ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಕರ್ನಾಟಕ ರಾಜ್ಯ ಬರಹಗಾರರ ಸಂಘದ ಕರ್ನಾಟಕ ವೈಭವ ಕಾರ್ಯಕ್ರಮ
ಕನ್ನಡ ಬರಹಗಾರರು ಅಧ್ಯಯನಶೀಲರು ಸೃಜನಶೀಲರು: ಡಾ.ಸಿ.ಸೊಮಶೇಖರ್

ಬರಹಗಾರರು ಎಂದಾಕ್ಷಣ ನಮಗೆ ಸಾಮಾನ್ಯವಾಗಿ ಒಂದು ಗೌರವದ ಬಾವ ಬರುತ್ತದೆ. ಮೂಲತ: ಬರಹಗಾರರು ಅಧ್ಯಯನಶೀಲರಾಗಿರುತ್ತಾರೆ, ಸೃಜನಶೀಲರಾಗಿರುತ್ತಾರೆ, ಎಲ್ಲಕ್ಕಿಂತ ಮಿಗಿಲಾಗಿ ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿಯಾಗಿರುತ್ತಾರೆ. ಅವರ ಬರಹ ಒಂದು ಪ್ರಭಾವ ವಲಯವನ್ನೇ ಸೃಷ್ಟಿ ಮಾಡುತ್ತದೆ. ಕತ್ತಿಗಿಂತ ಲೇಖನಿ ಶೇಷ್ಠ ಪ್ರಭಾವಪೂರ್ಣ. ಒಂದು ಕತ್ತಿ ಗುರಾಣಿಗಿಂತಲೂ ಬಹಳ ಪ್ರಖರವಾದ ಸಾಧನ ಯಾವುದಾದರೂ ಇದ್ದರೆ ಅದು ನೀವು ಹಿಡಿಯುವ ಲೇಖನಿ ಎಂದು ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷರು ಡಾ. ಸಿ.ಸೋಮಶೇಖರ್ ತಿಳಿಸಿದರು.
ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನಹಡಗಲಿ ಹಾಗೂ ಬೆಂಗಳೂರು ಜಿಲ್ಲೆ  ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ  ಜಿಲ್ಲಾ ಘಟಕಗಳ ಸಹಯೋಗದಲ್ಲಿ ಬೆಂಗಳೂರು ಯಶವಂತಪುರ ಜ್ಯೋತಿ ಪದವಿಪೂರ್ವ ಕಾಲೇಜಿನಲ್ಲಿ  ಭಾನುವಾರ ನವೆಂಬರ್ ೧೫ರಂದು ನಡೆದ  ಕರ್ನಾಟಕ ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಒಳ್ಳೆಯ ಶ್ರೇಷ್ಠ ಯೋಧರು  ಕನ್ನಡಿಗರು. ವೀರ ಯೋಧರು ಇದ್ದಂತಹ ನಾಡಿದು, ರಾಜರು ಪ್ರಜೆಗಳ ಕಲ್ಯಾಣ ಬಯಸಿ ಆಳಿದರು ಎರಡು ಸಾವಿರ ಇತಿಹಾಸವುಳ್ಳ ಕನ್ನಡ ನಾಡು ನುಡಿಯ ವೈಭವ ಕುರಿತು ಉತ್ತಮ ಉಪನ್ಯಾಸ ನೀಡಿದರು.
ಸಾಹಿತಿ ಗೊರೂರು ಅನಂತರಾಜು ಮಾತನಾಡಿ ಸಾಹಿತ್ಯ ಸಂಘಟನೆಯಾಗಿ ಬೆಳೆದ ರಾಜ್ಯ ಬರಹಗಾರರ ಸಂಘವು ನಂತರದಲ್ಲಿ ಸಾಂಸ್ಕೃತಿಕ ಚಟುವಟಿಕೆಯನ್ನು ಪ್ರೋತ್ಸಾಹಿಸಿ  ಬೆಂಬಲಿಸುತ್ತಿದೆ. ಕವಿ ಸಾಹಿತಿಗಳ ಪುಸ್ತಕ ಬಿಡುಗಡೆ, ನಾಟಕ ನೃತ್ಯ, ಗಾಯನ ಕಾರ್ಯಕ್ರಮ ಏರ್ಪಡಿಸಿ ಉದಯೋನ್ಮುಖ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ  ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮೈಸೂರು ವಿಜಯಲಕ್ಷಿö್ಮ ಎಸ್. ಅವರ ಗಝಲ್ ಲೋಕದಲ್ಲಿ ವಿಜಯ ವಿಹಾರ, ಮುಕ್ತಕ ಮಂದಾರ ಮಾಲೆ, ಗೊರೂರು ಜಮುನ ಅವರ ಅನುರಣನ, ರಾಜಣ್ಣ ರಾಶಿ ಅವರ ಒಲವೇ ನೀ ಹೀಗೇಕೆ, ಆನಂದಕುಮಾರ ಯಾದವ್ ಅವರ ಅಕ್ಷರದೊಳಗಿನ ಆತ್ಮ, ಬಾಲಮನದ ಬಾನಂಗಳ, ಮಧುನಾಯ್ಕ ಲಂಬಾಣಿ ಸಂಪಾದಿತ ವಾತ್ಯಲ್ಯಹರಣ ಕೃತಿಗಳನ್ನು ಬಿಡುಗಡೆ ಮಾಡಿ  ಸಾಹಿತಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾಘಟಕದ ಅಧ್ಯಕ್ಷರು ಚಂದ್ರಶೇಖರ್ ಹಡಪದ ಮಾತನಾಡಿ ಪುಸ್ತಕ ರಚನೆಯ ಹಿಂದೆ ಪ್ರತಿ ಲೇಖಕನ ತಪಸ್ಸು ಆಲೋಚನೆ ಶ್ರಮ ಶ್ರದ್ಧೆ ಇರುತ್ತದೆ. ಅದು ಕೇವಲ ಹಾಳೆ ಮಸಿಯ ಆಟವಲ್ಲ ಒತ್ತಡದ ಬದುಕಿನಲ್ಲಿ ಬರಹ ಒಂದು ಧ್ಯಾನದಂತೆ, ಒಳ್ಳೆಯ ಪುಸ್ತಕದ ಓದು ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಹಕಾರಿ ಎಂದರು.

