ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ನನ್ನ ಬಾಳಿನ ದಾರಿಗೆ ನೀವೇ ಬೆಳಕು
ನಿಮ್ಪ್ರಿತಿಯೇ ನನ್ನೆದೆಯ ನಿತ್ಯದ ಬದುಕು
ಕಂಡ ಕನಸುಗಳಿಗೆ ರೆಕ್ಕೆ ಕಟ್ಟಿದವರು
ನನ್ನೆಲ್ಲಾ ಗೆಲುವಿನ ಹಿಂದಿನ ಶಕ್ತಿಯು

​ನನ್ನ ಪ್ರತಿ ಹೆಜ್ಜೆಯಲ್ಲೂ ನೆರಳಾಗಿ ನಿಂತಿರಿ
ಸೋತಾಗ ಕೈ ಹಿಡಿದು ಧೈರ್ಯವ ತುಂಬಿದಿರಿ
ನನ್ನ ಬೆಳವಣಿಗೆಯೇ ನಿಮ್ಮ ಸಂತಸವಾಯಿತು
ನಿಮ್ಮ ತ್ಯಾಗ, ಪ್ರೀತಿ ನನ್ನ ಬದುಕನ್ನು ಬೆಳಗಿತು

​ಮಾತುಗಳಿಗಿಂತ ಮಿಗಿಲಾದ ಮಮತೆಯ ಸಾಗರ
ನನ್ನ ಬಾಳಿನ ಗುಡಿಯ ಸುಂದರ ಗೋಪುರ
ಕಣ್ಣ ರೆಪ್ಪೆಯಂತೆ ನನ್ನನು ಕಾಯುವ ಜೀವ
ನಿಮ್ಮ ಪ್ರೀತಿಯ ಮುಂದೆ ಎಲ್ಲವೂ ಮೌನವೇ?

​ಕಳೆದ ಪ್ರತಿ ಕ್ಷಣವೂ ಮಧುರ ನೆನಪಿನ ಬುತ್ತಿ
ಮುಂದಿನ ಪಯಣಕ್ಕೂ ನೀವೇ ನನ್ನ ಸ್ಫೂರ್ತಿ
ಜನುಮ ಜನುಮಕ್ಕೂ ನೀವೇ ನನ್ನ ಸಂಗಾತಿ
ನನ್ನೊಲವಿನ ಜೀವಕೆ ಹೃದಯ ಪ್ರೇಮದಾರುತಿ


About The Author

Leave a Reply

You cannot copy content of this page

Scroll to Top