ಕಾವ್ಯ ಸಂಗಾತಿ
ಗಜಲ್
ಅರ್ಚನಾ ಯಳಬೇರು
ಬೇವಿನ ಬತ್ತಳಿಕೆಯಲ್ಲಿ ನಗುವ ಶರವಾದೆ ನೀನಮ್ಮ
ನಿನ್ನುದರದ ಕೂಸುಗಳಿಗೆ ನಿತ್ಯ ವರವಾದೆ ನೀನಮ್ಮ
ಸಾಗಿಹೆ ನೀನು ಕಷ್ಟಗಳ ಕೋಟೆಯ ಭೇದಿಸುತಲಿ
ಕಾಡುವ ಪ್ರೀತಿ ಕ್ಷುಧೆಗೆ ಪೀಯೂಷವಾದೆ ನೀನಮ್ಮ
ಕ್ಲೇಷಗಳ ಬಿಸುಪಲಿ ಕ್ಷೀಣಿಸದ ಆರುಮೆಯು ನಿಂದು
ಶೈಶವದ ಶರಧಿ ದಾಟಿಸುವ ನಾವೆಯಾದೆ ನೀನಮ್ಮ
ಒಲವ ಧೀರ್ಘಿಕೆ ಹರಿಸಿ ಹದುಳವಾಗಿಸಿದೆ ಬದುಕು
ಅಕ್ಷಮ್ಯಗಳ ಮನ್ನಿಸುತಲಿ ದಿವಿಜೆಯಾದೆ ನೀನಮ್ಮ
ಪ್ರಾರಾಬ್ಧಗಳ ಶೃಂಕಲೆಗೆ ಹೊಣೆ ಯಾರಿಲ್ಲ ಅರ್ಚನಾ
ಎನ್ನ ಪಾಪಾತ್ಮ ಬಸಿರಲಿ ಪವಿತ್ರ ತಾಯಿಯಾದೆ ನೀನಮ್ಮ