ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ
ಗಜಲ್
.
ಕಂಗಳ ಹನಿಯು ಜಾರುತಿದೆ ಏನೆಂದು ಜವಾಬು ಕೊಡಲಿ
ಕೆನ್ನೆಯ ಕೆಂಪು ಮಾಸುತಿದೆ ಏನೆಂದು ಜವಾಬು ಕೊಡಲಿ
ಗಂಟಲು ಉಬ್ಬಿ ನಡುಗಿ ಉಡುಗಿದೆ ಕೊರಳ ದನಿ
ಮನ ನಿನ್ನ ನೆನೆದಿದೆ ಏನೆಂದು ಜವಾಬು ಕೊಡಲಿ
ಹೃದಯ ಭಾರ ಆಗಿದೆ ಹಾಡಲಾರದೆ ಪ್ರೇಮಗೀತೆಯ
ಭಾವ ಕೋಗಿಲೆ ಅಳುತಿದೆ ಏನೆಂದು ಜವಾಬು ಕೊಡಲಿ
ಚಪ್ಪರದ ಮಲ್ಲಿಗೆಯ ಬಳ್ಳಿ ತೂಗಿದೆಯಲ್ಲಾ ಗಾಳಿಗೆ ಬಳುಕುತ
ಮೊಗ್ಗು ಅರಳದೆ ನರಳಿದೆ ಏನೆಂದು ಜವಾಬು ಕೊಡಲಿ
ಬೇಗಂ ಕಾದಿಹಳು ನಿನಗಾಗಿ ಒಲವಿನ ಹೂಮಡಿಯ ಹಾಸಿ
ತಿಂಗಳ ಬೆಳಕು ಕರಗಿದೆ ಏನೆಂದು ಜವಾಬು ಕೊಡಲಿ