ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಚಂದ್ರನಿಲ್ಲ, ಚುಕ್ಕಿಗಳಿಲ್ಲ ,
ಬಹುಷಃ ಬಾನಿಗೆ ಉಸಿರುಗಟ್ಟುತಿರಬೇಕು
ಹುಣ್ಣಿಮೆಯಿಲ್ಲ,ಬೆಳದಿಂಗಳಿಲ್ಲ,
ಬಹುಷಃ ಇರುಳಿಗೆ ಇಕ್ಕಟ್ಟೆನಿಸುತಿರಬೇಕು

ಮಳೆ ಸುರಿಯದೇ ಧರೆಯ
ಹೃದಯ ಹಸಿಯಾಗಲು ಸಾಧ್ಯವೇ
ಸಂತಸವಿಲ್ಲ, ಸುಖವಿಲ್ಲ,
ಸಂಗಾತಿ ಇಲ್ಲದ ಬಾಳಿಗೆ ಬರಗಾಲವೆನಿಸುತಿರಬೇಕು

 ಒಲವಿನ ಓಲೆ ಬರೆದು,
ಒಡಲೊಳಗೆ ಬಚ್ಚಿಟ್ಟುಕೊಂಡರೇ ಹೇಗೆ
ಸಂದೇಶವಿಲ್ಲ, ಸಂಪ್ರೀತಿಯಿಲ್ಲ,
ಸಾಕಿ ಇರದ ಶಹರಿಗೆ ಶೋಕವೆನಿಸುತಿರಬೇಕು

ಬೇಡಿದ್ದೆಲ್ಲಾ ಹಣೆಬರಹದಿ
ಬರೆದಿದ್ದರೇ ಹೇಗಿತ್ತು ಹೇಳು
ಸನಿಹವಿಲ್ಲ, ಸಂಭಾಷಣೆಯಿಲ್ಲ
ಮಾತಾಗದ ಮೌನಕೆ ಮರಣವೆನಿಸುತಿರಬೇಕು

ಏನಿದ್ದರೇನು ವಾಣಿ ನಿನ್ನನರಿಯುವ
ಮನ ಜೊತೆಗಿರದಿರೆ
ಕನಸಿಲ್ಲ, ಕಲ್ಪನೆಯಿಲ್ಲ,
ಪದಗಳು ಕಾಣದ ಪುಟಕೆ
ಪ್ರಮಾದವೆನಿಸುತಿರಬೇಕು


About The Author

1 thought on “ವಾಣಿ ಯಡಹಳ್ಳಿಮಠ ಅವರ‌ ಗಜಲ್”

Leave a Reply

You cannot copy content of this page

Scroll to Top