ಕಾಡಜ್ಜಿ ಮಂಜುನಾಥ ಧರ್ಮದ‌ ನಶೆ ಇಳಿವ ಮುನ್ನ !

ಕಾವ್ಯ ಸಂಗಾತಿ

ಧರ್ಮದ‌ ನಶೆ ಇಳಿವ ಮುನ್ನ !

ಕಾಡಜ್ಜಿ ಮಂಜುನಾಥ

ಧರ್ಮದ ನಶೆ ಇಳಿಯುವ ಮುನ್ನ
ನಿಮ್ಮ ಮನೆಯ ವಾಸ್ತವ ಹರಿಯೋ ಚಿನ್ನ

ಧರ್ಮದ‌ ಹೆಸರಲ್ಲಿ ನಡೆವ ದೊಂಬರಾಟ ತಿಳಿ
ಬಲಿಯಾಗುವೇ ಮುನ್ನ
ತಂದೆತಾಯಿಯ ಕಷ್ಟವನ್ನು ಇಣುಕಿ ನೋಡು
ರನ್ನ

ಕುಟುಂಬದ ಜವಾಬ್ದಾರಿ ಮರೆತು ಬಿದಿಗಿಳಿವ ಮುನ್ನ
ಅನ್ನ ಬಟ್ಟೆ ಹಾಕಿ ಸಲುಹಿದ ಜೀವಕೆ ವಿಷ ನೀಡದಿರು ಚಿನ್ನ

ರಾಜಕೀಯದ ಅಗ್ನಿಯಲಿ ಅಕ್ಕಿಯಾಗಿ ಬೇಯುವ ಮುನ್ನ
ನಿನಗಾಗಿ ಹಗಲಿರುಳು ಬೆಂದ ಜೀವಗಳಿಗೆ ನೆರಳಾಗು ಸುಮ್ನ

ಧರ್ಮದ ಗುಡುಗು ಸಿಡಿಲಿಗೆ ಬಲಿಯಾಗಿ
ಹೆಣವಾಗದಿರು
ಶಿಕ್ಷಣವ ಪಡೆದು ಸುಸಂಸ್ಕೃತನಾಗಿ ಬದುಕು ನಡೆಸುತಿರು

ಹೆತ್ತವರ ಬಿಸಿಯುಸಿರು ನಿನ್ನ ಭವಿಷ್ಯದ ನೆತ್ತರು
ನಿನಗಾಗಿ ರಕ್ತಹರಿಸಿದ ಎದೆಗೆ ಚಿತೆಯಾಗದಿರು
ತನ್ನೊಡಲ ಕನಸುಗಳ ನಿನ್ನಲ್ಲಿ ಕಾಣುವ ಹೆತ್ತವರು
ನಿನ್ನಂತರಂಗದಲಿ‌ ಬೀಜವನ್ನು ಬಿತ್ತಿ ಬೆಳೆಗಾಗಿ ಕಾಯುವರು

ನಾವು ನಾವೆನ್ನುವ ಮನಗಳಿಗೆ ಅಣೆಕಟ್ಟೆಯಾಗು
ಜಾತಿ ಧರ್ಮದ ಸೊಂಕಿನ ನಾಲಿಗೆಗೆ
ಮೌನಿಯಾಗು
ಬಹುತ್ವದ ಭಾರತದ ಭಾವೈಕ್ಯತೆಯ ಪ್ರಜೆಯಾಗು
ಧರ್ಮದ ನಶೆಗೆ ಮಣ್ಣಾಗುವ ಮುನ್ನ
ಮಾನವನಾಗು ಮಾನವನಾಗು !!!


One thought on “ಕಾಡಜ್ಜಿ ಮಂಜುನಾಥ ಧರ್ಮದ‌ ನಶೆ ಇಳಿವ ಮುನ್ನ !

  1. ತುಂಬಾ ಚೆನ್ನಾಗಿದೆ ಸಾರ್

Leave a Reply

Back To Top