ಕಾವ್ಯ ಸಂಗಾತಿ
ಪಾರಿಜಾತ
ಅಕ್ಷತಾ ಜಗದೀಶ್
ಕೆಂಪು ತುಟಿಯ ಸುಂದರಿ
ಹಾಲುಗಲ್ಲದ ನಗು ಚೆಲ್ಲಿ
ಉದುರುದುರಿ
ಮಣ್ಣ ಸೇರುತಿರುವಳು
ಪಾರಿಜಾತವೆಂಬ
ನಾಮಾಂಕಿತದಲ್ಲಿ……
ಒಂದಿಷ್ಟು ಪುಷ್ಪವದು
ಪೂಜೆಗೆ ಅಣಿಯಾಯಿತು…
ಮತ್ತಷ್ಟು ಹೂವದು
ನಾರಿಯ ಮುಡಿಯೇರಿ
ನಸುನಕ್ಕಿತು….
ರವಿ ಬರಲು ನಲುಗಿದೆ
ಬಾನ ಚಂದ್ರಗೆ ತಲೆಬಾಗಿದೆ..
ಕೃಷ್ಣನ ಮನದಲ್ಲಿ
ನೆಲೆಯಾಗಿ ನಿಂತೆ…
ಎಷ್ಟೇ ಮೆರೆದರೆನಂತೆ
ಮಣ್ಣಲ್ಲಿ ಮಣ್ಣಾಗಲೇ ಬೇಕೆಂಬ
ನೀತಿ ಸಾರುವಂತಿದೆ
ಓ ಪಾರಿಜಾತವೇ ನಿನ್ನ ನಿಲುವು..
ಮಧುರ ಸ್ಪರ್ಶದ
ಸುವಾಸನೆ ಭರಿತ ಪುಷ್ಪವೇ
ಎಲ್ಲೆಲ್ಲೂ ಹರಡಿದೆ
ನಿನ್ನದೇ ಪರಿಮಳ
ನಿನ್ನಂದಕೆ ನೀನೆ ಸರಿಸಾಟಿ
ಓ ಪಾರಿಜಾತ ಪುಷ್ಪವೇ…..
ಬದುಕಿನ ಪಾಠವ ಪಾರಿಜಾತದಿ ತೋರಿದ ತಮಗೆ ವಂದನೆಗಳು