ಸಂಘದ ರಾಜ್ಯಾಧ್ಯಕ್ಷರು ಮಧುನಾಯ್ಕ ಲಂಬಾಣಿ ಮಾತನಾಡಿ ಕನ್ನಡ ಸಾರಸ್ವತ ಲೋಕ ಅತ್ಯಂತ ವೈಭವಪೂರ್ಣವಾಗಿರುವಂಥದ್ದು. ಅದನ್ನು ಮುಂದುವರಿಸಿಕೊAಡು ಹೋಗುವ ಜವಾಬ್ದಾರಿ ಇಂದಿನ ಯುವ ಬರಹಗಾರರ ಮೇಲಿದೆ. ಸಂಘವು ಸಾಹಿತ್ಯ ಕ್ಷೇತ್ರಕ್ಕೆ  ಸೀಮಿತವಾಗಿಲ್ಲ. ಗಾಯನ ಚಿತ್ರಕಲೆ ರಂಗಗೀತೆ, ಮಕ್ಕಳಿಗೆ ಚಿಣ್ಣರ ಚಿಲಿಪಿಲಿ ಹೀಗೆ ಸೃಜನಾತ್ಮಕ ಕಲೆಗಳಲ್ಲಿ ಎಲೆಮರೆಕಾಯಿಯಂತಿರುವ ಕಲಾವಿದರನ್ನು ಗುರುತಿಸಿ ಪ್ರತಿವರ್ಷ ಸನ್ಮಾನಿಸಲಾಗುತ್ತಿದೆ ಎಂದರು.
 ಸಂಘದ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಸಿ.ಆರ್. ಚಿಕ್ಕಮಗಳೂರು ಸಂಘದ ಕಾರ್ಯ ಚಟುವಟಿಕೆಯ ಸವಿಸ್ತಾರ ಮಾಹಿತಿ ತಿಳಿಸಿದರು.  ಎಸ್.ಆರ್.ಎಸ್.ವಿದ್ಯಾಸಂಸ್ಥೆಯ ಮುಖ್ಯಸ್ಥರು ಶ್ರೀಮತಿ ಎಸ್.ಉರ್ಮಿಳಾ ರಂಗನಾಥ್ ತಮ್ಮ ಕಾಲೇಜಿನಲ್ಲಿ ಇಂತಹ ಒಂದು ಉತ್ತಮ ಕನ್ನಡ ನಾಡು ನುಡಿ ಪ್ರೇಮದ ಕಾರ್ಯಕ್ರಮ ಹಮ್ಮಿಕೊಂಡಿದ್ದಕ್ಕೆ ಸಂತೋಷ ಹಂಚಿಕೊAಡರು. ಕಾಲೇಜಿನ ಪ್ರಾಂಶುಪಾಲರು ಎನ್.ಮಂಜುನಾಥ್, ಬೆಂಗಳೂರು ಜಿಲ್ಲಾಧ್ಯಕ್ಷರು ಆನಂದಕುಮಾರ್ ಯಾದವ್, ತುಮಕೂರು ಜಿಲ್ಲಾಧ್ಯಕ್ಷರು ಹನುಂತೋಜಿರಾವ್, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರು ಭಾಗ್ಯ ನಾಗರಾಜ ಉಪಸ್ಥಿತರಿದ್ದರು. ಸಹ ಕಾರ್ಯದರ್ಶಿ ಪ್ರಶಾಂತ ಕುಲಕರ್ಣಿ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜನೆಯಲ್ಲಿ ನಡೆದ ಕೃಷ್ಣ ಸಂಧಾನ ನಾಟಕ ಮತ್ತು ಸುಗಮ ಸಂಗೀತ ಕಾರ್ಯಕ್ರಮ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. 


About The Author

Leave a Reply

You cannot copy content of this page

Scroll to Top