ಕಾವ್ಯ ಸಂಗಾತಿ
ಡಾ. ಲತಾ ಎ. ಆರ್ ಬಾಳೆಹೊನ್ನೂರು
“ದೀಪಾವಳಿ”


ದೀಪಾವಳಿಯ ಸಂತಸದ ಬೆಳಕಿನ ಹಬ್ಬದಲ್ಲಿ
ಸಿಹಿ ಹೋಳಿಗೆಯ ಸವಿ ಊಟದಲ್ಲಿ
ಸಿಡಿದ ಸಿಡಿ ಪಟಾಕಿಯ ಶಬ್ದದಲ್ಲಿ
ಕಣ್ಣಲ್ಲಿ ತುಂಬಿಸಿದೆ ಪ್ರೀತಿ ಅರಮನೆಯಲ್ಲಿ
ದೀಪಗಳ ಸಾಲು ಸಾಲು ಹಣತೆ ಗಳಲ್ಲಿ
ಸುಂದರ ಪ್ರತಿಬಿಂಬ ನನ್ನ ಮನಸಿನಲ್ಲಿ
ಹೊಳಪಿನ ಛಾಯೆ ಮರೆಯಲಾರೆ ಬದುಕಿನಲಿ
ಅಚ್ಚರಿಯ ಮೂಡಿಸಿದೆ ಬಾಳ ಬೆಳದಿಂಗಳಲಿ
ಹೊಸತನದ ಹೊಸ ಆಸೆ ಭರವಸೆಯಲಿ
ಮನದಿ ಮೂಡಿಸಿದೆ ಮಲ್ಲಿಗೆಯ ಘಮದಲಿ
ಬಿಂಬಿಸಿದೆ ಹೊಸರಾಗ ಹೃದಯದಲಿ
ಜೊತೆ ನಿಂತೆ ಆರದ ದೀಪದಲಿ
ನವಜೀವನದ ತಿಳಿ ತಂಗಾಳಿ ಬೀಸಿದಂತೆ
ಚೈತನ್ಯದ ಚಿಲುಮೆ ಬಾಳಲಿ ಚಿಮ್ಮಿದಂತೆ
ಜೊತೆಯಾಗಿರು ಮರೆಯದ ಮಾಣಿಕ್ಯದಂತೆ
ಬರಿದಾದ ಬದುಕಲಿ ಜ್ಯೋತಿಯ ಬೆಳಕಂತೆ.
———-
ಡಾ. ಲತಾ ಎ. ಆರ್ ಬಾಳೆಹೊನ್ನೂರು



