ಕಾವ್ಯ ಸಂಗಾತಿ
ಬಾಗೇಪಲ್ಲಿ
ಗಜಲ್


ಕಷ್ಟಗಳು ಒಮೊಮ್ಮ ಕವಿತೆಯ ಮೂಡಿಸುತ್ತೆ
ನೋವುಗಳು ಸಹ ಹೊಸ ಕವನ ಅರಳಿಸುತ್ತೆ
‘ಉಂಗರ ವಿಲ್ಲದ ಬೆರಳು’ ಕಂಡರು ಮಲ್ಲಿಗೆ ಕವಿ
ಬಡತನದ ಬೇಗೆಯದು ಸಾಲನು ಬರೆಯಿಸುತ್ತೆ
‘ಒಲವೆ ನಮ್ಮ ಬದುಕು’ ಕವಿತೆಗೆ ಹಾದಿ ಆಯ್ತು
ನೋವ ನುಂಗಿದಾಗದು ಬಹುಶಃ ಹೊಳೆದಿರುತ್ತೆ
ಸರಸತಮ್ಮ ಮುನಿದದ್ದ ಕಂಡಿದ್ದು ಹೇಗೆ ಸಾದ್ಯ
ಅನಕ್ಷರಸ್ಥ ಭಾವ ಕವಿಯಲಿ ಹೊಮ್ಮಿಸಿರುತ್ತೆ.
ಕೃಷ್ಣಾ! ಉದರ ನಿಮಿತ್ತ ಬಹುಕೃತ ವೇಶ ಗಾದೆ
ಕವಿತನವಿಲ್ಲದ ಬದುಕನು ಮುಂದೆ ದೂಡಿರುತ್ತೆ
ಬಾಗೇಪಲ್ಲಿ 19.11.26
(ಕನ್ನಡ ಕವಿವರ್ಯರ ನೆನೆಯುತ್ತಾ)
” ನೋವಿನ ತೊದಲು ಕಾವ್ಯಾಕೆ ಮೊದಲು ” ನನ್ನ ಗುರುಸಮಾನರ ಮೊದಲ ಪ್ರತಿಕ್ರಿಯೆ.



