶಿವಪ್ರಕಾಶ್
ಜೀವ – ಭಾವ
ಹಮೀದಾ ಬೇಗಂ ದೇಸಾಯಿ ಗಜಲ್
ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ
ಗಜಲ್
ಪುಷ್ಪಾ ಮಾಳಕೊಪ್ಪ-ನಿಸ್ವಾರ್ಥ
ಕಾವ್ಯ ಸಂಗಾತಿ
ನಿಸ್ವಾರ್ಥ
ಪುಷ್ಪಾ ಮಾಳಕೊಪ್ಪ
ಕಾಡಜ್ಜಿ ಮಂಜುನಾಥ ಧರ್ಮದ ನಶೆ ಇಳಿವ ಮುನ್ನ !
ಕಾವ್ಯ ಸಂಗಾತಿ
ಧರ್ಮದ ನಶೆ ಇಳಿವ ಮುನ್ನ !
ಕಾಡಜ್ಜಿ ಮಂಜುನಾಥ
ಡಾ. ಪುಷ್ಪಾ ಶಲವಡಿಮಠ-ಧವಳ ಶಿಖರ
ಅವ್ವಾ!
ನಿನ್ನ ಪ್ರೀತಿಯ
ಸವಿಯುoಡು
ಬಿಸಿಲ ಬದುಕಿಗೆ
ಗರಿ ಮೂಡಿದೆ.
ನನ್ನ ನೀಳ ಕೂದಲ
ಸಿಕ್ಕು ಬಿಡಿಸಿ ಬಾಚಿ
ಮಮತೆಯ ಮಲ್ಲಿಗೆ ಮುಡಿಸಿದಾಗ
ಗುಳಿ ಕೆನ್ನೆಯಲ್ಲಿ ಇಣುಕಿದೆ
ಲಜ್ಜೆಯ ಭಾಷೆ
ಅವ್ವಾ!
ನೀನಿತ್ತ ಬಾಳ ಬುತ್ತಿ
ನಾಳೆಗಾಗಿಯೂ ಕಾಯ್ದಿಟ್ಟಿರುವೆ
ನಿನ್ನ ಮಡಿಲ ತೊಟ್ಟಿಲಲ್ಲಿ ಮಲಗಿದಾಗ
ನೀನು ಬೆರಳಿಂದ ತಲೆ ತಟ್ಟುತ್ತ
ಮೌನವಾಗಿ ಹಾಡಿದ ಜೋಗುಳ
ಎದೆಯಲ್ಲಿ ಬಚ್ಚಿಟ್ಟಿರುವೆ
ಅವ್ವಾ!
ನಾ ನಡೆದಷ್ಟು ದಾರಿಯ
ನೀ ತೋರಿದೆ
ಬದುಕು ಮುಕ್ಕಾಗದಂತೆ
ಬದುಕುವ ಕಲೆಯ ಹೇಳಿಕೊಟ್ಟೆ
ಬೇಸತ್ತು ಬಂದಾಗ ಮಡಿಲು ಕೊಟ್ಟೆ
ಅವ್ವಾ!
ನೀ ಅಂದರss
ಹತ್ತಿಯ ಹೂವಂಗss
ಇರು ನನ್ನ ನೆತ್ತಿಯ ಮ್ಯಾಗ
ಧವಳಶಿಖರ ಗಿರಿಯಂಗss
ಅವ್ವಾ!
ನೀ
ನನ್ನ
ಅವ್ವಾ.