ಮಾಜಾನ್ ಮಸ್ಕಿ ಕವಿತೆ-ಸ್ಫೂರ್ತಿ

ಕಾವ್ಯ ಸಂಗಾತಿ

ಸ್ಫೂರ್ತಿ

ಮಾಜಾನ್ ಮಸ್ಕಿ

ನಿನ್ನೊಳು ನಾನು
ನನ್ನೊಳು ನೀನು

ಭಾವ ತೀವ್ರತೆಯ
ಉತ್ಸಾಹ ಚಿಲುಮೆ
ಶಶಿಯ ತಂಪಿಗೆ
ಸಮುದ್ರ ಉಕ್ಕಿ
ಹರಿಯಲು ಹೇಳಬೇಕೇ

ನಲ್ಮೆಯ ಒಪ್ಪು
ಅಪ್ಪಿಗೆ ಹಿತ
ದೃಷ್ಠಿಗೆ ತೋರುವುದೇ

ಪ್ರೀತಿಯ ಮುತ್ತು
ಬಚ್ಚಿಟ್ಟ ಕಪ್ಪೆಚಿಪ್ಪಿಗೆ
ಕಲಿಸಬೇಕೆ

ಹೃದಯಾರವಿಂದದಿ
ಅರಳಿ ಹಬ್ಬಿ ಹರಡುವ
ಸುಗಂಧವ ತಡೆಯುವರೆ

ಆಸ್ವಾದಿಸುವ ಮನಬೇಕು


ಮಾಜಾನ್ ಮಸ್ಕಿ

One thought on “ಮಾಜಾನ್ ಮಸ್ಕಿ ಕವಿತೆ-ಸ್ಫೂರ್ತಿ

Leave a Reply

Back To Top