ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಎಲ್ಲ ಇಲ್ಲಗಳ ನಡುವೆ ಕಟ್ಟಬೇಕಿದೆ ಮತ್ತೆ
ಒಡೆದ ಮನಸ್ಸುಗಳ ಹಿರಿಯರು ಕಂಡ ಕನಸುಗಳ

ಉಳಿಸಬೇಕಿದೆ ಬೆಳೆಸಬೇಕಿದೆ
ಜನಪದ ಸಿರಿ ಸಂಪದವ
ಪಸರಿಸಬೇಕಿದೆ
ನೆಲದ ನೆನಪುಗಳ

ನೊಂದ ಮನದ ನೋವುಗಳಿಗೆ
ಸಂತಸದ ಮುಲಾಮಿನ ಲೇಪವಾಗಿ
ನಿಂತ ನೀರಿನ ಕೊಳೆಗೆ
ಹರಿಯುವ ದಾರಿಯಾಗಿ
ಎಲ್ಲರನ್ನು ಸಮತೆಯಿಂದ ಜೊತೆ ಕರೆದು ಸಾಗಬೇಕಿದೆ ನಮ್ಮ ನೆಲದ ಸಾಂಸ್ಕೃತಿಕ ಸಿರಿಯ ತೇರನೆಳೆಯಬೇಕಿದೆ!

ಪಾಳು ಬಿದ್ದ ಹೊಲದಲ್ಲಿ
ಕಳೆಯನೆಲ್ಲ ಕಿತ್ತು
ಒಲವಿನ ಮಳೆಗರೆದು
ಹೊನ್ನ ಬಿತ್ತಬೇಕಿದೆ!
ಮತ್ತೆ ಹೊನ್ನ ಬೆಳೆಯಬೇಕಿದೆ!

ಅದಕ್ಕೆ ನಾವೆಲ್ಲ ಕೈಜೋಡಿಸಬೇಕಿದೆ ದುಡಿಯಬೇಕಿದೆ ದಣಿಯಬೇಕಿದೆ ಹೊಲಕ್ಕೆಲ್ಲ ಹೊನ್ನ ಬಿತ್ತಲು


About The Author

Leave a Reply

You cannot copy content of this page

Scroll to Top